ಸಾಮಾನ್ಯ ಶಿಕ್ಷಕರೊಬ್ಬರು ಸಮಾಜ ಮುಖಿಚಿಂತನೆ ಮಾಡಿದರೆ ಅಸಮಾನ್ಯ ವ್ಯಕ್ತಿ ಹಾಗೂ ಶಕ್ತಿಯಾಗಬಹುದು ಎಂಬುದಕ್ಕೆ ನಮ್ಮೆದುರಿನ ಉದಹಾರಣೆ ಎಂದರೆ ಡಾ|| ಹಾಫೀಜ್ ಕರ್ನಾಟಕಿ.
ಮೂಲತಃ ಶಿಕ್ಷಕ ದಂಪತಿಗಳ ಮಗನಾಗಿರುವ ಇವರು ತುಂಬಾ ಕಷ್ಟದಲ್ಲಿಯೇ ಶಿಕ್ಷಣ ಪಡೆದವರು ಹಾಗೆಯೇ ರಾಷ್ಟ್ರಮಟ್ಟದ ಸಾಹಿತಿಯೂ ಅದವರು ಇಚ್ಚಾ ಶಕ್ತಿಯೊಂದಿದ್ದರೆ ಈ ಸಮಾಜಕ್ಕೆ ಬಡ, ನಿರ್ಗತಿಕ ಮಕ್ಕಳಿಗೆ ಏನಾದರೂ ಕೊಡುಗೆ ನೀಡಬೇಕೆಂದು, ಹಂಬಲವಿದ್ದರೆ ಸಾದನೆ ಸಾದ್ಯ ಎಂದು ಸಾದಿಸಿ ತೋರಿಸಿದವರು ಡಾ|| ಹಾಪೀಜ್ ಕರ್ನಾಟಕಿಯವರು.
ನಜೀರ್ ಪಾಷ ಹಾಗು ಬಸೀರ್ ಉನ್ನಿಸಾ ದಂಪತಿಗಳ ಮಗನಾಗಿ ಶಿಕಾರಿಪುರರಲ್ಲಿ 18.06.1964 ಜನಿಸಿ ಅತ್ಯಂತ ಕಷ್ಟದ ಜೀವನದ ಅನುಭವವನ್ನು ಹೊಂದಿದವರು, ಕಲಿಯುವ ಹಂಬಲವನ್ನು ಬಾಲ್ಯದಲ್ಲಿಯೇ ಮೈಗೂಡಿಸಿ ಕೊಂಡ ಇವರು ವಿದ್ಯೆ ಮಾತ್ರ ನಮ್ಮನ್ನು ಕಾಪಾಡಬಲ್ಲದು ಎಂಬ ಸತ್ಯವನ್ನು ಚಿಕ್ಕವಯಸ್ಸಿನಲ್ಲಿಯೇ ಅರಿತವರು ಹಾಗೂ ಹೀಗೂ ವಿದ್ಯೆಯನ್ನು ಒಂದು ಹಂತಕ್ಕೆ ಕಲಿತು ಶಿಕ್ಷಕ ತರಬೇತಿ ಮಾಡಿ ತಂದೆ ತಾಯಿಯರಂತೆ ಶಿಕ್ಷಕರಾಗಿ ಜೀವನ ಆರಂಭಿಸಿ ತಾವಿದ್ದ ಶಾಲೆ ಹಾಗೂ ಅಲ್ಲಿನ ವಾತಾವರಣವನ್ನು ವಿಶಿಷ್ಟ ರೀತಿಯಲ್ಲಿರುವಂತೆ ನೋಡಿಕೊಂಡವರು ಪ್ರಾಥಮಿಕ, ಪೌಢ ಶಿಕ್ಷಣ ಶಿಕಾರಿಪುರದಲ್ಲಿ ಶಿಕ್ಷಕ ತರಬೇತಿ ಶಿಕ್ಷಣವನ್ನು ಹೀರೆಕೆರೂರು ತಾಲ್ಲೂಕಿನ ರಟ್ಟಿಹಳ್ಳಿಯಲ್ಲಿ ಮೈಸೂರು ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಹಾಗೂ ಬಿ.