ಹಾಲು ಉತ್ತಮವಾದ ರುಚಿ, ವಾಸನೆ ಹಾಗೂ ಪೌಷ್ಠಿಕಾಂಶಗಳುಳ್ಳ ಆಹಾರವಾಗಿದ್ದು, ಇದರಿಂದ ಸಸಾರಜನಕ, ಕೊಬ್ಬು, ಪಿಷ್ಟ, ಶಕ್ತಿ, ಸುಣ್ಣ, ಕಬ್ಬಿಣ ಮತ್ತು ಇತರ ಲಘು ಪೋಷಕಾಂಶಗಳು ದೊರೆಯುತ್ತವೆ. ಭಾರತ ದೇಶ ಹಾಲು ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಮೊದಲನೇ ಸ್ಥಾನದಲ್ಲಿದ್ದು, ನಾವು ಈ ಹಾಲನ್ನು ಕೇವಲ ಟೀ, ಕಾಫಿ, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾಡಲು ಹೆಚ್ಚಾಗಿ ಉಪಯೋಗಿಸುತ್ತಿದ್ದೇವೆ. ಆದರೆ ಹಾಲಿನಲ್ಲಿ ನಾನತರಹದ ಪೋಷಕಾಂಶ ಭರಿತ ಪದಾರ್ಥಗಳನ್ನು ಮಾಡಿ ಸ್ವ ಸಹಾಯ ಗುಂಪಿನ ಮಹಿಳೆಯರು ಮತ್ತು ನಿರುದ್ಯೋಗಿ ಯುವಕ / ಯುವತಿಯರು ತಮ್ಮ ಆರ್ಥಿಕ ಸಂಪನ್ಮೂಲವನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಗ್ರಾಮೀಣ ಪ್ರದೇಶದ ಜನರ ಅಪೌಷ್ಟಿಕತೆಯನ್ನು ನಿವಾರಿಸಬಹುದು.

ಸಸಾರಜನಕ:- ಹಾಲಿನಲ್ಲಿ ಮುಖ್ಯವಾಗಿ ಕೇಸಿನ್ ಎಂಬ ಪ್ರೋಟಿನ್ ಹೇರಳದವಾಗಿದ್ದು ಇದು ಮಕ್ಕಳ ಬೆಳವಣಿಗೆಗೆ ಹಾಗೂ ಎಲುಬುಗಳ ವೃದ್ಧಿಗೆ ಸಹಕಾರಿಯಾಗಿದೆ.
ಕೊಬ್ಬು:- ಎಮ್ಮೆ ಹಾಲಿನಲ್ಲಿ ಕೊಬ್ಬಿನಾಂಶ ಜಾಸ್ತಿ ಇರುತ್ತದೆ. ಹಸುವಿನ ಹಾಲಿನಲ್ಲಿ ಕೊಬ್ಬಿನಾಂಶ ಕಡಿಮೆ ಇರುತ್ತದೆ. ಈ ಕೊಬ್ಬಿನಾಂಶ ಇರುವುದರಿಂದ ಮಕ್ಕಳಿಗೆ ಹಾಗೂ ವಯಸ್ಕರಿಗೆ ಶಕ್ತಿಯನ್ನು ಒದಗಿಸುತ್ತದೆ.
ಪಿಷ್ಟ ಪದಾರ್ಥಗಳು:- ಹಾಲಿನಲ್ಲಿರುವ ಪಿಷ್ಟದಲ್ಲಿ ಲ್ಯಾಕ್ಟೋಸ್ ಎಂಬ ಸಕ್ಕರೆ ಅಂಶವು ಇರುವುದರಿಂದ, ಬಿಳಿಹಾಲಿನ ಬಣ್ಣವನ್ನು ಹಳದಿ ಬಣ್ಣವಾಗಿ ಪರಿವರ್ತಿಸುತ್ತದೆ. ಇದರಿಂದ ಹಸಿ ಹಾಲಿನಲ್ಲಿರುವ ಸೂಕ್ಷ್ಮ ಜಿವಗಳು ಹಾಗೂ ರಸಾಯನಿಕ ಅಂಶಗಳನ್ನು ತೆಗೆಯುತ್ತದೆ. ಇದರಿಂದ ಮಕ್ಕಳಿಗೆ ಹಾಗೂ ವಯಸ್ಕರಿಗೆ ಶಕ್ತಿಯನ್ನು ವೃದ್ಧಿಸಬಲ್ಲದು.
ಖನಿಜಗಳು:- ಹಾಲಿನಲ್ಲಿರುವ ಮುಖ್ಯ ಖನಿಜಗಳೆಂದರೆ ಸುಣ್ಣಾಂಶ, ಉಪ್ಪು, ಪಾಸ್ಪರಸ್ ಇವುಗಳು ಹಾಲಿನಲ್ಲಿರುವ ಒಂದು ಪಿಹೆಚ್ ಮಟ್ಟವನ್ನು ಕಾದುಕೊಂಡು ಮಕ್ಕಳ ಬೆಳೆವಣಿಗೆಗೆ ಮುಖ್ಯವಾಗಿ ಎಲುಬುಗಳ ವೃದ್ಧಿಗೆ ಸಹಕಾರಿಯಾಗುತ್ತದೆ.
ಜೀವಸತ್ವಗಳು:- ಹಾಲಿನಲ್ಲಿ ಜೀವಸತ್ವಗಳ ಅಂಶ ಹೆಚ್ಚಾಗಿದ್ದು, ಇವುಗಳು ಮಗುವಿನ ಉಸಿರಾಟಕ್ರಿಯೆ ಹಾಗೂ ದೇಹದೊಳಗೆ ಇರುವ ಎಲ್ಲಾ ರಸಾಯನಿಕಗಳನ್ನು ತೆಗೆದುಹಾಕಿ, ಮಗುವಿನ ಉಸಿರಾಟ ಹಾಗೂ ದೇಹವನ್ನು ರೋಗ ಮುಕ್ತವಾಗಿಡುತ್ತದೆ.
ಕಚ್ಚಾ ಸಸಾರಜನಕ (ವ್ಹೇ ಪ್ರೋಟಿನ್):- ಇದು ಹಾಲಿನಿಂದ ಮಾಡಲ್ಪಟ್ಟ ಕೋವ, ಚೀಸ್, ಚನ್ನ ಇದರಿಂದ ಉಳಿದಂತಾ ಕಚ್ಚ ಪದಾರ್ಥಕ್ಕೆ ವ್ಹೇ ಪ್ರೋಟಿನ್ ಎಂದು ಕರೆಯಲ್ಪಟ್ಟು ಇದನ್ನು ಇತಿಚ್ಚಿನ ದಿನಗಳಲ್ಲಿ ಪುಡಿಯಾಗಿ ಪರಿವರ್ತಿಸಿ ಮಧುಮೇಹ ರೋಗಿಗಳಿಗೆ, ಸಂಧಿವಾತ ಬಾಧೆಯವರಿಗೆ ಮತ್ತು ಅತೀ ಹೆಚ್ಚು ಕೊಬ್ಬು ಹೊಂದಿರುವವರಿಗೆ, ಲಿವರ್ ಕಾಯಿಲೆಯಿಂದ ಬಳಲುವವರಿಗೆ, ಸುಟ್ಟ ಗಾಯಗಳಾಗಿರುವವರಿಗೆ, ಕಿಡ್ನಿ ಕಾಯಿಲೆಯಿಂದ ಬಳಲುವವರಿಗೆ, ಏಡ್ಸ್‍ನಿಂದ ಬಳಲುವವರಿಗೆ ಇದನ್ನು ಗುಳಿಗೆ ಮುಖಾಂತರ ಕೊಡಲಾಗುತ್ತದೆ.

