ಮಹಿಳೆಯರಲ್ಲಿ ಸ್ವಾವಲಂಬನೆ, ಧೈರ್ಯ, ಸಾಹಸವನ್ನು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಕಂಡುಬರುತ್ತಿರುವ ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳಲ್ಲಿ ಜಾಗೃತಿ, ಧೈರ್ಯ ತುಂಬಿದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಸಹಯೋಗದಲ್ಲಿ ಶಿವಮೊಗ್ಗದ ನಿರ್ಭಯಾ ತರಬೇತಿ ಕೇಂದ್ರ ತರಬೇತಿ ನೀಡಿದ್ದು, ಉಚಿತವಾಗಿ ಕಳೆದ ಐದು ವರ್ಷಗಳಿಂದ ಕರಾಟೆ ತರಬೇತಿಯನ್ನು ಸಹ ನೀಡುತ್ತಿದೆ.
ಹೆಣ್ಣುಮಕ್ಕಳಿಗಾಗಿಯೇ ಈ ಸಂಸ್ಥೆಯನ್ನು ತೆರೆಯಲಾಗಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆಗಾಗಿ ತರಬೇತಿ ನೀಡುತ್ತಿದ್ದಾರೆ. ವಿನೋದ್ ಮತ್ತು ತಂಡ ಈ ಸಂಸ್ಥೆಯ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದೆ. ಶಿವಮೊಗ್ಗದ ಕರಾಟೆ ಸಂಸ್ಥೆಗೆ ನೆಹರೂ ಕ್ರೀಡಾಂಗಣದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆಯ ಕಟ್ಟಡವೊಂದನ್ನು ಸಂಸ್ಥೆಗೆ ನೀಡಿ ಸಹಕರಿಸುತ್ತಿದೆ.
ಮಹಿಳೆಯರಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತಿರುವ ಈ ಸಂಸ್ಥೆ ರಾಜ್ಯದಲ್ಲಿಯೇ ಪ್ರಥಮವಾಗಿ ನಿರ್ಭಯಾಳ ಹೆಸರಿನಲ್ಲಿ ಕರಾಟೆ ತರಬೇತಿಯನ್ನು ನೀಡುತ್ತಿದ್ದು ಐದು ವರ್ಷದ ಮಕ್ಕಳಿಂದ ಹಿಡಿದು ಮಹಿಳೆಯರಿಗೂ ತರಬೇತಿ ನೀಡುತ್ತಿದ್ದಾರೆ. ಏಕಾಂಗಿಯಾಗಿ ಹೇಗೆ ಎದುರಿಗಿರುವ ಶತ್ರುಗಳನ್ನು ಹೊಡೆದು ನೆಲಕ್ಕುರುಳಿಸಬಹುದು ಮತ್ತು ಅಪಾಯದ ಸಂದರ್ಭದಲ್ಲಿ ಧೈರ್ಯ ತಂದುಕೊಳ್ಳುವುದು, ಮನಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಎಲ್ಲಾ ರೀತಿಯ ತರಬೇತಿ, ತಾಲೀಮು ನೀಡುತ್ತಿದ್ದಾರೆ. ಅದರಲ್ಲಿಯೂ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳಿಗೂ ಕೂಡ ಆಯಾ ಪ್ರದೇಶಕ್ಕೇ ತೆರಳಿ ತರಬೇತಿ ನೀಡಲಾಗುತ್ತಿದೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಹೆಣ್ಣುಮಕ್ಕಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

, ವಿದ್ಯಾರ್ಥಿನಿ ಆರ್ಫಾ ಮಾತನಾಡಿ ನಾನು ನಿರ್ಭಯಾ ಕರಾಟೆ ಕೇಂದ್ರದಲ್ಲಿ ಕಲಿಯುತ್ತಿದ್ದೇನೆ. ಇಲ್ಲಿ ಕಲಿಕೆಯ ಜೊತೆಯಲ್ಲಿ ನಮಗೆ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬುತ್ತಿದ್ದಾರೆ.

ಚರಿತ್ರಾ, ವಿದ್ಯಾರ್ಥಿನಿ ಮಾತನಾಡಿ ಕರಾಟೆ ಕಲಿಕೆಯಿಂದ ನನಗೆ ತುಂಬಾ ಧೈರ್ಯ ಬಂದಿದೆ. ನಾನು ಸಮರ್ಥವಾಗಿ ಎಲ್ಲವನ್ನೂ ಎದುರಿಸಬಲ್ಲೆ.