ಎಡ್ ಪದವಿಯನ್ನು ಅಣ್ಣಮಲಯ್ ವಿಶ್ವವಿದ್ಯಾಲಯದಲ್ಲಿ ಪಡೆದಿರುತ್ತಾರೆ. ತಮ್ಮ ಶಿಕ್ಷಕ ವೃತ್ತಿಯನ್ನು ಶಿಕಾರಿಪುರ ತಾಲ್ಲೂಕು ಬೆಳ್ಳಿಗಾವಿಯಲ್ಲಿ ಆರಂಭಿಸಿ ಕೆಲವು ಮಕ್ಕಳಿದ್ದ ಶಾಲೆಯಲ್ಲಿ ನೂರಾರು ಮಕ್ಕಳು ಬರುವಂತೆ ಮಾಡಿದ ಕೀರ್ತಿ ಇವರದು. ಮನೆಮನೆಗಳಿಗೆ ತೆರಳಿ ಪೋಷಕರಿಗೆ ವಿದ್ಯೆಯ ಬಗ್ಗೆ ಮಾಹಿತಿನೀಡಿ ಮಕ್ಕಳನ್ನು ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾದವರು ಡಾ|| ಹಾಫೀಜ್ಕರ್ನಾಟಕಿ ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯದ ಗೀಳು ಅಂಟಿಸಿಕೊಂಡು ಇವರು ವಿಶೇಷವಾಗಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಿದವರು ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ವೇದಿಕೆ ರಚಿಸಿ ಅದರ ಸ್ಥಾಪಕ ಅದ್ಯಕ್ಷರಾಗಿ ರಾಜ್ಯದ್ಯಾಂತ ಮಕ್ಕಳಿಗೆ ಸಾಹಿತ್ಯದ ಅರಿವು ಮೂಡಿಸಿವಲ್ಲಿ ಯಶಸ್ವಿಯಾದವರು ಈಗಾಗಲೆ ಹಮಾರೇ- ನಬಿ ಪಕ್ರೆ ವತನ್, ಸಾಜೇ ವತನ್, ಸೇರಿದಂತೆ 99 ಪುಸ್ತಕಗಳು ಹೊರಬಂದಿವೆ ಇನ್ನು ಕೆಲವೇ ದಿನಗಳಲ್ಲಿ ನೂರು ಪುಸ್ತಕಗಳ ಸರದಾರರಾಗಲಿದ್ದಾರೆ
ಈ ಉರ್ದು ಕವಿ. ಇವರ ಪಕ್ರೆ ವತನ್ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಬಾಲ ಸಾಹಿತ್ಯ ಪುರಸ್ಕಾರ) ದೊರಕಿದೆ , ಸಾಜೇ ವತನ್ ಹಿಂದಿ ಅವತರಣಿಕೆ ರಾಷ್ಟ್ರ ಅಂತರ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿದೆ . 2009 ರಿಂದ 2013ಈ ಅವಧಿಯಲ್ಲಿ ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿ ಯಲ್ಲಿ ಅಕ್ಕ ಮಹಾ ದೇವಿ , ಬಸವಣ್ಣ , ಕನಕದಾಸ , ಕೃತಿಗಳನ್ನು ಉರ್ದುಭಾμÉಗೆ ಭಾμÁಂತರ ಮಾಡಿದ್ದಾರೆ.ರಾಜ್ಯಾದ್ಯಂತ ಬಹು ಭಾಷ ಕವಿ ಸಮ್ಮೇಳನ ನಡೆಸಿ ನೂರಾರು ಸಾಹಿತಿಗಳಿಗೆ ನೆರವಾಗಿದ್ದಾರೆ.
