ಹಸಿರು ನಗರೀಕರಣದ ಮೂಲಕ ಶಿವಮೊಗ್ಗ ನಗರವನ್ನು ಪರಿಸರ ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸುವುದು ಶಿವಮೊಗ್ಗ ಸ್ಮಾರ್ಟ್‌ ಸಿಟಿಯ ಪ್ರಮುಖ ಗುರಿ. ಶಿವಮೊಗ್ಗ ಸ್ಮಾರ್ಟ್‌ ಸಿಟಿ ವ್ಯಾಪ್ತಿ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಜತೆಯಲ್ಲಿ ಸ್ಮಾರ್ಟ್‌ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ.

ಶಿವಮೊಗ್ಗ ಸ್ಮಾರ್ಟ್‌ ಸಿಟಿ ಯೋಜನೆ ವ್ಯಾಪ್ತಿಯಲ್ಲಿ 110 ಕೀಮಿ ಉದ್ದದ 8 ಸ್ಮಾರ್ಟ್‌ ರಸ್ತೆಗಳು, ಎಚ್‌ಟಿ/ಎಲ್‌ಟು ಎಲೆಕ್ಟ್ರಿಕಲ್‌ ಲೈನ್‌ಗಳು, ನೀರು ಸರಬರಾಜು ಮಾರ್ಗಗಳು, ಒಎಫ್‌ಸಿ ಲೈನ್‌ಗಳನ್ನು ಚಾಲನೆ ಮಾಡಲು ನೆಲದಡಿ ಯುಟಿಲಿಟಿ ಕಾರಿಡಾರ್‌ ಮಾಡಲಾಗಿದೆ. 34 ಕೀಮಿಗೆ ಮೀಸಲಾದ ಸೈಕಲ್‌ ಪಥಗಳನ್ನು ಸಿದ್ಧಪಡಿಸಿದ್ದು, ಒಟ್ಟಾರೆ 120 ಕೀಮಿ ಸೈಕಲ್‌ ಮಾಡಬಹುದಾದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ.

ಪ್ರಮುಖ ವಾಣಿಜ್ಯ ಪ್ರದೇಶದಲ್ಲಿನ ದಟ್ಟಣೆಯನ್ನು ಸುಧಾರಿಸುವ ಮೂಲಕ ಮತ್ತು ಟ್ರಾಫಿಕ್‌ ಪರಿಸ್ಥಿತಿಗಳು ಸುಧಾರಿಸುವ ನೀರಿಕ್ಷೆಯಿದೆ. ಸ್ಮಾರ್ಟ್‌ ಸಿಟಿ ಮಿಷನ್‌ ಅಡಿಯಲ್ಲಿ ಸ್ಮಾರ್ಟ್‌ ರಸ್ತೆಗಳ ಜಾಲವನ್ನು ಮೂರು ಆಯಾಮದ ಮತ್ತು ಜಿಐಎಸ್‌ ಆಧಾರಿತ ಮ್ಯಾಪಿಂಗ್‌ ವ್ಯವಸ್ಥೆಗೆ ಜೋಡಿಸಲಾಗಿದೆ. ಭವಿಷ್ಯದ ಕಾರ್ಯಾಚರಣೆ ಮತ್ತು ಡೇಟಾ ಚಾಲಿತ ಆಸ್ತಿ ಮ್ಯಾಪಿಂಗ್‌ ವ್ಯವಸ್ಥೆಯೊಂದಿಗೆ ನಿರ್ವಹಣೆ ಮಾಡಲಾಗುತ್ತಿದೆ.

ಶಿವಮೊಗ್ಗ ನಗರವನ್ನು 2016ರಲ್ಲಿ 2ನೇ ಸುತ್ತಿನ ಸ್ಮಾರ್ಟ್‌ ಸಿಟಿಗಳ ಸವಾಲಿಗೆ ಆಯ್ಕೆ ಮಾಡಲಾಯಿತು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಮಾನ ನಿಧಿಯ ಕೊಡುಗೆಯೊಂದಿಗೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸ್ಮಾರ್ಟ್‌ ಸಿಟಿಯ ವಿವಿಧ ಯೋಜನೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ವಿವಿಧ ಸ್ಮಾರ್ಟ್‌ ಸಿಟಿ ಯೋಜನೆಗಳು ಉದ್ಘಾಟನೆಗೆ ಸಿದ್ಧಗೊಂಡಿವೆ.

501.73 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಸ್ಮಾರ್ಟ್‌ ಸಿಟಿ ಮಿಷನ್‌ ಮೂಲಕ ಯೋಜನೆ ಅನುಷ್ಠಾನ ಮಾಡುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಾನ ನಿಧಿಯಡಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ತಲಾ 500 ಕೋಟಿ ರೂ. ನಿಧಿಯ ಕೊಡುಗೆಯನ್ನು ಐದು ವರ್ಷಗಳ ಅವಧಿಯಲ್ಲಿ ಬಿಡುಗಡೆ ಮಾಡಲಾಗಿದೆ.

ನಗರದ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಜತೆಯಲ್ಲಿ ಜೀವನ ಗುಣಮಟ್ಟ ಹೆಚ್ಚಿಸುವುದು, ಕಾರ್ಯಕ್ಷಮತೆ ಉನ್ನತೀಕರಿಸುವುದು ಸಾಧ್ಯವಾಗಲಿದೆ. ವೈವಿಧ್ಯ ಕಾರ್ಯಕ್ರಮಗಳ ಮೂಲಕ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನಗೊಳ್ಳಲಿದೆ.

error: Content is protected !!