ಸಹ್ಯಾದ್ರಿ ವಿಜ್ಞಾನ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ ಒಂದು ಮತ್ತು ಎರಡರ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಮತದಾನ ಜಾಗೃತಿ ಕುರಿತು ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿ ಸುಪ್ರಿಯಾ ಕೆ ಆರ್’ ಮಾತನಾಡಿ ಮತದಾನ ಮಾಡಲು ಯುವ ನಾಗರಿಕ ಈ ಹಿಂದೆ 21 ವರ್ಷದವರಾಗಿರಬೇಕಿತ್ತು ಆದರೆ ಈಗ 18 ವರ್ಷದವರು ಮತದಾನ ಮಾಡಬಹುದು 17ನೇ ವಯೋಮಾನ ಇರುವಾಗಲೇ ನೋಂದಣಿಯನ್ನು ಮಾಡಿಕೊಳ್ಳಲು ಸರಕಾರವು ಯೋಜನೆಯನ್ನು ರೂಪಿಸಿದೆ.. ಏಕೆಂದರೆ ಮತದಾನವು ಮಹತ್ವಪೂರ್ಣವಾದದ್ದು ಹಾಗೆಯೇ ಮತದಾನವು ರಾಷ್ಟ್ರದ ಮಹತ್ವಪೂರ್ಣವಾದ ಹಬ್ಬವಾಗಿದ್ದು ಇದರಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ನುಡಿದರು..
ಜಗತ್ತಿನಲ್ಲಿ ಬೃಹತ್ತಾದ ಸಂವಿಧಾನ ಹೊಂದಿರುವ ರಾಷ್ಟ್ರ ಬಾರತವಾಗಿದ್ದು ಇಂತಹ ಭಾರತದ ಪ್ರಧಾನ ನಾಯಕನನ್ನು ಆಯ್ಕೆ ಮಾಡುವ ಹೊಣೆ ಭಾರತದ ಎಲ್ಲಾ ಪ್ರಜೆಗಳಿಗಿದೆ ಎಂಬ ಮತದಾನದ ಜಾಗೃತಿಯನ್ನು ಕುರಿತು ಉಪನ್ಯಾಸ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊ. ರಾಜೇಶ್ವರಿ ಎನ್ ಅವರು ವಹಿಸಿದ್ದರು. ಹಾಗೂ ಈ ಕಾರ್ಯಕ್ರಮದಲ್ಲಿ ಡಾ. ಹಾ. ಮಾ.ನಾಗಾರ್ಜುನಾ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳು ಕಾರ್ಯಕ್ರಮ ಸಂಯೋಜಿಸಿದರು ಮತ್ತು ಪ್ರೊ. ವಸಂತ್ ಕುಮಾರ್ ಪ್ರಾಧ್ಯಾಪಕರು ಉಪಸ್ತರಿದ್ದರು..
ಕುಮಾರಿ ತನುಷ ನಿರೂಪಿಸಿದರು ಹಾಗೂ ಕುಮಾರಿ ಹರ್ಷಿಣಿ ಮತ್ತು ತಂಡದವರು ಪ್ರಾರ್ಥಿಸಿದರು.. ಮಂಜುನಾಥ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು..

error: Content is protected !!