ಶಿವಮೊಗ್ಗದಲ್ಲಿ ಕಳೆದ ಮೂರು ದಿನಗಳಿಂದ ಅಂತರಾಷ್ಟ್ರೀಯ ದ್ರಾಕ್ಷಾ ರಸ ಉತ್ಸವ ಆಯೋಜನೆ ಗೊಂಡಿತ್ತು. ಈ ಉತ್ಸವ ಶಿವಮೊಗ್ಗ ಜನತೆಯನ್ನು ಕಿಕ್ ಏರಿಸುವಂತೆ ಮಾಡಿತು. ಇಲ್ಲಿ ಸುಮಾರು 150ಕ್ಕೂ ಹೆಚ್ಚು ವಿವಿಧ ಬ್ರಾಂಡ್ನ ಕಂಪನಿಗಳ ವೈನ್ ಪ್ರದರ್ಶನ ಹಾಗು ಮಾರಾಟವನ್ನು ಏರ್ಪಡಿಸಲಾಗಿತ್ತು. ಈ ಉತ್ಸವದಲ್ಲಿ 12 ರಿಂದ 13 ವೈನರಿಗಳು ಬಾಗವಹಿಸಿದ್ದವು.
ಇಲ್ಲಿ ರೆಡ್ವೈನ್, ವೈಟ್ವೈನ್, ಡೆಸರ್ಟವೈನ್, ಗಳ ಪ್ರದರ್ಶನ ಹಾಗು ಮಾರಾಟವನ್ನು ನಿರೀಕ್ಷೆಗೂ ಮೀರಿ ನಡೆಯಿತು. ಜನರು ಅವರವರ ಇಚ್ಚಗೆ ಅನುಸಾರವಾಗಿ ದ್ರಾಕ್ಷಾರಸವನ್ನು ಖರೀದಿ ಮಾಡುತ್ತಿರುವುದು ಕಂಡುಬಂತು.
ಮಾಧ್ಯಮಗಳೊಂದಿಗೆ ಮತನಾಡಿದ ಟಿ.ಸೋಮು, ವ್ಯವಸ್ತಾಪಕರು, ಕರ್ನಾಟಕ ದ್ರಾಕ್ಷಾರಸ ಮಂಡಳಿ, ಇವರು ಮಾತನಾಡಿ ಶಿವಮೊಗ್ಗದ ಜನತೆಗೆ ಅಂತರಾಷ್ಟ್ರೀಯ ದ್ರಾಕ್ಷಾ ರಸ ಉತ್ಸವದ ಪ್ರದರ್ಶನ ಹಾಗು ಮಾರಾಟ ಏರ್ಪಡಿಸಿದ್ದೇವೆ, ಜನರೂ ಕೂಡ ಉತ್ತಮ ವಾಗಿ ಸ್ಪಂದಿಸುತ್ತಿದ್ದಾರೆ. ರಾಜ್ಯದಲ್ಲಿ ದ್ರಾಕ್ಷಾ ರಸಕ್ಕೆ ದಿನೇ ದಿನೆ ಬೇಡಿಕೆಯೂ ಕೂಡ ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ 4 ಕಕ್ಕೂ ಹೆಚ್ಚು ದ್ರಾಕ್ಷಾ ರಸ ಉತ್ಪಾದನಾ ಘಟಕಗಳು ಇದ್ದು ದಿನೇ ದಿನೇ ಉತ್ತಮ ಬೇಡಿಕೆ ಬರುತ್ತಿರುವುದು ಕಂಡು ಬರುತ್ತಿದೆ. ದ್ರಾಕ್ಷಿ ಬೆಳೆಗಾರರಿಗೂ ಕೂಡ ಇದರಿಂದ ಉತ್ತಮ ಭವಿಷ್ಯವಿದೆ ಮುಂದಿನ ದಿನಗಳಲ್ಲಿ ದ್ರಾಕ್ಷಾರಸಕ್ಕೆ ಬಹು ಬೇಡಿಕೆ ಬರಲಿದೆ ಎಂದು ಹೇಳಿದರು.
ಶಿವಮೊಗ್ಗದ ಜನತೆಯೂ ಕೂಡ ದ್ರಾಕ್ಷಾ ರಸ ಉತ್ಸವದ ಪ್ರದರ್ಶನ ಹಾಗು ಮಾರಾಟದಲ್ಲಿ ಭಾಗಿಯಾಗಿ ದ್ರಾಕ್ಷಾ ರಸದ ರುಚಿಯನ್ನು ಆಸ್ವಾದಿಸಿ ನಂತರ ಖರೀದಿ ಮಾಡಿ ಉತ್ಸವಕ್ಕೆ ಮೆರಗು ನೀಡಿದರು.