ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ಇವರು ಮಂಡಿಸಿದ ಬಡ್ಜೆಟ್ “ಸರ್ವಸ್ಪರ್ಶಿ-ಸರ್ವವ್ಯಾಪ್ತಿ” ಬಡ್ಜೆಟ್ ಆಗಿದೆ.
• ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದೀಜಿಯವರ “ಸಬ್ ಕಾ ಸಾಥ್ – ಸಬ್ ಕಾ ವಿಕಾಸ್” ಎಂಬ ಆಶಯಕ್ಕೆ ಪೂರಕವಾಗಿ ಈ ಬಡ್ಜೆಟ್ ಮಂಡಿಸಿದ್ದಾರೆ.
• ಈ ಆಯವ್ಯಯವು ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಯುವಕರನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಅತ್ಯುತ್ತಮ ಅಯವ್ಯಯವಾಗಿದೆ.
• ಕೃಷಿ, ಕೈಗಾರಿಕೆ, ತೋಟಗಾರಿಕೆ, ಮೀನುಗಾರಿಕೆ, ಚರ್ಮೋಧ್ಯಮ, ಹೈನುಗಾರಿಕೆ, ನಾರಿನೋಧ್ಯಮ, ಹನಿ ಮತ್ತು ತುಂತುರು ನೀರಾವರಿ, ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಲಾಗಿದೆ.
• ಕೃಷಿಕರಿಗೆ ಅನುಕೂಲವಾಗಲೆಂದು “ಸಂಚಾರಿ ಹೆಲ್ತ್ ಕ್ಲಿನಿಕ್” ಸ್ಥಾಪನೆ ಮಾಡಿ, ಬೀಜ, ಗೊಬ್ಬರ ಮತ್ತು ಮಣ್ಣಿನ ಪರೀಕ್ಷೆಯನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಅನ್ನದಾತ ಕೃಷಿಕರಿಗೆ ಹೆಚ್ಚು ಆಧ್ಯತೆ ನೀಡಿದೆ.
• ತೋಟಗಾರಿಕೆಯನ್ನು ಉಧ್ಯಮವನ್ನಾಗಿ ಘೋಷಿಸಿ, ತೋಟಗಾರಿಕೆಗೆ ಉತ್ತೇಜನೆ ನೀಡಲಾಗಿದೆ.
• ನೀರು ಸಂರಕ್ಷಣೆ ಮತ್ತು ಅಂತರ್ಜಲ ಹೆಚ್ಚಿಸಲು ಹೆಚ್ಚು ಒತ್ತು ನೀಡಲಾಗಿದೆ.
• ಅಡಿಕೆ, ಕಾಫಿ, ತೆಂಗು ಮತ್ತು ರೇಷ್ಮೆ ಬೆಳೆಗಾರರಿಗೆ ಹೆಚ್ಚು ಪ್ರಾತಿನಿದ್ಯ ನೀಡಲಾಗಿದೆ.
• ತೆಂಗು ಅಭಿವೃದ್ಧಿ ಪಾರ್ಕ್, ನೂಲಿನ ಘಟಕ ಮತ್ತು ಹೊಸ ಸಿದ್ದ ಉಡುಪು ಘಟಕಗಳ ಸ್ಥಾಪನೆಗೆ ಹೆಚ್ಚಿನ ಆಧ್ಯತೆ ನೀಡಿದೆ.
• ಮನೆ ಮನೆ ಗಂಗಾ ಯೋಜನೆಯಡಿ 10 ಲಕ್ಷ ಮನೆಗಳಿಗೆ ನೀರಿನ ಸೌಕರ್ಯ ಕಲ್ಪಿಸಲಾಗುತ್ತಿದೆ.
• ಮಹಿಳೆಯರಿಗಾಗಿ ವಿವಿಧ ಯೋಜನೆಗಳನ್ನು ಘೋಷಿಸಿದ್ದು, 1 ಲಕ್ಷ ಮಹಿಳಾ ಕಾರ್ಮಿಕರಿಗೆ ಉಚಿತ ಬಿ.ಎಂ.ಟಿ.ಸಿ. ಬಸ್ ಪಾಸ್ ನೀಡಲಾಗುತ್ತಿದೆ.
• ಮಹಿಳಾ ಮೀನುಗಾರರಿಗೆ ಸ್ಕೂಟರ್ ಖರೀದಿಸಲು ಸರ್ಕಾರದ ಅನುದಾನ ಮತ್ತು ಅಂಧ ತಾಯಂದರಿಗೆ ರೂ. 2,000/- ಶಿಶು ಪಾಲನಾ ಭತ್ಯೆಯನ್ನು ನೀಡಲಾಗುತ್ತಿದೆ.
• ಆಟೋ ಚಾಲಕರ ಮಕ್ಕಳಿಗೆ ಪ್ರತಿ ತಿಂಗಳು ರೂ. 2,000/- ವಿದ್ಯಾರ್ಥಿ ವೇತನ ಘೋಷಿಸಿದೆ.
• ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ವಾಹನ ಚಾಲನ ತರಬೇತಿ ನೀಡಿ, ವಾಹನ ಕೊಳ್ಳಲು ಸಾಲ ಸೌಲಭ್ಯ ನೀಡಲಾಗಿದೆ.
