ಕಳೆದರಡು ದಿನಗಳಿಂದ ಸ್ವತ; ಶಿವಮೊಗ್ಗ ನಗರ ಮಹಾನಗರ ಪಾಲಿಕೆಯ ಸದಸ್ಯರಾದ ಮಂಜುನಾಥ್ರವರು ತಮ್ಮ ವಾಡ೯ನಲ್ಲಿರುವ ೧ನೇ ಹಂತದ ಪಾಕ೯ನ್ನು ಪಾಲಿಕೆಯ ಪೌರ ಕಾಮಿ೯ಕರನ್ನು ಕರೆಸಿ ಸ್ವಚ್ಚತಾ ಕಾಯ೯ಕ್ಕೆ ಮುಂದಾದರು. ಹಾಗು ಪಾಕ೯ನ ಅಭಿವೃದ್ದಿಯ ಬಗ್ಗೆ ಸ್ಥಳೀಯರೊಂದಿಗೆ ಚಚೆ೯ ನಡೆಸಿದರು.
ಗೋಪಾಳ ಹುಡ್ಕೋ ಕಾಲೋನಿಯ ೧ನೇ ಹಂತದ ಪಾಕ್೯ನ ಸ್ವಚ್ಚತಾ ಕಾಯ೯ದಲ್ಲಿ ಭಾಗವಹಿಸಿದ ಪಾಲಿಕೆಯ ಸದಸ್ಯರಾದ ಮಂಜುನಾಥ್ ಮಾತನಾಡಿ ಸ್ಥಳೀಯರ ಸಹಕಾರ ಸಹಭಾಗಿತ್ವ ಹೀಗೆ ಇದ್ದರೆ, ಜನಪ್ರತಿಧಿಗಳು ಉತ್ತಮ ಕೆಲಸಮಾಡಲು ಅನುಕೂಲವಾಗುತ್ತದೆ. ಸುತ್ತ ಮುತ್ತಲ ಪರಿಸರವೂ ಕೂಡ ಚೆನ್ನಾಗಿರುತ್ತದೆ. ವಾಡ೯ನ ಸ್ಥಳೀಯರು ಎಷ್ಟು ತಮ್ಮ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ತೋರಿಸಿ ಅರಿವು ಮೂಡಿಸಿ ಪರಿಸರವನ್ನು ಕಾಪಾಡುತ್ತಾರೋ ಜನರ ಆರೋಗ್ಯ ಹಾಗು ಸುತ್ತಲಿನ ಪರಿಸರ ಕೂಡ ಚಿನ್ನಾಗಿರುತ್ತದೆ ಎಂದು ಹೇಳಿದರು.
ಪಾಲಿಕೆ ಸದಸ್ಯರಾದ ಮಂಜುನಾಥ್ರವರೊಂದಿಗೆ ವಾಡ೯ನ ಸ್ಥಳೀಯರಾದ ಮೋಹನ್, ರಾಜು, ಪ್ರಕಾಶ್, ಅನಿತಾಮೋಹನ್, ಹಾಗು ಶ್ರೀಧರ್ ಇನ್ನೂ ಹಲವರು ಉಪಸ್ಥಿತರಿದ್ದರು.