ಶ್ರೀಶ ಡಿ.ಕೆ., ವಿದ್ಯಾರ್ಥಿನಿ ಮಾತನಾಡಿ ನಾನು ಕಳೆದ ಎರಡು ವರ್ಷದಿಂದ ಕಲಿಯುತ್ತಿದ್ದೇನೆ. ಕರಾಟೆಯ ಜೊತೆಯಲ್ಲಿ ನಮಗೆ ವ್ಯಾಯಾಮವನ್ನೂ ಹೇಳಿಕೊಡುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ಕಲಿಯುತ್ತಿದ್ದೇವೆ.

ಸಂಜನ ವಿ. ವಿದ್ಯಾರ್ಥಿನಿ ಮಾತನಾಡಿ ನಾನು ಮಾನಸಿಕವಾಗಿ ಅಷ್ಟು ಗಟ್ಟಿ ಇಲ್ಲ ಎಂದು ಪೋಷಕರು ಕರಾಟೆಗೆ ಸೇರಿಸಿದರು. ಈಗ ಕರಾಟೆ ನನ್ನಲ್ಲಿ ಧೈರ್ಯ ತುಂಬಿದೆ. ಪುರಸ್ಕಾರವನ್ನೂ ಪಡೆದಿದ್ದೇನೆ.

ಪೋಷಕರಾದ ನೂತನ್‌ ಮಾತನಾಡಿ ನನ್ನ ಮಗಳು ಈ ಕರಾಟೆ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಮಕ್ಕಳಲ್ಲಿ ಧೈರ್ಯ ತುಂಬಲು ನಿರ್ಭಯಾ ಕರಾಟೆ ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿದೆ. ಮಕ್ಕಳಿಗೆ ಓದಿನ ಜೊತೆಯಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು.

ಶಿಯಾನ್ ಬಾಲರಾಜ್,ತರಬೇತದಾರರರು ಕರಾಟೆ ಸಂಸ್ಥೆ ಮುಖ್ಯಸ್ಥರು:ಮಾತನಡಿ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರದ ಪ್ರಕರಣಗಳು ಕಂಡುಬರುತ್ತಿವೆ. ಅವರ ರಕ್ಷಣೆ ಮಾಡಿಕೊಳ್ಳಲು ಕರಾಟೆಯಂತಹ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಮಕ್ಕಳಿಂದ ಹಿಡಿದು ಮಹಿಳೆಯರವರೆಗೆ ಉಚಿತವಾಗಿ ಕರಾಟೆ ಕಲಿಸುತ್ತಿದ್ದೇವೆ. ಎಲ್ಲರೂ ಪ್ರಯೋಜನ ಪಡೆದುಕೊಳ್ಳಬೇಕು.

ವೆಂಕಡೇಶ್‌ , ತರಬೇತುದಾರ ಮಾತನಾಡಿ ನಮ್ಮ ನಿರ್ಭಯಾ ಕರಾಟೆ ಸಂಸ್ಥೆ ಜಿಲ್ಲೆಯ ವಿವಿಧೆಡೆಗಳಲ್ಲಿ ಶಾಲಾ ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ಕರಾಟೆ ತರಬೇತಿ, ಹೆಣ್ಣುಮಕ್ಕಳು ಅಪಾಯದ ಸಂದರ್ಭದಲ್ಲಿ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎನ್ನುವ ಬಗ್ಗೆ ಕೆಲವು ಕಸರತ್ತುಗಳ ಮೂಲಕ ತಾಲೀಮು ನೀಡುತ್ತಿದ್ದೇವೆ. ಈಗಾಗಲೇ ಐದು ವರ್ಷದಲ್ಲಿ ಸಾವಿರಾರು ಹೆಣ್ಣುಮಕ್ಕಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ನಿರ್ಭಯಾ ಅತ್ಯಾಚಾರ ಪ್ರಕರಣ ದೇಶದ ಜನರಲ್ಲಿ ಆತಂಕ ಮೂಡಿಸಿದ ಸಂದರ್ಭದಲ್ಲಿಯೇ ಶಿವಮೊಗ್ಗದಲ್ಲೊಂದು ನಿರ್ಭಯಾ ಕರಾಟೆ ತರಬೇತಿ ಕೇಂದ್ರ ಹೆಣ್ಣುಮಕ್ಕಳಿಗೆ ಉಚಿತವಾಗಿ ಕರಾಟೆಯನ್ನು ಕಲಿಸಿಕೊಡುವ ಮೂಲಕ ಹೊಸಭಾಷ್ಯ ಬರೆದಿದೆ.

error: Content is protected !!