ಶಿವಮೊಗ್ಗ, ಜುಲೈ. 20 : ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಇದುವರೆಗೆ ಶೇ.37ರಷ್ಟು ಮಳೆ ಕೊರತೆ ಉಂಟಾಗಿದ್ದು, ಭತ್ತ ನಾಟಿ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ.
ಜಿಲ್ಲೆಯಲ್ಲಿ ಒಟ್ಟು ವಾರ್ಷಿಕ ಮಳೆ 2237 ಮಿಲಿ ಮೀಟರ್ ಆಗಿದ್ದು, ಈ ಸಾಲಿನ ಸರಾಸರಿ ಮಳೆಯು ಜುಲೈ 19ರ ವರೆಗೆ 675 ಮಿಲಿ ಮೀಟರ್ ಆಗಿದೆ. ಈ ವೇಳೆಗೆ 1071 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಇಲ್ಲಿಯ ವರೆಗೂ 64 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿದೆ.
ಜಿಲ್ಲೆಯ ವಿವಿಧ ತಾಲ್ಲೂಕೂಗಳ ವಾಡಿಕೆ ಮಳೆ ಹಾಗೂ ಬಿದ್ದ ಮಳೆ ಈ ರೀತಿ ಇದೆ. ಶಿವಮೊಗ್ಗ ವಾಡಿಕೆ ಮಳೆ 228 ಮಿಮಿ, ಬಿದ್ದ ಮಳೆ203 ಮಿಮಿ, ಭದ್ರಾವತಿ ವಾಡಿಕೆ ಮಳೆ221 ಮಿಮಿ, ಬಿದ್ದ ಮಳೆ 146 ಮಿಮಿ, ತೀರ್ಥಹಳ್ಳಿ ವಾಡಿಕೆ ಮಳೆ 1503 ಮಿಮಿ, ಬಿದ್ದ ಮಳೆ 77ಂ ಮಿಮಿ, ಸಾಗರ ವಾಡಿಕೆ ಮಳೆ 1221 ಮಿಮಿ, ಬಿದ್ದ ಮಳೆ 1068 ಮಿಮಿ, ಹೊಸನಗರ ವಾಡಿಕೆ ಮಳೆ 1378 ಮಿಮಿ, ಬಿದ್ದ ಮಳೆ 1003 ಮಿಮಿ, ಶಿಕಾರಿಪುರ ವಾಡಿಕೆ ಮಳೆ 312 ಮಿಮಿ, ಬಿದ್ದ ಮಳೆ 216 ಮಿಮಿ, ಸೊರಬ ವಾಡಿಕೆ ಮಳೆ 740 ಮಿಮಿ, ಬಿದ್ದ ಮಳೆ 389 ಮಿಮಿ, ಸೊರಬ ವಾಡಿಕೆ ಮಳೆ 740 ಮಿಮಿ, ಬಿದ್ದ ಮಳೆ 389 ಮಿಮಿ, ಮಳೆ ಆಗಿದೆ. ಒಟ್ಟಾರೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 925 ಮಿಮಿ ಮಳೆ ಆಗಬೇಕಿತ್ತು ಆದರೆ 641 ಮಿಮಿ ಮಳೆಯಾಗಿದ್ದು ಶೇಕಡ 31 ರಷ್ಟು ಮಳೆ ಕೊರತೆ ಉಂಟಾಗಿದೆ.
ಈ ಸಾಲಿನಲ್ಲಿ ವಾಡಿಕೆ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಬಿತ್ತನೆಯ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಇಲ್ಲಿಯ ವರೆಗೆ 64,247 ಹೆಕ್ಟರ್ ಬಿತ್ತನೆ ಕಾರ್ಯ ನಡೆದಿದ್ದು ನಿರ್ದಿಷ್ಟಿತ ಗುರಿ 1,59,457 ಹೆಕ್ಟರ್ ಬಿತ್ತನೆಯ ಕಾರ್ಯದ ಗುರಿ ಇರಿಸಿಕೊಂಡಿರಲಾಗಿತ್ತು. ಇದರಲ್ಲಿ 99,684 ಹೆಕ್ಟರ್ ಭತ್ತ, 55’100 ಹೆಕ್ಟರ್ ಮುಸುಕಿನ ಜೋಳ ಬಿತ್ತನೆಯ ಗುರಿ ಹೊಂದಿದ್ದು ಭತ್ತದ ಬಿತ್ತನೆ 10,172 ಹೆಕ್ಟರ್ ಹಾಗೂ ಮುಸುಕಿನ ಜೋಳ 52,331 ಹೆಕ್ಟರ್ ಬಿತ್ತನೆ ಕಾರ್ಯ ಸಾಧ್ಯವಾಗಿದೆ.