ಹಾಲಿನ ಪ್ರಮುಖ ಪಾತ್ರ
 ಹಾಲು ಉತ್ತಮವಾದ ಪೌಷ್ಠಿಕಾಂಶಗಳುಳ್ಳ ಆಹಾರ ಉದಾಹರಣೆ: ಹಾಲು ಮಿಶ್ರಿತ ಪಾನೀಯ, ಬದಾಮಿ ಹಾಲು. ಗಿಣ್ಣು
 ಹಾಲು ಉತ್ತಮವಾದ ರುಚಿ ಮತ್ತು ವಾಸನೆಯುಳ್ಳ ಆಹಾರ ಉದಾಹರಣೆ : ಪಾಯಸ, ಟೀ, ಕಾಫಿ
 ಪಿಷ್ಟಗಳನ್ನೊಳಗೊಂಡಿರುವುದರಿಂದ ಹಾಲು ಗಟ್ಟಿಯಾಗುವ ಗುಣ ಹೊಂದಿರುವುದರಿಂದ ಇದನ್ನು ಐಸ್‍ಕ್ರೀಂನಲ್ಲಿ ಬಳಸುತ್ತಾರೆ.
 ಮೊಸರು ಮತ್ತು ಮಜ್ಜಿಗೆಯನ್ನು ಸೇವಿಸುವುದರಿಂದ ಮುಖದ ಕಾಂತಿ ಮತ್ತು ಹೊಳಪು ಹೆಚ್ಚುತ್ತದೆ

ಹಾಲಿನ ಉತ್ಪನ್ನಗಳು
ಹಾಲನ್ನು ಕಚ್ಚಾವಸ್ತುವನ್ನಾಗಿ ಉಪಯೋಗಿಸಿಕೊಂಡು ಕೋವಾ, ಪನ್ನೀರ್, ಪೇಡ, ಕಲಾಕಂದ್, ಶ್ರೀಕಂಡ್, ಸುವಾಸಿತ ಹಾಲು, ರಸಗುಲ್ಲ, ರಸಮಲಾಯ್, ಜಾಮೂನ್, ಚಂಪಾಕಲಿ ಇತ್ಯಾದಿ ಪದಾರ್ಥಗಳನ್ನು ತಯಾರಿಸಬಹುದು.

ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ , 93539 78995

error: Content is protected !!