ಶಿವಮೊಗ್ಗ, ಮಾರ್ಚ್ 20, :
ಜಿಲ್ಲಾ ತರಬೇತಿ ಕೇಂದ್ರ(ಆರೋಗ್ಯ), ಶಿವಮೊಗ್ಗ ಇಲ್ಲಿಗೆ ಆರೋಗ್ಯ ಶಿಕ್ಷಣಾಧಿಕಾರಿ(ಹೆಚ್ಇಓ) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯ ವಯಸ್ಸು 60 ರಿಂದ 65 ವರ್ಷಗಳ ಒಳಗಿದ್ದು, ಹಿರಿಯ ಆರೋಗ್ಯ ಸಹಾಯಕರು ಅಥವಾ ಇನ್ನೂ ಹೆಚ್ಚಿನ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರಬೇಕು. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ನಿರ್ವಹಿಸಿದ ಹಾಗೂ ತರಬೇತಿ ನೀಡಿದ ಅನುಭವ ಮತ್ತು ಸಾಮಥ್ರ್ಯವಿರಬೇಕು.
ಅರ್ಜಿಯನ್ನು ಜಿಲ್ಲಾ ತರಬೇತಿ ಕೇಂದ್ರ(ಆರೋಗ್ಯ), ಶಿವಮೊಗ್ಗ ಇಲ್ಲಿಗೆ ದಿನಾಂಕ: 03-04-2023 ರೊಳಗೆ ಸಲ್ಲಿಸಬೇಕೆಂದು ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರು ತಿಳಿಸಿದ್ದಾರೆ.