ಶಿವಮೊಗ್ಗ, ಸೆಪ್ಟಂಬರ್. 27 : ಶಿವಮೊಗ್ಗ ಮಹಾನಗರಪಾಲಿಕೆಯು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸೆಪ್ಟಂಬರ್ 29ರಿಂದ ಅಕ್ಟೋಬರ್ 08ರವರೆಗೆ ಶಿವಮೊಗ್ಗ ದಸರಾದ ಅದ್ಧೂರಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಲತಾಗಣೇಶ್ ಅವರು ಹೇಳಿದರು.
ಅವರು ಇಂದು ನಾಡಿನ ಪರಂಪರೆಯ ಪ್ರತೀಕವಾಗಿರುವ ವೈಭವದ ಶಿವಮೊಗ್ಗ ದಸರಾ ಉತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ಶಿವಮೊಗ್ಗ ನಗರದ ಹಲವು ಸಮನಾಂತರ ವೇದಿಕೆಗಳಲ್ಲಿ ನಾಡಿನ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮುಂತಾದ ಸ್ಥಳೀಯ ಹಾಗೂ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಪಮಹಾಪೌರ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ಶಿವಮೊಗ್ಗ ಉತ್ಸವದ ಅಂಗವಾಗಿ ನಡೆಯಲಿರುವ ಹಲವು ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತಾಗಲು ಮಹಾಪೌರರಾದ ಶ್ರೀಮತಿ ಲತಾಗಣೇಶ್ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚಿಸಿ, ಪಾಲಿಕೆಯ ಸದಸ್ಯರನ್ನು ಉಸ್ತುವಾರಿಗಾಗಿ ಜವಾಬ್ದಾರಿ ನೀಡಲಾಗಿದೆ ಎಂದರು.
ಸೆಪ್ಟಂಬರ್ 29ರಂದು ಬೆಳಿಗ್ಗೆ 11ಗಂಟೆಗೆ ಕೋಟೆ ರಸ್ತೆಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಡಿನ ಪ್ರಸಿದ್ಧ ಕವಿ ಬಿ.ಆರ್.ಲಕ್ಷ್ಮಣರಾವ್ ಅವರು ಶಿವಮೊಗ್ಗ ದಸರಾವನ್ನು ಉದ್ಘಾಟಿಸುವರು. ಮಹಾನಗರಪಾಲಿಕೆಯ ಮಹಾಪೌರರಾದ ಶ್ರೀಮತಿ ಲತಾ ಗಣೇಶ್ ಅವರು ಅಧ್ಯಕ್ಷತೆ ವಹಿಸುವರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಾಂಸದ ಬಿ.ವೈ.ರಾಘವೇಂದ್ರ, ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಜಿಲ್ಲೆಯ ವಿಧಾನ ಪರಿಷತ್ ಹಾಗೂ ವಿಧಾನಸಭಾ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮಕ್ಕಾಗಿ ಸರ್ಕಾರವು 2ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದ್ದು, ಆ ಪೈಕಿ ಕಾರ್ಯಕ್ರಮ ನಡೆಯುವ ಹಳೆ ಜೈಲು ಆವರಣದ ಅಭಿವೃದ್ಧಿಗಾಗಿ ಒಂದು ಕೋಟಿಗಳನ್ನು ಹಾಗೂ ಉಳಿದ ಇನ್ನೂ ಒಂದು ಕೋಟಿ ರೂ.ಗಳನ್ನು ಸಾಂಸ್ಕøತಿಕ ಕಾರ್ಯಕ್ರಮಗಳಿಗಾಗಿಯೂ ಬಳಸಿಕೊಳ್ಳಲಾಗುವುದು. ಕಾರ್ಯಕ್ರಮದ ಕೊನೆಯ ದಿನದಂದು ಅಂಬಾರಿಯ ಮೇಲೆ ದುರ್ಗಾದೇವಿಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಈ ಮೆರವಣಿಗೆಯಲ್ಲಿ 100ಕ್ಕೂ ಹೆಚ್ಚಿನ ನಾಡಿನ ಹೆಸರಾಂತ ಜನಪದ ಕಲಾವಿದರು ಭಾಗವಹಿಸಲಿರುವುದು ವಿಶೇಷವೆನಿಸಿದೆ. ಇವರೊಂದಿಗೆ. ಇವರೊಂದಿಗೆ ಖ್ಯಾತ ವೈದ್ಯ ಬಿ.ಎಂ.ಹೆಗ್ಡೆ, ಹಾಗೂ ಚಲನಚಿತ್ರ ನಟಿ ಸುಧಾರಾಣಿ, ಪ್ರೇಮಾ ಹಾಗೂ ಇನ್ನೂ ಅನೇಕ ಕಿರುತೆರೆ ಕಲಾವಿದರು, ಉದಯೋನ್ಮುಖ ಗಾಯಕ ಸಂಚಿತ್‍ಹೆಗಡೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಖ್ಯಾತನಾಮರು ಪಾಲ್ಗೊಳ್ಳಲಿದ್ದಾರೆ ಎಂದವರು ನುಡಿದರು.
ಸಭೆಯಲ್ಲಿ ಮಹಾನಗರಪಾಲಿಕೆಯ ವಿಪಕ್ಷ ನಾಯಕ ರಮೇಶ್ ಹೆಗ್ಡೆ, ಜ್ಞಾನೇಶ್ವರ್, ಪ್ರಭಾರ ಆಯುಕ್ತ ಟಿ.ಬಿ.ಪ್ರಕಾಶ್ ಸೇರಿದಂತೆ ಮಹಾನಗರಪಾಲಿಕೆಯ ಸರ್ವ ಸದಸ್ಯರು, ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

error: Content is protected !!