ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕೋಶ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ ಇಲ್ಲಿ ಏರ್ಪಡಿಸಿದ್ದ ವಿಶ್ವವಿದ್ಯಾಲಯ ಮಟ್ಟದ “ಸಂವಿಧಾನ ಓದು” ಕುರಿತ ಒಂದು ದಿನದ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ರಾಜ್ಯ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾದೀಶರುಗಳಾದ ಜಸ್ಟೀಸ್ ನಾಗ್‍ಮೋಹನ ದಾಸ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ “ ಈ ದೇಶದ ಎಲ್ಲಾ ಸಾಮಾಜಿಕ, ಆರ್ಥಿಕ, ನ್ಯಾಯಪರವಾದ ಚಿಂತನೆಗೆ ಮೂಲ ತಳಹದಿಯೇ ಭಾರತದ ಸಂವಿಧಾನ ವಾಯಿದೆ. ಸಂವಿಧಾನ ಭಾರತ ಆತ್ಮ; ನಮ್ಮ ತಾಯಿ, ಪಾಳೇಗಾರಿಕೆಯ ಪ್ರಭುತ್ವವನ್ನು ಕಿತ್ತೊಗೆದು ಪ್ರಜಾ ಪ್ರಭುತ್ವವನ್ನು ಅನುಷ್ಠಾನ ಗೊಳಿಸಿದ ಭಾರತೀಯರ ಪೂಜ್ಯ ಗ್ರಂಥ ಸಂದಿಧಾನವೇ ಹೊರತು ಬೇರೆ ಯಾವುದೋ ಅಲ್ಲ. ಜಾತ್ಯಾತೀತತೆ, ನ್ಯಾಯಪರವಾದ ಬದುಕುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರವನ್ನು ಎತ್ತಿಹಿಡಿದ ನಮ್ಮ ಸಂವಿಧಾನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ. ಆಗಲೇ ಭಾರತದ ಬಹುತ್ವಕ್ಕೆ ಅರ್ಥ ಬರುತ್ತದೆ” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕುವೆಂಪು ವಿಶ್ವವಿದ್ಯಾಲಯದ ವಿಧಾರ್ಥಿ ಕ್ಷೇಮ ಪಾಲನಾ ಡೀನ್ ಆದಂತಹ ಪೆÇ್ರ.ಗುರುಲಿಂಗಯ್ಯ ಅವರು ಮಾತನಾಡಿ “ ಇಂದು ನಾವು ಅರ್ಥಮಾಡಿಕೊಳ್ಳಬೇಕಾದುದು ಈ ದೇಶದ ಬಹುತ್ವವನ್ನು ಯಾವುದೋ ಒಂದು ಧರ್ಮ, ಜಾತಿಯಿಂದ ಭಾರತದ ಏಕತೆ ನಿರ್ಧಾರವಾಗುವುದಿಲ್ಲ. ಬಹುಜನರ, ದೀನ ಧಲಿತರ ಈ ಭಾರತವನ್ನು ನಾವು ತಿಳಿದುಕೊಳ್ಳಬೇಕಾಗಿರುವುದೇ ಈ ಸಂವಿಧಾನದಿಂದ. ಈ ಕಾರಣಕ್ಕಾಗಿ ಸಂವಿಧಾನದ ಓದು ಅವಶ್ಯವೆಂದು ನುಡಿದರು.

ಕುವೆಂಫು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ.ಗಿರಿಧರ್ ಕೆ.ವಿ. ಸರ್ವರನ್ನೂ ಸ್ವಾಗತಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಅಭಿಯಾನದ ನೋಡಲ್ ಅಧಿಕಾರಿಗಳಾದ ಡಾ. ವಿಠಲ್ ಭಂಡಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯರಾದ ಪೆÇ್ರ. ಎಚ್.ಎಂ. ವಾಗ್ದೇವಿ, ಸಹ್ಯಾದ್ರಿ ವಿಜ್ನಾನ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ.ಶೆಶಿರೇಖ ಕೆ.ಆರ್. ಭಾಗವಹಿಸಿದ್ದರು. ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸ್ವಯಂ ಸೇವಕರು ಗೀತೆಗಳನ್ನು ಹಾಡಿದರು. ಡಾ. ವಿದ್ಯಾಶಂಕರ್, ರಾಸೇಯೋ ಅಧಿಕಾರಿಗಳು ವಂದನಾರ್ಪಣೆ ಮಾಡಿದರು. ಡಾ. ಶುಭಾ ಮರವಂತೆ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನವದೆಹಲಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಶ್ರೀ ವಿವೇಕ್ ಎಚ್.ಎ. ಇವರನ್ನು ಸನ್ಮಾನಿಸಲಾಯಿತು. ನಂತರ ಎಲ್ಲರೂ ಸಂವಾದಲ್ಲಿ ತೊಡಗಿ “ಸಂವಿಧಾನ ಓದು” ಅಭಿಯಾನದ ಮಹತ್ವ ಪಸರಿಸಿದರು.

error: Content is protected !!