ಗುಲ್ಬಾರ್ಗ ವಿಶ್ವವಿದ್ಯಾಲಯ ಹಾಗೂ ಜೇರುಸಲೆಂವಿಶ್ವವಿದ್ಯಾಯ ಮಲೇಶಿಯಾದಿಂದ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ, ಇವರ ಕುರಿತು 3 ಜನ ವಿದ್ಯಾರ್ಥಿಗಳು ಪಿ.ಹೆಚ್ಡಿ , ಎಂಫಿಲ್ ಅದ್ಯಯನ ಮುಗಿಸಿದ್ದಾರೆ. ಒಟ್ಟಾರೆ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾವಿರಾರು ಮಕ್ಕಳಿಗೆ ಶಿಕ್ಷಣ ಸಂಸ್ಕಾರ ವನ್ನು ನೀಡಿದ ಸಮಾಜ ಮುಖಿ ಶಿಕ್ಷಕರಾಗಿ ಹಾಗೂ ಉರ್ದು ಸಾಹಿತ್ಯದಲ್ಲಿ ಅಂತರ ರಾಷ್ಟ್ರ ಮಟ್ಟದ ಹೆಸರು ಮೂಡಿರುವ ಇಂತಹ ಅಪರೂಪದ ಹಿಂದೂ ಮುಸ್ಲಿಂ ಐಕ್ಯತಾ ಮಾನೋಭಾವ ಹೊಂದಿ ಎಲ್ಲಧರ್ಮದವರನ್ನು ಅಪ್ಪಕೊಳ್ಳುವ, ಒಪ್ಪಿಕೊಳ್ಲುವ , ಪ್ರೀತಿಸುವ ಸ್ಪಂದಿಸುವ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿರುವ ಡಾ!! ಹಾಫೀಜ್ ಕರ್ನಾಟಕಿ ಶಿಕಾರಿಪುರದವರು ಎಂಬುದು ಎಲ್ಲರ ಹೆಮ್ಮೆಯಾಗಿದೆ.
2001 ರಿಂದ 2005ರವರೆಗೆ ಕರ್ನಾಟಕ ಸರ್ಕಾರದ ಪಠ್ಯಪುಸ್ತಕ ಪರೀಸ್ಕರಣೆ(ಡಿ.ಎಸ್.ಇ.ಆರ್.ಟಿ)ಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹೆಮ್ಮೆ ಇವರಾದ್ದಾಗಿದೆ.
2006ರಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವಾಗ ಬಡ ಮಕ್ಕಳಿಗಾಗಿ ಶಾಲೆÀ ತೆರೆದು ಕಾರ್ಯನಿರ್ವಹಣೆಯಲ್ಲಿ ಆಡಚಣೆ ಆಗ ಬಾರದು ಎಂಬ ಕಾರಣದಿಂದ ಶಿಕ್ಷಕವೃತ್ತಿಗೆ ರಾಜಿನಾಮೆ ನೀಡಿ ಸಂಪೂರ್ಣ ಸಮಯವನ್ನು ವಿದ್ಯಾ ಸಂಸ್ಥೆಗೆ ಮಿಸಲಿರಿಸಿ ಕಾರ್ಯ ನಿರ್ವಹಿಸುವ ಮೂಲಕ ಸಾವಿರಾರು ಮಕ್ಕಳ ಬದುಕಿಗೆ ಬೆಳಕಾಗಿದ್ದಾರೆ
1990 ರ ದಶಕದಲ್ಲಿ ಹಳ್ಳಿಯೂರು ತೇರು ಬೀದಿಯಲ್ಲಿ ಕೇಲವು ಮಕ್ಕಳಿಂದ ಆರಂಭವಾದ ಶಾಲೆ ಕಲಾನುಸಾರ ಇವರ ವಿಶೇಷ ಅಸಕ್ತಿ ಹಾಗೂ ಕೇಲವು ಹೃದಯವಂತ ಜನರ ಸಹಕಾರದಿಂದ ಜಯನಗರ ಬಡವಣೆಯಲ್ಲಿ ಜಮೀನು ಖರೀದಿಸಿ ಬುಬೇದ ವಿದ್ಯಾಸಂಸ್ಥೆ ಆರಂಭಿಸಿ. ಇದರ ಸಂಸ್ಥಾಪಕ ಅಧ್ಯಕ್ಷ ರಾಗಿ ಬಡತನ ರೇಖೆಯಲ್ಲಿರುವ ಹಾಗೂ ತಂದೆ ತಾಯಿಯನ್ನು ಕಳೆದುಕೊಂಡ ಆನಾಥ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಚಿಂತನೆ ನೆಡೆಸಿದ ಇವರು ಹೆಣ್ಣುಮಕ್ಕಳಿಗೆ ಹಾಗೂ ಗಂಡು ಮಕ್ಕಳಿಗೆ ಎಲ್.