ಶಿವಮೊಗ್ಗ, ಮಾರ್ಚ್ 18 : ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಂದ 2020-21ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಶಾಲೆಗೆ ಹಾಜರಾಗಲು ಮತ್ತು ಮುಖ್ಯವಾಹಿನಿಗೆ ತರಲು ಮನೆಮನೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಸಮೀಕ್ಷಾದಾರರು ಮನೆ ಮನೆಗೆ ಭೇಟಿ ನೀಡಿದಾಗ ಮಗುವಿನ ಆಧಾರ್ ಕಾರ್ಡ್, ಜನನ ದಾಖಲೆ, ಪಾಸ್ಪೋರ್ಟ್ ಸೈಜಿನ ಫೋಟೋ, ರೇಷನ್ ಕಾರ್ಡ್, ತಂದೆ-ತಾಯಿಂದಿರ ಆಧಾರ್ ಕಾರ್ಡ್ಗಳೊಂದಿಗೆ ಮಾಹಿತಿ ನೀಡಲು ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಮನವಿ ಮಾಡಿರುತ್ತಾರೆ.