
ಪ್ರಸಾದ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಶಿವಮೊಗ್ಗ ನಗರದ ರೋಟರಿ ಬ್ಲಡ್ ಬ್ಯಾಂಕ್ ರಸ್ತೆಯಲ್ಲಿ ಆರಂಭಗೊಂಡಿರುವ “ಮಲ್ನಾಡ್ ಕಣ್ಣಿನ ಆಸ್ಪತ್ರೆ”ಯನ್ನು ಜೋತಿಷ್ಯ ವಿದ್ವಾನ್ ಕಬಿಯಾಡಿ ಜಯರಾಮ್ ಆಚಾರ್ಯ ಉದ್ಘಾಟಿಸಿದರು.
ಪ್ರಸಾದ್ ನೇತ್ರಾಲಯವು ರಾಜ್ಯದಲ್ಲಿ ಎರಡು ದಶಕಗಳಿಂದ ನೇತ್ರ ಚಿಕಿತ್ಸೆ ಸೇವೆ ಒದಗಿಸುತ್ತಿದ್ದು, ದೇಶ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಉಚಿತ ತಪಾಸಣಾ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಇದೀಗ ಶಿವಮೊಗ್ಗ ನಗರದಲ್ಲಿ ಸುಸಜ್ಜಿತ, ಆಧುನಿಕ ತಂತ್ರಜ್ಞಾನ ವ್ಯವಸ್ಥೆಯುಳ್ಳ ಮಲ್ನಾಡ್ ಕಣ್ಣಿನ ಆಸ್ಪತ್ರೆ ಶುಭಾರಂಭಗೊಂಡಿದೆ.
ಮಲ್ನಾಡ್ ಕಣ್ಣಿನ ಆಸ್ಪತ್ರೆಯು ಶಿವಮೊಗ್ಗ ಜಿಲ್ಲೆ ಸೇರಿದಂತೆ ಸುತ್ತಮುತ್ತ ಜಿಲ್ಲೆಗಳ ಜನರಿಗೆ ಉತ್ತಮ ನೇತ್ರ ಚಿಕಿತ್ಸೆ ಸೇವೆ ಒದಗಿಸಲಿದೆ. ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ಉಪಕರಣಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.
ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು, ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ, ಎಂಎಲ್ಸಿ ಎಸ್.ರುದ್ರೇಗೌಡ, ಪ್ರಸಾದ್ ನೇತ್ರಾಲಯ ನಿರ್ದೇಶಕ ಡಾ. ಬಾಲಚಂದ್ರ ತೆಗ್ಗಿಹಳ್ಳಿ, ಸಮೂಹ ಕಣ್ಣಿನ ಆಸ್ಪತ್ರೆ ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ಮಕ್ಕಳ ತಜ್ಞೆ ಡಾ. ಅಪರ್ಣಾ ಜೆ., ಪ್ರಮುಖರಾದ ಎಸ್.ಪಿ.ದಿನೇಶ್, ಜ್ಯೋತಿಪ್ರಕಾಶ್, ಎನ್.ಜೆ.ರಾಜಶೇಖರ್, ಕೆ.ರಘುರಾಮರಾವ್, ನಿವೃತ್ತ ಪ್ರಾಚಾರ್ಯ ಜಯಪ್ಪ ಉಪಸ್ಥಿತರಿದ್ದರು.