ಇಂದು ಶಿವಮೊಗ್ಹ ನಗರದಲ್ಲಿ ಉಪನ್ಯಾಸಕಿಯಾದ ಮಂಜುಳಾರವರು ತಮ್ಮ ಆತ್ಮೀಯರೊಂದಿಗೆ ಸೇರಿ ಮಂಗಳ ಮುಖಿಯರಿಗೆ ಅಹಾರದ ಕಿಟ್ ಗಳನ್ನು ವಿತರಣೆ ಮಾಡಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿ ತುತ್ತು ತಿನ್ನುವವರು ಒಂದು ತುತ್ತು ಕೈ ಎತ್ತಿ ಕೊಟ್ಟರೂ ಎಷ್ಟೋ ಹಸಿದ ಹೊಟ್ಟೆ ತುಂಬಿಸಬಹುದು. ಇರುವವರು ಇಲ್ಲದವರೊಂದಿಗೆ ಹಂಚಿ ತಿನ್ನಿ.. ಇದರಿಂದ ಆಗುವ ಸಂತೋಷ ಅಷ್ಟಿಷ್ಟಲ್ಲ, ಜೀವನದಲ್ಲಿ ಸಂತೃಪ್ತಿ ಕೊಡುತ್ತದೆ. ಕೊಡುವ ಕೈಗಳು ಹೆಚ್ಚಿದರೆ ಕೊರಗೋ ಮನಸುಗಳು ಕಡಿಮೆ ಯಾಗುತ್ತ್ತವೆ ಆದಷ್ಟು ಮನೆಯಿಂದ ಹೊರ ಹೋಗುವುದನ್ನು ಕಡಿಮೆ ಮಾಡಿ ಅತ್ಯ ಬಿದ್ದಾಗ ಮಾತ್ರ ಮನೆಯಿಂದ ಹೊರಗೆ ಹೋಗಿ . ಪ್ರತಿಯೊಬ್ಬರೂ ಮನೆಯಿಂದ ಹೋಗುವಾಗ ಮಾಸ್ಕ್ ಧರಿಸಿ , ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಕೊರೋನೋ ವೈರಾಣು ಸೋಂಕು ಹರಡುವಿದೆಯನ್ನು ತೆಡೆಗಟ್ಟಿ ಎಂದು ಕರೆಕೊಟ್ಟರು.
ಮಹಾನಗರ ಪಾಲಿಕೆಯ ಶ್ರೀಮತಿ ಅನುಪಮಾ, ಸ್ನೇಹಿತೆ ಜಯ, ರಕ್ಷಾ ಸಮುದಾಯ ಸಂಘದ ಅಧ್ಯಕ್ಷರು ಮತ್ತು ಇತರರು ಹಾಜರಿದ್ದರು