ಕೆ. ಜಿ ಯಿಂದ ಪದವಿ ಶಿಕ್ಷಣದವರೆಗೆ ಶಿಕ್ಷಣ ನೀಡಿದ ಕೀರ್ತಿ ಇವರದು. ಉತ್ತಮ ಶಿಕ್ಷಣ ನೀಡಿ ಸಾವಿರಾರು ಮಕ್ಕಳಿಗೆ ದಾರಿ ದೀಪವಾಗಿದ್ದಾರೆ ಈ ಸಂಸ್ಥೆಯಲ್ಲಿ ಕಲಿತ ಅನೇಕ ಮಕ್ಕಳು ಈಗ ಉನ್ನತ ಶಿಕ್ಷಣವಾದ ಇಂಜಿನಿಯರ್, ವೈದ್ಯರು, ದೇಶ ಕಾಯುವ ಸೈನೀಕರು, ಶಿಕ್ಷಕರು, ಸೇರಿದದಮತೆ ಅತ್ಯುತ್ತಮ ಗಾಯಕರನ್ನು ಸಮಾಜಕ್ಕೆ ನೀಡಿದ ಕೀರ್ತಿ ಇವರದಾಗಿದೆ. ರಾಜ್ಯದ ವಿವಿದಡೆ ಶಾಲಾ ಕಾಲೇಜು, ದೇವಸ್ಥಾನದಲ್ಲಿ ಕುಡಿಯುವ ನೀರಿಗಾಗಿ ನೂರಾರು ಕೊಳೆವೆ ಬಾವಿ ಕೋರಿಸಿದ್ದಾರೆ. ಸಾವಿರಾರು ವಿಧವೆ ಯರಿಗೆ ಬಡ ಮತ್ತು ಅನಾಥ ಮಕ್ಕಳಿಗೆ ಮಾಸಿಕ ಧನಸಹಾಯ ಮಾಡುತ್ತಿದ್ದಾರೆ
ಸರ್ವ ಧರ್ಮ ಸಮನ್ವಯ ವ್ಯಕ್ತಿಯಾಗಿರುವ ಇವರು ರಾಜ್ಯದ ವಿವಿದ ಮಠಾದೀಶರೊಂದಿಗೆ ಕ್ರೇಸ್ತ ಪಾದ್ರಿಗಳೊಂದಿಗೆ ಹಾಗೂ ಎಲ್ಲಾ ಪಕ್ಷಗಳ ಮುಖಂಡರೊದಿಂಗೆ ಪ್ರೀತಿಯಿಂದ ಇರುವ ಇವರು ಸರ್ವ ಧರ್ಮ ಸಮೇಳನವನ್ನು ನೇಡೆಸಿ ಸಮಾಜಕ್ಕೆ ಶಾಂತಿ ಸದೇಶ ಸಾರಿದ್ದಾರೆ ವಿವಿಧ ಕ್ಷೇತ್ರ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರು, ಸಾಹಿತಿಗಳು, ವೈದ್ಯರು, ಪರಿಸರ ಪ್ರೇಮಿಗಳು, ಚಿತ್ರನಟರು, ಪತ್ರಕರ್ತರು, ಸ್ವತಂತ್ರ್ಯ ಹೋರಾಟಗಾರರು, ಸೇರಿದಂತೆ ಸಮಾಜದ ವಿವಿದ ಸ್ಥರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಾನೀಯರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ ಕೀರ್ತಿ ಇವರದ್ದಾಗಿದೆ ಇಂತಹ ವಿಶೇಷ ವ್ಯಕ್ತಿ ಶಿಕಾರಿಪುರದವರು ಎಂಬ ಹೆಮ್ಮೆ ಎಲ್ಲರಿಗೂ ಇದೆ.
ಕೆ.ಎಸ್ ಹುಚ್ರಾಯಪ್ಪ.
(ಪತ್ರಕರ್ತರು)
9448983834