ಶಿವಮೊಗ್ಗ, ಜೂನ್ 10: : ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕೋಳಿ ಮರಿ ಕೇಂದ್ರವನ್ನು ಪ್ರಾರಂಭಿಸಿದ್ದು, ಮೇ ತಿಂಗಳಿನಿಂದ ಒಂದು ದಿನದ ಸ್ವರ್ಣಧಾರ ಕೋಳಿ ಮರಿಗಳು ಲಭ್ಯವಿರುತ್ತದೆ.
ಕೋಳಿ ಸಾಕಣೆ ಮಾಡುವವರ ಬೇಡಿಕೆ, ಲಭ್ಯತೆ ಮತ್ತು ಉತ್ಪಾದನೆಗೆ ಅನುಗುಣವಾಗಿ ಕೋಳಿ ಮರಿಗಳನ್ನು ಪೂರೈಸುವ ಯೋಜನೆಯಾಗಿದ್ದು, ಒಂದು ದಿನದ ಕೋಳಿ ಮರಿಗಳ ಬೆಲೆ ಒಂದಕ್ಕೆ ರೂ. 22/- ಎಂದು ನಿಗಧಿಪಡಿಸಲಾಗಿದ್ದು, ಮೊದಲು ಬಂದವರಿಗೆ ಅಥವಾ ಮುಂಗಡ ಹಣ ಪಾವತಿ ಮಾಡಿ ಮರಿಗಳನ್ನು ಕಾಯ್ದಿರಿಸುವವರಿಗೆ ಆದ್ಯತೆ ನೀಡಲಾಗುವುದು.
ಮುಂಗಡ ಹಣ ಪಾವತಿಸಲು ಮತ್ತು ಒಂದು ನೂರಕ್ಕಿಂತ ಹೆಚ್ಚು ಕೋಳಿ ಮರಿಗಳನ್ನು ಕೊಳ್ಳಲು ಇಚ್ಛಿಸುವವರು “Assistant Comptroller, Poultry Revolving Fund, Veterinary College Shivamogga” ಇವರ ಹೆಸರಿನಲ್ಲಿ ಡಿ.ಡಿ. ಪಡೆದು ಕಳುಹಿಸುವುದು. ಸಾಗಾಣಿಕಾ ವೆಚ್ಚವನ್ನು ಖರೀದಿಸಿದವರೇ ಭರಿಸಬೇಕಾಗಿದ್ದು, ಸಾಗಾಣಿಕಾ ಸಂದರ್ಭದಲ್ಲಾಗುವ ನಷ್ಟವನ್ನು ಭರಿಸಲಾಗುವುದಿಲ್ಲವೆಂದು ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಗಡ ಕಾಯ್ದಿರಿಸುವಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.ನಂ.: 9448039241/ 9916208462/9900519138/ 8660597421 ಗಳನ್ನು ಸಂಪರ್ಕಿಸುವುದು.