ಸಾವಯವ ಕೃಷಿ ಮಿಷನ್, ಕರ್ನಾಟಕ ಸರ್ಕಾರ, ಕೃಷಿ ಇಲಾಖೆ ಇದು ಪಶುವೈದ್ಯಕೀಯ ಔಷಧಶಾಸ್ತ ಮತ್ತು ವಿಷಶಾಸ್ತ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇದಕ್ಕೆ “ಗೋವುಗಳನ್ನು ಅನುತ್ಪಾದಕತೆಯಿಂದ ಉತ್ಪಾದಕತೆಯತ್ತ ಸಾಗಿಸಿ ಸಾವಯವ ಕೃಷಿಗೆ ಒತ್ತು ನೀಡುವ ಯೋಜನೆ ”ಗೆ ರೂ:50 ಲಕ್ಷ ಅನುದಾನವನ್ನು 2022-23 ನೇ ಸಾಲಿಗೆ ನೀಡಿದೆ.
ಈಯೋಜನೆಯಲ್ಲಿಶಿವಮೊಗ್ಗ, ದಾವಣಗೆರೆ,
ಚಿತ್ರದುರ್ಗ ಜಿಲ್ಲೆಗಳಲ್ಲಿನ ಬಡ ರೈತರಿಗೆ ಸೇರಿದ ಬರಡು ಅಥವಾ ಗೊಡ್ಡು ರಾಸುಗಳನ್ನು ಗುರುತಿಸಿ, ಅವುಗಳ ಬಂಜೆತನ ನಿವಾರಣೆಯಾಗುವಂತೆ ವಿವಿಧ ಚಿಕಿತ್ಸೆ ಮತ್ತು ಪ್ರಯೋಗಗಳನ್ನು ನಡೆಸಿ ಅವುಗಳನ್ನು ಉತ್ಪಾದಕವನ್ನಾಗಿ ಮಾಡುವ ಉದ್ಧೇಶ ಹೊಂದಲಾಗಿದೆ. ಉತ್ಪಾದಕವಾಗುವ ಮತ್ತು ಹಾಲು ಹಿಂಡುವ ರಾಸುಗಳಿಗೆ ಹಿಂಡಿಯನ್ನು ಮತ್ತು ಮೇವನ್ನು ಹಾಕುವ ಮೂಲಕ ಹೆಚ್ಚಿನ ಸಗಣಿಯನ್ನು ಉತ್ಪಾದಿಸುವುದರ ಮೂಲಕ ಗೋಪಾಲಕರು ಸಾವಯವ ಗೊಬ್ಬರ ಉತ್ಪಾದನೆಯು ಹೆಚ್ಚುವಂತೆ ಮಾಡುವುದರಿಂದ ಸಾವಯವ ಕೃಷಿಗೆ ಉತ್ತೇಜನ ನೀಡಿದಂತೆ ಆಗುವುದೆಂದು ತಿಳಿಸಲಾಗಿದೆ.
ಯೋಜನೆಯ ಪ್ರಧಾನ ಸಂಶೋಧಕರು ಹಾಗೂ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತç ಮತ್ತು ವಿಷಶಾಸ್ತç ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಆದ ಡಾ: ಎನ್.ಬಿ.ಶ್ರೀಧರ ಇವರು ಶ್ರೀ ಆ.ಶ್ರೀ. ಆನಂದ್, ಅಧ್ಯಕ್ಷರು, ಸಾವಯವ ಕೃಷಿ ಮಿಷನ್ ಅವರಿಗೆ ವಿಶ್ವವಿದ್ಯಾಲಯದ ಪರವಾಗಿ ಅವರ ಕೃತಜ್ಞತೆಗಳನ್ನು ತಿಳಿಸುತ್ತಾ ಯೋಜನೆಯ ಸಂಪೂರ್ಣ ಅನುಷ್ಟಾನಕ್ಕಾಗಿ ಸಾರ್ವಜನಿಕರ ಸಹಕಾರ ಕೋರಿದ್ದಾರೆ.