ಶಿವಮೊಗ್ಗ ಲೋಕಸಭಾ ಸದಸ್ಯನಾಗಿ ಶಿವಮೊಗ್ಗ ಭಾಗಕ್ಕೆ ರೈಲು ಸೇವೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದೇನೆ. ಇದರಿಂದಾಗಿ ಕಳೆದ 10 ವರ್ಷಗಳಲ್ಲಿ ಶಿವಮೊಗ್ಗಕ್ಕೆ ಅನೇಕ ನೂತನ ರೈಲು ಸೇವೆಗಳು ಪರಿಚಯಿಸಲ್ಪಟ್ಟಿದೆ.
ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಯವರು, ಮಾನ್ಯಕೇಂದ್ರರೈಲ್ವೆ ಸಚಿವರಾದಂತಹ ಶ್ರೀಯುತ ಫೀಯುಶ್ಗೋಯಲ್ರವರು ಹಾಗೂ ಮಾನ್ಯಕೇಂದ್ರರೈಲ್ವೆ ರಾಜ್ಯ ಸಚಿವರಾದಂತಹ ಶ್ರೀಯುತ ಸುರೇಶ್ಅಂಗಡಿಯವರ ಬಳಿಯಲ್ಲಿ ನಿರಂತರವಾಗಿ ಸಲ್ಲಿಸಿದ ಮನವಿಗಳು ಹಾಗೂ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀಯುತ ಯಡಿಯೂರಪ್ಪರವರಒತ್ತಾಸೆಯ ಕಾರಣದಿಂದ, ರೈಲ್ವೆ ಮಂತ್ರಾಲಯವು ಶಿವಮೊಗ್ಗ ನಗರಕ್ಕೆ ವಾರದಲ್ಲಿಒಮ್ಮೆ ಸಂಚರಿಸುವ ಮೂರುರೈಲು ಸೇವೆಗಳನ್ನು ಆರಂಭಿಸಲು ನಿರ್ಧಾರವನ್ನುತೆಗೆದುಕೊಂಡಿದೆ.
ಆ ಮೂರು ರೈಲ್ವೆ ಸೇವೆಗಳು
1) ರೈಲುಗಾಡಿ ಸಂಖ್ಯೆ 06221/06222 ಶಿವಮೊಗ್ಗ-ಚೆನ್ನೈ-ಶಿವಮೊಗ್ಗ (ವಾರಕ್ಕೊಮ್ಮೆ ಸಂಚರಿಸುವ) ಎಕ್ಸ್ಪ್ರೆಸ್
2) ರೈಲುಗಾಡಿ ಸಂಖ್ಯೆ 06223/06224 ಶಿವಮೊಗ್ಗ-ರೇಣಿಗುಂಟ(ತಿರುಪತಿ)ಶಿವಮೊಗ್ಗ (ವಾರಕ್ಕೊಮ್ಮೆ ಸಂಚರಿಸುವ)ಎಕ್ಸ್ಪ್ರೆಸ್
3) ರೈಲುಗಾಡಿ ಸಂಖ್ಯೆ 06225/06226 ಮೈಸೂರು-ಶಿವಮೊಗ್ಗ-ಮೈಸೂರು ಜನಸಾಧಾರಣ (ವಾರಕ್ಕೊಮ್ಮೆ ಸಂಚರಿಸುವ) ಎಕ್ಸ್ಪ್ರೆಸ್
ಈ ನೂತನರೈಲು ಸೇವೆಗಳು ಆರಂಭಗೊಳ್ಳುವುದರೊಂದಿಗೆ ಶಿವಮೊಗ್ಗ ನಗರ ಹಾಗೂ ಮೈಸೂರಿನ ಮಧ್ಯೆ ಮತ್ತೊಂದುರೈಲು ಸೇವೆ ದೊರೆತಂತಾಗುತ್ತದೆ. ಜೊತೆಗೆ ಶಿವಮೊಗ್ಗ ಭಾಗದಿಂದತಿರುಪತಿಗೆ ಹೋಗ ಬಯಸುವ ಯಾತ್ರಾರ್ಥಿಗಳಿಗೆ ನೇರರೈಲು ಸೇವೆ ದೊರಕಲ್ಪಡುತ್ತದೆ ಹಾಗೂ ಭಾರತದ ನಾಲ್ಕು ಮಹಾನಗರಗಳಲ್ಲಿ ಒಂದಾದಚೆನ್ನೈನ್ನು ಶಿವಮೊಗ್ಗದೊಂದಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ.
ಶಿವಮೊಗ್ಗ-ರೇಣಿಗುಂಟ (ತಿರುಪತಿ) ರೈಲು ಬೀರೂರು, ಚಿಕ್ಕಜಾಜೂರು, ಬಳ್ಳಾರಿ, ಗುಂತಕಲ್ಲು, ಕಡಪ ಮಾರ್ಗವಾಗಿ ಹಾಗೂ ಶಿವಮೊಗ್ಗ-ಚೆನ್ನೈ ರೈಲು ಬೆಂಗಳೂರಿನ ಚಿಕ್ಕಬಾಣಾವರ, ಬಾಣಸವಾಡಿ ಹಾಗೂ ಕೆ.ಆರ್.ಪುರಂ ಮತ್ತು ಬಂಗಾರಪೇಟೆ, ಜೋಲಾರಪೇಟೆಗಳ ಮೂಲಕ ಸಂಚರಿಸಲಿದೆ. ಈ ಮೂಲಕ ಈ ಎರಡೂರೈಲು ಸೇವೆಗಳು ಇಲ್ಲಿಯವರೆಗೆ ಶಿವಮೊಗ್ಗ ಭಾಗದಜನರಿಗೆರೈಲಿನ ಮೂಲಕ ನೇರವಾಗಿತಲುಪಲುಆಗದ ಸ್ಥಳಗಳಿಗೆ ನೇರ ಸಂಪರ್ಕದ ಸೇತುವೆಯಾಗಿಕಾರ್ಯನಿರ್ವಹಿಸಲಿವೆ ಹಾಗೂ ಶಿವಮೊಗ್ಗ ಭಾಗದರೈತರ, ಉದ್ದಿಮೆದಾರರ, ಉದ್ಯೋಗಿಗಳ, ವಿದ್ಯಾರ್ಥಿಗಳ ಹಾಗೂ ಯಾತ್ರಾರ್ಥಿಗಳ ಬಹುದಿನಗಳ ನಿರೀಕ್ಷೆಯನ್ನು ಪೂರೈಸಲಿವೆ.
ಈ ಸೇವೆಗಳಿಗೆ ನವೆಂಬರ್ 10ನೇ ತಾರೀಖು ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಶಿವಮೊಗ್ಗ ನಗರರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡುವಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.