ಶಿವಮೊಗ್ಗ, ಅಕ್ಟೋಬರ್-24 : ಹಿರಿಯ ನಾಗರೀಕರನ್ನು ವೃದ್ಧಾಶ್ರಮಕ್ಕೆ ತಳ್ಳದೆ ಪ್ರೀತಿ ಹಾಗೂ ಗೌರವದಿಂದ ನೋಡಿಕೊಳ್ಳುವ ಸಮಾಜವನ್ನು ನಿರ್ಮಿಸುವ ಜವಾಬ್ಧಾರಿ ಇಂದಿನ ಯುವಜನರ ಮೇಲಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ನಗರದ ಚೈತನ್ಯ ಸಭಾಂಗಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗೆ ಇರುವ ಕಾನೂನುಗಳ ಕುರಿತು ಅರಿವು ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಹಿತ ರಕ್ಷಣೆಗೆ ಕಾನೂನುಗಳಿದ್ದು ಅನಿವಾರ್ಯ ಪರಿಸ್ಥಿತಿಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ಮತ್ತು ಎಲ್ಲಾ ಇಲಾಖೆಗಳು ಸಹ ಹಿರಿಯ ನಾಗರಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾನೂನು ಸೇವೆಗಳ ಪ್ರಾಧಿಕಾರ ನೊಂದ ಹಿರಿಯ ನಾಗರಿಕರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲು ಸಿದ್ಧವಿದೆ ಎಂದರು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಡಿ. ಎನ್. ಹಾಲಸಿದ್ದಪ್ಪ ಮಾತನಾಡಿ ತಂದೆ ತಾಯಿಯರನ್ನು ದೇವರೆಂದು ಕರೆಯುವ ನಮ್ಮ ಸಂಸ್ಕøತಿಯನ್ನು ನಾವು ಅರಿತು ಸಾಗಿದರೆ ಹಿರಿಯ ನಾಗರಿಕರ ಹಿತ ರಕ್ಷಣೆಗೆ ಯಾವ ಕಾನೂನುಗಳ ಅಗತ್ಯ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಯುವಜನರು ಉದ್ಯೋಗಕ್ಕಾಗಿ ನಗರಗಳತ್ತ ಧಾವಿಸುತ್ತಿರುವುದರಿಂದ ಹಳ್ಳಿಗಳು ಸಂಪೂರ್ಣ ವೃದ್ಧಾಶ್ರಮಗಳಂತೆ ಕಾಣಿಸುತ್ತಿವೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಠಿಸುವ ಯೋಜನೆಗಳನ್ನು ರೂಪಿಸ ಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ಯುವ ಜನರಿಗೆ ಕರುಣೆ ಹಾಗೂ ಪ್ರೇಮದ ಅವಶ್ಯಕತೆಗಳನ್ನು ತಿಳಿಸುವ ಶಿಕ್ಷಣವನ್ನು ನೀಡಿದರೆ ವೃದ್ಧಾಶ್ರಮ ಸಂಸ್ಕøತಿ ಅಳಿಯಲು ಸಾಧ್ಯವಿದೆ. ಹಿರಿಯರು ಹಾಗೂ ಕಿರಿಯರು ಜೊತೆಯಲ್ಲಿ ಸಾಗಿದಾಗ ಮಾತ್ರ ಸ್ವಸ್ಥ ಸಮಾಜ ಸೃಷ್ಠಿಯಾಗಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಂ.ಎಸ್.ಎಸ್ ಸಂಸ್ಥೆಯ ನಿರ್ದೇಶಕ ಕ್ಲಿಪರ್ಡ್ ರೋಶನ್ ಪಿಂಟೋ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್.ಸಿ.ಡಿ ವಿಭಾಗದ ಕಾರ್ಯಕ್ರಾಮಾಧಿಕಾರಿ ಡಾ. ಶಂಕರಪ್ಪ ಬಿ.ಎಸ್., ಅಂಗವಿಕಲ ಕಲ್ಯಾಣಾಧಿಕಾರಿ ಶಿಲ್ಪಾ ಎಂ ದೊಡ್ಡಮನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮನೋವೈದ್ಯ ಡಾ. ಪ್ರಮೋದ್ ಹೆಚ್.ಎಲ್ ಹಾಗೂ ಪೇನೆಲ್ ವಕೀಲೆ ಶೈನಿ ಮೇರಿ ವಿಶೇಷ ಉಪನ್ಯಾಸ ನೀಡಿದರು.

error: Content is protected !!