1) ಫ್ಯುಸಾರಿಯಮ್ ಬಾಡು

ರೋಗ: ಈ ರೋಗವು ಬೆಳೆಯ ಯಾವ ಹಂತದಲ್ಲಿಯಾದರೂ ಬರುತ್ತದೆ. ಎಲೆಗಳ ತುದಿ ಭಾಗವು ಒಣಗಿ, ಕ್ರಮೇಣ ಗಿಡವು ಪೂರ್ತಿ ಒಣಗುತ್ತವೆ. ತೀವ್ರ ಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ರೋಗ ಹರಡುವಿಕೆ ತಡೆಗಟ್ಟಲು ಕಾರ್ಬಂಡೈಜಿಮ್ ಶಿಲೀಂದ್ರನಾಶಕ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸೆ ಗಿಡಗಳ ಬುಡ ತೊಯ್ಯುವಂತೆ ಸುರಿಯಬೇಕು.

1) ಚಿಬ್ಬು ರೋಗ: ಮೊದಲಿಗೆ ಸಣ್ಣನೆಯ ತೇವಾಂಶಯುಕ್ತ ಚುಕ್ಕೆಗಳು ಕಾಣಿಸುತ್ತವೆ. ಆಮೇಲೆ ಕಪ್ಪನೆ ಬಣ್ಣಕ್ಕೆ ತಿರುಗುತ್ತವೆ. ಅರ್ಕಾಮಾಣಿಕ್ ತಳಿಯು ಚಿಬ್ಬು ರೋಗಕ್ಕೆ ನಿರೋಧಕ ಶಕ್ತಿ ಹೊಂದಿರುವುದರಿಂದ ಈ ತಳಿಯನ್ನು ಬೆಳೆಯಬೇಕು.
2) ಬೂಜು ತುಪ್ಪಟರೋಗ :
ಮೊದಲಿಗೆ ಕೋನಾಕಾರದ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳತ್ತವೆ ಆಮೇಲೆಒಂದಕ್ಕೊಂದು ಸೇರಿಕೊಂಡು ಎಲೆಗಳು ಒಣಗುತ್ತವೆ. ಪ್ರತಿ ಲೀಟರ್ ನೀರಿಗೆ 2 ಗ್ರಾಂ ಮೆಟಲಾಕ್ಸಿಲ್ + ಮ್ಯಾಂಕೋಜೆಬ್ ಅಥವಾ 2 ಗ್ರಾಂ ಮಾಲ್ ಮ್ಯಾಕೋಜೆಬ್ ಬೆರೆಸಿ ಸಿಂಪಡಿಸಬೇಕು.

3) ಬೂದಿ ರೋಗ: ಮೊದಲಿಗೆ ಸಣ್ಣನೆಯ ಬಿಳಿ ಬೂದು ಬಣ್ಣದ ಚುಕ್ಕೆಗಳು ಎಲೆ ಮತ್ತು ಕಾಂಡದ ಮೇಲೆ ಕಾಣಿಸುತ್ತವೆ. ರೋಗದ ತೀವ್ರತೆ ಹೆಚ್ಚಾದಾಗ ಎಲೆಗಳು ಪೂರ್ತಿ ಒಣಗುತ್ತವೆ. ಪ್ರತಿ ಲೀಟರ್ ನೀರಿನಲ್ಲಿ 1 ಮಿ.ಲೀ. ಟ್ರೈಡಮಾರ್ಪ ಅಥವಾ 2 ಗ್ರಾಂ ಕ್ಲೋರೋಫ್ಯಾಲೋನಿಲ್ ಬೆರೆಸಿ ಸಿಂಪಡಿಸಬೇಕು. 2 ವಾರಗಳ ಅಂತರ ಎಟ್ಟು ಮೂರು ಸಾರಿ 0.5 ಗ್ರಾಂ ಕಾರ್ಬನ್ ಡೈಜಿಮ್ 50 ಡಬ್ಲ್ಯೂ.ಪಿ, ಅಥವಾ 1.5 ಗ್ರಾಂ ಡೈನೊಕ್ಯಾಪ್ (ನೀರಿನಲ್ಲಿ ಕರಗುವ ಮಡಿ) 1 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಸುಮಾರು 450 ಲೀಟರ್ ಸಿಂಪಡಣಾ ದ್ರಾವಣ ಪ್ರತಿ ಹೆಕ್ಟೇರಿಗೆ ಬಳಸಬೇಕು.

4) ಸುಳಿ ನಂಜುರೋಗ: ಈ ರೋಗ ಕಾಣಿಸಿಕೊಂಡಾಗ ಬಳ್ಳಿಗಳ (ಸುಳಿಗಳು) ತುದಿಗಳು ಮೇಲಕ್ಕೆ ಮುಖ ಮಾಡಿರುತ್ತವೆ. ರೋಗ ಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ರೋಗ ಹರಡದಂತೆ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಫೆಟ್ರೋನಿಲ್ ಅಥವಾ 10 ಗ್ರಾಂ ಅಸಿಫೇಟ್ ಬೆರೆಸಿ ಸಿಂಪಡಿಸಬೇಕು.

5) ಕೊಯ್ದು ಮತ್ತು ಇಳುವರಿ: ಕಲ್ಲಂಗಡಿ ಬಳಿಯ ಹಣ್ಣಿನ ಹತ್ತಿರದ ಲತಾ ತಂತು ಒಣಗಲು ಪ್ರಾರಂಭಿಸಿದಾಗ ಹಾಗೂ ಹಣ್ಣಿನ ತಳಮ್ಮ ಹಳದಿ ಬಣ್ಣಕ್ಕೆ ತಿರುಗಿದ ನಂತರ ಕಟಾವು ಮಾಡಬಹುದು. ಈ ಹಂತದಲ್ಲಿ ಹಣ್ಣುಗಳನ್ನು ಬೆರಳಿನಿಂದ ಬಾರಿಸಿದರೆ ಮಂದ ಶಬ್ದ ಬರುವುದು. ಪ್ರತಿ ಹೆಕ್ಟೇರಿಗೆ ಸಾಮಾನ್ಯತಳಿಗಳಿಂದ ಸರಾಸರಿ 45 ರಿಂದ 50 ಟನ್ ಇಳುವರಿಯನ್ನು ಪಡೆಯಬಹುದು. ಆದರೆ ಹೈಬ್ರಿಡ್ ತಳಿಗಳು ಪ್ರತಿ ಹೆಕ್ಟೇರಿಗೆ 75-80 ಟನ್ ಇಳುವರಿ ಕೊಡುತ್ತವೆ.

error: Content is protected !!