ಶಿವಮೊಗ್ಗ, ಜೂನ್-24 : 2021-22 ನೇ ಸಾಲಿಗೆ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ಆರ್ಡಬ್ಲ್ಯುಬಿಸಿಐಎಸ್)ಯನ್ನು ಜಾರಿಗೊಳಿಸಲಾಗುತ್ತಿದ್ದು, ಪ್ರಸ್ತುತ ನೋಂದಾವಣೆ ಚಾಲ್ತಿಯಲ್ಲಿದೆ.
ಆದರೆ ನೋಂದಾವಣೆಗೆ ಅವಶ್ಯ ದಾಖಲೆಯಾದ ಪಹಣಿ(ಆರ್ಟಿಸಿ)ಯಲ್ಲಿ ಬೆಳೆ ನಮೂದು ಇಲ್ಲದಿದ್ದರೆ ನೋಂದಣಿಗೆ ತೊಂದರೆಯಾಗುತ್ತಿರುವುದಾಗಿ ಕೆಲ ಪತ್ರಿಕೆಗಳಲ್ಲಿ ಪ್ರಚಾರವಾಗುತ್ತಿರುವುದನ್ನು ಗಮನಿಸಲಾಗಿದೆ. ಆದ್ದರಿಂದ ಸರ್ಕಾರದ ಆದೇಶದಲ್ಲಿಯೇ ಅವಕಾಶ ನೀಡಿರುವಂತೆ ಪಹಣಿ (ಆರ್ಟಿಸಿ)ಯಲ್ಲಿ ಬೆಳೆ ನಮೂದು ಇಲ್ಲದಿದ್ದರೆ ಅರ್ಜಿದಾರರು ಸ್ವಯಂ ಘೋಷಿತ ಬೆಳೆ ವಿವರವನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಯಾವುದೇ ರೈತರು ಗೊಂದಲಕ್ಕೆ ಒಳಗಾಗದೇ ಈ ಯೋಜನೆಯಡಿ ವಿಮೆ ನೋಂದಾಯಿಸಿಕೊಳ್ಳಬಹುದಾಗಿದೆ.