• ಮಹಿಳೆಯರಿಗೋಸ್ಕರ ಉದ್ಯೋಗ ಮಹಿಳಾ ವಸತಿ ನಿಲಯಗಳು, ಸಮಲೋಚನಾ ಕೇಂದ್ರ, ಮಹಿಳಾ ಸುರಕ್ಷಿತ ಕೋರ್ಟ್‍ನ್ನು ಸ್ಥಾಪಿಸಿದೆ.
• ಸ್ತ್ರೀ ಶಕ್ತಿ ಸಂಘಗಳು ಉತ್ಪಾದಿಸುವ ಉತ್ಪನ್ನಗಳನ್ನು ಸರ್ಕಾರದಿಂದ ಖರೀದಿಸಲು ಅವಕಾಶ ನೀಡಲಾಗಿದೆ.
• ಮೊಟ್ಟ ಮೊದಲ ಬಾರಿಗೆ ಮಕ್ಕಳಿಗಾಗಿಯೇ “ಮಕ್ಕಳ ಆಯವ್ಯಯ”ವನ್ನು ಮಂಡಿಸುವ ಮೂಲಕ ಮಕ್ಕಳಿಗೆ ಹೆಚ್ಚು ಒತ್ತು ನೀಡಲಾಗಿದೆ.
• ಮಕ್ಕಳಿಗಾಗಿ 7 ಬಾಲ ಮಂದಿರಗಳನ್ನು ಸ್ಥಾಪಿಸಲಾಗಿದೆ.
• ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ನೀಡುವ ಮೂಲಕ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಕಲ್ಪಿಸಿದ್ದಾರೆ.
• ಬಿ.ಪಿ.ಎಲ್. ಕಾರ್ಡ್‍ದಾರರಿಗೆ ಉಚಿತ ಡಯಾಲಿಸಿಸ್ ಅನ್ನು ಸರ್ಕಾರದಿಂದಲೇ ಮಾಡಿಸಲಾಗುತ್ತದೆ.
• ಹಿರಿಯ ನಾಗರೀಕರಿಗೆ ಜೀವನ ಚೈತನ್ಯ ಯಾತ್ರೆ ಎನ್ನುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆ
• ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ 787 ಎಕರೆ ಜಾಗದಲ್ಲಿ 155 ಕೋಟಿ ವೆಚ್ಚದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಅನುದಾನ ಒದಗಿಸಿದೆ.
• ಬುಡಕಟ್ಟು ವೈದ್ಯ ಪದ್ದತಿ ಕೇಂದ್ರವನ್ನು ಶಿವಮೊಗ್ಗದಲ್ಲಿ ಸ್ಥಾಪನೆ.
• ಅಡಿಕೆ ಬೆಳೆಗಾರರಿಗೆ ಗರಿಷ್ಟ 2 ಲಕ್ಷ ಸಾಲಕ್ಕೆ ಶೇ.5%ರಷ್ಟು ಬಡ್ಡಿ ವಿನಾಯಿತಿ ನೀಡಿದೆ.
• ತ್ಯಾವರೆಕೊಪ್ಪ ಸಿಂಹಧಾಮಕ್ಕೆ 5 ಕೋಟಿ ಅನುದಾನ ನೀಡಲಾಗಿದೆ.
• ಮಲೆನಾಡಿನ ರೈತರ ಬೆಳೆಗಳಿಗೆ ಮಾರಕವಾಗಿರುವ ಮಂಗಗಳ ಕಾಟವನ್ನು ತಡೆಯಲು ಶಿವಮೊಗ್ಗದಲ್ಲಿ ಮಂಕಿ ಪಾರ್ಕ್ ನಿರ್ಮಾಣ ಮತ್ತು ಪುನರ್ವಸತಿಗಾಗಿ ಮುಂದಿನ 5 ವರ್ಷಗಳಿಗೆ ಒಟ್ಟಾರೆ ರೂ. 6.25 ಕೋಟಿ ಒದಗಿಸುವ ಯೋಜನೆ ರೂಪಿಸಲಾಗಿದ್ದು, ಪ್ರಸಕ್ತ ಸಾಲಿಗೆ 1.25 ಕೋಟಿ ಮೀಸಲು.
• ಶಿವಮೊಗ್ಗ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳಿಗೆ ಮತ್ತು ಕೆಎ ತುಂಬಿಸುವ ಯೋಜನೆಗಳಿಗೆ ನೀರಾವರಿ ಇಲಾಖೆಯಿಂದ ಅನುದಾನವನ್ನು ಒದಗಿಸಲಾಗಿದೆ.
• ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಹೊಸ ಯೋಜನೆಗೆ ರಾಜ್ಯ ಸರ್ಕಾರವು ಶೇ.50ರಷ್ಟು ಹಣವನ್ನು ಮೀಸಲಿರಿಸಿದೆ.
ಈ ರೀತಿ ಜನಪರ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಟಾನಕ್ಕೆ ಪೂರಕವಾಗುವಂತಹ ಬಡ್ಜೆಟ್ ಮಂಡಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

- ಬಿ.ವೈ. ರಾಘವೇಂದ್ರ, 
   ಸಂಸದರು, ಶಿವಮೊಗ್ಗ.
error: Content is protected !!