BY: LOKESH JAGANNATH
24 September 2021
ಶಿವಮೊಗ್ಗ, ಸೆಪ್ಟಂಬರ್ 24 : ರಾಜ್ಯದಲ್ಲಿ ಗೋವಿನ ಸಂಪನ್ಮೂಲಗಳನ್ನು ರಕ್ಷಿಸಲು, ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆಯನ್ನು ಜಾರಿಗೊಳಿಸಿದ್ದು, ಈ ಕಾಯ್ದೆಗೆ ಪೂರಕವಾಗಿ ಗೋಹತ್ಯೆಯನ್ನು ತಡೆಗಟ್ಟಲು ಮತ್ತು ಜಾನುವಾರುಗಳನ್ನು ಸಂರಕ್ಷಿಸಲು ಪ್ರತಿ ಜಿಲ್ಲೆಯಲ್ಲಿ ಒಂದು ಗೋಶಾಲೆಯನ್ನು ಸ್ಥಾಪಿಸಲು ಉದ್ದೇಶಿಸಿದೆ.
ಜಿಲ್ಲೆಯಲ್ಲಿ ಹಾಲಿ ಇರುವ ಗೋಶಾಲೆಯನ್ನು ಜಿಲ್ಲಾ ಗೋಶಾಲೆಯನ್ನಾಗಿಸಿ ವಿಸ್ತರಿಸುವ ಅಥವಾ ಪ್ರೋತ್ಸಾಹಿಸುವ ಸಂಬಂಧ ಈಗಾಗಲೇ ಶಿವಮೊಗ್ಗದಲ್ಲಿ ಅಸ್ತಿತ್ವದಲ್ಲಿರುವ ಗೋಶಾಲೆಗಳನ್ನು ನಡೆಸುತ್ತಿರುವ ಖಾಸಗಿ ಟ್ರಸ್ಟ್ನವರು ದಿ: 29/09/2021 ರೊಳಗಾಗಿ ಉಪನಿರ್ದೇಶಕರು, ಪಶುಪಾಲನಾ ಇಲಾಖೆ, ಶಿವಮೊಗ್ಗ ಇವರನ್ನು ಸಂಪರ್ಕಿಸಿ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಅಭಿಪ್ರಾಯ ನೀಡಬಹುದಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಜಿಲ್ಲಾ ಪ್ರವಾಸ
ಶಿವಮೊಗ್ಗ, ಸೆಪ್ಟಂಬರ್ 24 : ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ರವರು ಸೆಪ್ಟೆಂಬರ್ 25 ರಿಂದ 27 ರವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಸೆ. 25 ರಂದು ರಾತ್ರಿ ಕೆ.ಆರ್.ಪೇಟೆಯಿಂದ 7 ಗಂಟೆಗೆ ಹೊರಟು 10 ಗಂಟೆಗೆ ಶಿವಮೊಗ್ಗ ತಲುಪಿ ವಾಸ್ತವ್ಯ ಮಾಡುವರು.
ಸೆಪ್ಟೆಂಬರ್ 26 ರಂದು ಬೆಳಿಗ್ಗೆ 9.15 ಕ್ಕೆ ಶಿರಾಳಕೊಪ್ಪಕ್ಕೆ ತೆರಳಿ ಬೆ. 11.00ಕ್ಕೆ ಶಿರಾಳಕೊಪ್ಪದ ನೂತನವಾಗಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.3.30ಕ್ಕೆ ಈಸೂರಿನಲ್ಲಿ ನಡೆಯುವ ‘ಆಜಾದಿ ಕಾ ಅಮೃತ್ ಮಹೋತ್ಸವ’ ಮತ್ತು ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 5.30ಕ್ಕೆ ಶಿವಮೊಗ್ಗ ಆಗಮಿಸಿ ವಾಸ್ತವ್ಯ ಮಾಡುವರು.