ಶಿಕಾರಿಪುರ: ಸಾವಿರಾರು ಬಡ ಹಾಗೂ ಅನಾಥ ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಮಾಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿರುವ ಡಾ|| ಹಾಫಿಜ್ ಕರ್ನಾಟಕಿರವರ ಸೇವೆ ಪ್ರಶಂಸನೀಯವೆಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಮ್. ಜಿ.ಪ್ರಕಾಶ್ ತಿಳಿಸಿದರು.
ಗುರುಭವನದಲ್ಲಿ ನಡೆದ ಡಾ|| ಹಾಫಿಜ್ ಕರ್ನಾಟಕಿ ರವರಿಗೆ ಸನ್ಮಾನ ಹಾಗೂ ವಿವಧ ಕ್ರೀಡೆಗಳಲ್ಲಿ ಜಯಗಳಿಸಿದ ಶಿಕ್ಷಕರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕಾರಿಪುರದ ಶಿಕ್ಷಕ ದಂಪತಿಗಳ ಪುತ್ರರಾಗಿರುವ ಡಾ|| ಹಾಫಿಜ್ ಕರ್ನಾಟಕಿರವರು 100 ಪುಸ್ತಕ ಗಳನ್ನು ಬರೆದು ಕೇಂದ್ರ ಸಾಹಿತ್ಯ ಅಕಾಡೆಮಿ, ಮುರುಘಶ್ರೀ ಹಾಗೂ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳ ಏಳಿಗೆಗಾಗಿ ದುಡಿದವರಿಗೆ ನೀಡುವ ರಾಜ್ಯ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿರುವುದು ನಮ್ಮ ತಾಲ್ಲೂಕಿಗೆ ಹಾಗೂ ಜಿಲ್ಲೆಗೆ ಹೆಮ್ಮೆ ತಂದಿದೆ. ಇವರಿಗೆ ಪದ್ಮಶ್ರೀ ಯಂತಹ ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸಿದರು.


ಸನ್ಮಾನ ಸ್ವೀಕರಿಸಿದ ಡಾ|| ಹಾಫಿಜ್ ಕರ್ನಾಟಕಿ ಮಾತನಾಡಿ, ನನಗೆ ರಾಷ್ಟ್ರಾದ್ಯಂತ ಅನೇಕ ಸನ್ಮಾನಗಳು ನಡೆದಿವೆ, ಆದರೆ ಶಿಕಾರಿಪುರದ ನನ್ನ ಶಿಕ್ಷಕ ಸಮುದಾಯ ನನ್ನನ್ನು ಗೌರವಿಸಿರುವುದು ಅತ್ಯಂತ ಸಂತೋಷ ತಂದಿದೆ. ಶಿಕ್ಷಕ ಹುದ್ದೆ ಅತ್ಯಂತ ಜವಾಬ್ದಾರಿಯಾಗಿದ್ದು ಇದನ್ನು ಅತ್ಯಂತ ಪ್ರೀತಿ, ಗೌರವದಿಂದ ಸ್ವೀಕರಿಸಿ ಕೆಲಸ ಮಾಡುವ ಮೂಲಕ ಸಾವಿರಾರು ಮಕ್ಕಳ ಭವಿಷ್ಯ ಉತ್ತಮಗೊಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಶಿಕ್ಷಕ ಹುದ್ದೆ ಎಲ್ಲಾ ಹುದ್ದೆಗಳಿಂದ ದೊಡ್ಡದು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ನೌಕರ ಸಂಘದ ಅಧ್ಯಕ್ಷ ಮಧುಕೇಶವ್, ರಾಜ್ಯ ಸಂಘದ ಉಪಾಧ್ಯಕ್ಷ ಪಾಪಯ್ಯ, ಬಿ.ಆರ್ ಮಂಜಪ್ಪ ಜಿಲ್ಲಾ ಗೌರವಾಧ್ಯಕ್ಷರು ಕ.ರಾ.ಪ್ರಾ.ಶಾ.ಶಿ ಸಂಘ ಶಿವಮೊಗ್ಗ, ಶ್ರೀ ಚನ್ನೇಶ್ ಬಿ. ಗೌರವಾಧ್ಯಕ್ಷರು ಕ.ರಾ.ಪ್ರಾ.ಶಾ.ಶಿ ಸಂಘ ಶಿಕಾರಿಪುರ, ಶ್ರೀ ನಾಗೇಶ್ ಕೊಳ್ಳೇರ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕ.ರಾ.ಪ್ರಾ.ಶಾ.ಶಿ ಸಂಘ ಶಿವಮೊಗ್ಗ, ಶ್ರೀ ಟಿ.ಎಸ್. ಮುರಳಿಧರ್. ಸಮನ್ವಯಾಧಿಕಾರಿಗಳು, ಬಿ.ಆರ್.ಸಿ ಶಿಕಾರಿಪುರ, ಶ್ರೀ ಪುಟ್ಟರಾಜು. ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಶಿಕಾರಿಪುರ, ಶ್ರೀ ಆರ್.ಎಂ. ಸಿ ಘಾಸಿ, ಅಧ್ಯಕ್ಷರು ಶಿಕ್ಷಕರ ಪತ್ತು ಬೆಳೆಸುವ ಸಹಕಾರ ಸಂಘ ಶಿಕಾರಿಪುರ, ಶ್ರೀಮತಿ ಸರ್ವದಾರಾಣಿ ಅಧ್ಷಕ್ಯರು ಮಹಿಳಾ ಶಿಕ್ಷಕಿಯರ ವೇದಕಿ ಮುಂತಾದವರು ಉಪಸ್ಥಿತರಿದ್ದರು.

error: Content is protected !!