ಬಿತ್ತನೆ ಕಾರ್ಯದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ವಿವಿರ ಹೀಗಿದೆ. ಶಿವಮೊಗ್ಗ ಬಿತ್ತನೆಯ ಗುರಿ 26,064 ಹೆಕ್ಟರ್, ಬಿತ್ತನೆಯ ಸಾಧನೆ 13,003 ಹೆಕ್ಟರ್, ಭದ್ರಾವತಿ ಬಿತ್ತನೆಯ ಗುರಿ 10,351 ಹೆಕ್ಟರ್, ಬಿತ್ತನೆಯ ಸಾಧನೆ 2526 ಹೆಕ್ಟರ್, ತೀರ್ಥಹಳ್ಳಿ ಬಿತ್ತನೆಯ ಗುರಿ 13,058 ಹೆಕ್ಟರ್, ಬಿತ್ತನೆಯ ಸಾಧನೆ 52 ಹೆಕ್ಟರ್, ಸಾಗರ ಬಿತ್ತನೆಯ ಗುರಿ 19,220 ಹೆಕ್ಟರ್ ಬಿತ್ತನೆಯ ಸಾಧನೆ 7160 ಹೆಕ್ಟರ್, ಹೊಸನಗರ ಬಿತ್ತನೆಯ ಗುರಿ 11,324 ಹೆಕ್ಟರ್ ಬಿತ್ತನೆಯ ಸಾಧನೆ 875 ಹೆಕ್ಟರ್, ಶಿಕಾರಿಪುರ ಬಿತ್ತನೆಯ ಗುರಿ 41,825 ಹೆಕ್ಟರ್, ಬಿತ್ತನೆಯ ಸಾಧನೆ 22,430.ಸೊರಬ ಬಿತ್ತನೆಯ ಗುರಿ 37,615ಹೆಕ್ಟರ್ ಹಾಗೂ ಬಿತ್ತನೆ ಕ್ಷೇತ್ರದ ಸಾಧನೆ 18,201 ಹೆಕ್ಟರ್ ಆಗಿದೆ.
ಕಿಸಾನ್ ಸಮ್ಮಾನ್: ಇದರೊಂದಿಗೆ ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯು ಅರ್ಹ ರೈತ ಫಲಾನುಭವಿ ಕುಟುಂಬಗಳಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂಗಳನ್ನು ನೀಡುವ ಯೋಜನೆಯಾಗಿದೆ.
ಕಿಸಾನ್ ಸಮ್ಮಾನ್ ಯೋಜನೆಗೆ ಹೆಸರು ನೋಂದಾಯಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಇಲ್ಲಿಯ ವರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಆನ್ಲೈನ್ನಲ್ಲಿ ನೋಂದಾವಣೆಗೊಂಡ ರೈತರ ಅಂಕಿಅಂಶಗಳು ಹೀಗಿದೆ. ಶಿವಮೊಗ್ಗ 21,114, ಭದ್ರಾವತಿ 21,617, ತೀರ್ಥಹಳ್ಳಿ 15,515, ಸಾಗರ 19001, ಹೊಸನಗರ 12,019, ಶೀಕಾರಿಪುರ 26,936, ಸೊರಬ 26,852 ಜಿಲ್ಲೆಯಲ್ಲಿ ಒಟ್ಟು ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 14,43,054 ಆಗಿರುತ್ತದೆ.
ಫಸಲ್ ಬಿಮಾ ಯೋಜನೆ: ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಬೆಳೆ ಸಾಲ ಪಡೆಯಲು ಬೆಳೆ ವಿಮೆ ಕಡ್ಡಾಯವಾಗಿದ್ದು ರೈತರು ಹತ್ತಿರದ ಸೆವಾ ಕೇಂದ್ರಗಳಲ್ಲಿ (ಸಿಎಸ್ಸಿ), ಡಿಸಿಸಿ ಮತ್ತು ಇತರೆ ಬ್ಯಾಂಕ್ಗಳಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಬೆಳೆ ವಿಮೆ ನೋಂದಾಯಿಸಲು ಕೊನೆಯ ದಿನಾಂಕ ಆಗಷ್ಟ್ 14 ಆಗಿರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್ ತಿಳಿಸಿದ್ದಾರೆ