ವಿವಿಧ ಕಡೆ ಸೂರ್ಯಕಾಂತಿ ಬೆಳೆಯು ಹೂ ಹಂತ ತಲಪಿದ್ದು, ಈ ಸಮಯದಲ್ಲಿ ಎಲೆಗಳಿಗೆ ಬೂದಿ ರೋಗ, ಎಲೆಚುಕ್ಕಿ ರೋಗ ಹಾಗೂ ನಂಜು ರೋಗ ನಿರ್ವಹಣೆ ಅತ್ಯಗತ್ಯವಾಗಿದೆ. ಈಗಾಗಲೇ ಬೆಳೆಯ ಹಂತದಲ್ಲಿ 18 ದಿನಗಳ ಒಣ ಸನ್ನಿವೇಶದಲ್ಲಿ ಬೂದಿ ರೋಗ ಹಾಗೂ ಎಲೆ ಮುಟುರು ರೋಗ ಅಲ್ಲಲ್ಲಿ ಕಾಣಿಸಿಕೊಂಡಿದೆ. ವಾತಾವರಣದ ಆದ್ರ್ರತೆ ಶೇ. 80 ರಷ್ಟು ಹಚ್ಚಾದ ಸನ್ನಿವೇಶದಲ್ಲಿ ಹಾಗೂ ಯೋಗ್ಯ ಬೆಳೆ ನಿರ್ವಹಣೆ ಮಾಡಿದಲ್ಲಿ ಉತ್ತಮ ಕಾಯಿಗಳ ರಚನೆ ಕಾಣಬಹುದು. ಎಲೆಚುಕ್ಕಿ ರೋಗ ಮತ್ತು ಬೂದಿ ರೋಗ ಕಂಡು ಬಂದಲ್ಲಿ ಕಾರ್ಬನ್ ಡೈಜಿಂ 1 ಗ್ರಾಮ ಅಥವಾ ಹೆಕ್ಸ್ಕೋನಜಾಲ್ 1 ಮಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಎಲೆಮುದುಡಿ ನಂಜಾಣು ರೋಗ ಕಂಡು ಬಂದಲ್ಲಿ ಆರಂಭದಲ್ಲಿ ಗಿಡಗಳನ್ನು ತೆಗೆದು ನಾಶ ಪಡೆಸಿದ್ದಲ್ಲಿ ರೋಗ ಹರಡುವುದನ್ನ ತಡೆಗಟ್ಟಬಹುದು. ಪರಾಗಸ್ಪರ್ಷ ಹಂತದಲ್ಲಿ ಕಾಳು ಕಟ್ಟುವ ಸಮಯದಲ್ಲಿ ಯಾವುದೇ ಔಷಧಿಯನ್ನು ಸೂರ್ಯಕಾಂತಿಗೆ ಸಿಂಪಡಿಸಬಾರದು. ಪರಗಸ್ಪರ್ಷ ಕ್ರಿಯೇಯಲ್ಲಿ ಜೇನುಹುಳುಗಳ ಪಾತ್ರ ಹೆಚ್ಚಾಗಿ ಕಂಡು ಬರುತ್ತದೆ. ಐಷಿಎಆರ್-ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ, ವಿಜ್ಞಾನಿಗಳಾದ ಡಾ. ಜಹೀರ್ ಅಹೆಮದ್, ಕ್ಷೇತ್ರ ಸಹಾಯಕರಾದ ಶ್ರೀ ನಿರಂಜನ್ ಧನ್ನಿ ಮತ್ತು ಸೈದಪ್ಪಾ ನಾಟಿಕಾರ ಉಪಸ್ಥಿತರಿದ್ದರು. ರೋಗ ಹರಡುವ ಕೀಟಗಳ ನಿರ್ವಹಣೆಗೆ ಥಯೋಮಿಥಾಕ್ಸಂ 8 ಗ್ರಾಂ. 15 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.