ಸ.ಕೃ.ನಿ. ಶಿವಮೊಗ್ಗ ಕಛೇರಿಯಲ್ಲಿ ಕೃಷಿ ಇಲಾಖೆ ಶಿವಮೊಗ್ಗ ಹಾಗೂ ಧರ್ಮಚಕ್ರ ಟ್ರಸ್ಟ, ಬೆಂಗಳೂರು, ಇವರ ಸಹಯೋಗದಲ್ಲಿ ಸಾವಯವ ಸಿರಿ ಯೋಜನೆಯಡಿ ರೈತರಿಗೆ ತರಭೇತಿ ಹಮ್ಮಿಕೊಳ್ಳಲಾಯಿತು. ಶ್ರೀ ಶಿವರಾಜ್ ಕುಮಾರ್ ಹೆಚ್ ಎಸ್, ಸ.ಕೃ.ನಿ ,ಶಿವಮೊಗ್ಗ, ಇವರು ಪ್ರಾಸ್ತಾವಿಕ ಭಾಷಣದಲ್ಲಿ ಸಾವಯುವ ಕೃಷಿ ಮೂಲ ತತ್ವಗಳು ಹಾಗೂ ಅದರ ಅನುಷ್ಠಾನದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.


ಶ್ರೀಮತಿ ಜ್ಯೋತಿ ರಾಥೋಡ್, ಸಹಾಯಕ ಪ್ರಾದ್ಯಾಪಕರು, ಕೆ.ವಿ.ಕೆ. ಇವರು ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡುತ್ತಾ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ರೈತರ ಆದಾಯವನ್ನು ದ್ವಿಗುಣಗೊಳಿಸಬಹುದೆಂದು ಸಭೆಗೆ ಮಾಹಿತಿ ನೀಡಿದರು. ಮುಂದುವರೆದು ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಹಾಗೂ ಅವುಗಳನ್ನು ಹೆಚ್ಚು ದಿನ ಶೇಖರಣೆ ಮಾಡಲು ಆಹಾರ ಬೆಳೆಗಳ ಮೌಲ್ಯವರ್ಧನೆ ಪ್ರಮುಖವಾಗಿದೆ. ಶುಂಠಿ, ಮುಸುಕಿನ ಜೋಳ, ಬಾಳೆ ಮತ್ತು ರಾಗಿ ಬೆಳೆಗಳ ಮೌಲ್ಯವರ್ಧನೆ ಮಾಡುವುದರಿಂದ ಹೆಚ್ಚು ಲಾಭಗೊಳಿಸಬಹುದು. ಶುಂಠಿ ಬೆಳೆಯಿಂದ ಮೌಲ್ಯವರ್ಧನೆ ಪದಾರ್ಥಗಳಾದ ಕ್ಯಾಂಡಿ, ಶುಂಠಿ ಪೇಸ್ಟ್ ಮತ್ತು ಜೂಸ್, ಮುಸುಕಿನ ಜೋಳದಿಂದ ಹಿಟ್ಟು ರವೆ ಮುಂತಾದ ಪದಾರ್ಥಗಳು, ರಾಗಿಯಿಂದ ರಾಗಿ ಹಿಟ್ಟು, ರಾಗಿ ಮಾಲ್ಟ್ ಹಾಗೂ ಬಾಳೆ ಕಾಯಿ ಇಂದ ಬಾ.ಕಾ.ಹು. ಮಾಡಬಹುದು ಎಂದು ತಿಳಿಸಿದರು.


ಮಾರುಕಟ್ಟೆ ವಿಷಯದ ಬಗ್ಗೆ ಗ್ರಾಮರಾಜ್ಯ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ದತ್ತಾತ್ರೆಯ ಹೆಗಡೆ ಇವರು ಗ್ರಾಮರಾಜ್ಯ ಸಂಸ್ಥೆ ಬೆಳೆದುಬಂದ ಹಾದಿಯನ್ನು ಸಭೆಗೆ ವಿವರಿಸುತ್ತಾ, ಗ್ರಾಮದ ಗುಣಮಟ್ಟದ ಹಾಗೂ ರಾಸಾಯನಿಕ ಮುಕ್ತ ಉತ್ಪನ್ನಗಳು ಪಟ್ಟಣಕ್ಕೆ ಮಾರುಕಟ್ಟೆ ಮಾಡುವ ಬಗ್ಗೆ, ಈ ಉತ್ಪನ್ನಗಳ ಬೇಡಿಕೆ ಬಗ್ಗೆ ಸಭೆಗೆ ವಿವರವಾದ ಮಾಹಿತಿ ನೀಡಿದರು.

error: Content is protected !!