ಸ್ಕೇಟಿಂಗ್ ಅತ್ಯುತ್ತಮ ಕ್ರೀಡೆ: ಈಶ್ವರಪ್ಪ
ಶಿವಮೊಗ್ಗ, ಸೆ.೨೭: ಶಿವಮೊಗ್ಗ ದಸರಾ ಸಂಭ್ರಮದಲ್ಲಿ ಇಂದು ಸ್ಕೇಟಿಂಗ್ ಹಬ್ಬ ಸುಮಾರು ೨೦೦ಕ್ಕೂ ಹೆಚ್ಚು ಮಕ್ಕಳಿಂದ ನಡೆದದ್ದು ವಿಶೇಷ. ಇಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಭಾನ್ವಿತ ಕ್ರೀಡಾಪಟುಗಳ ಪ್ರದರ್ಶನ ಮನೋಜ್ಞವಾಗಿತ್ತು. ಇಡೀ ಕ್ರೀಡಾಂಗಣ ಕ್ರೀಡಾಭಿಮಾನಿಗಳ ಹಾಗೂ ಪೋಷಕರ ಹರ್ಷೋದ್ಗಾರ ಘೋಷಣೆಗಳಲ್ಲಿ ಮೊಳಗಿತ್ತು.
ಮಕ್ಕಳ ದಸರಾ ಆಚರಣೆ ನಿಮಿತ್ತ ಇಂದು ಬೆಳಗ್ಗೆ ಗೋಪಾಲಗೌಡ ಬಡಾವಣೆಯ ಶಿವಮೊಗ್ಗ ಕ್ರೀಡಾ ಸಂಕಿರಣದಲ್ಲಿ ಆರಂಭಗೊಂಡ ೫ರಿಂದ ೧೫ವರ್ಷದೊಳಗಿನ ರಾಜ್ಯಮಟ್ಟದ ಸ್ಕೇಟಿಂಗ್ ಕ್ರೀಡಾಕೂಟವನ್ನು ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ಕೇಟಿಂಗ್ ಅತ್ಯುತ್ತಮ ಕ್ರೀಡೆಯಾಗಿದ್ದು, ಇಲ್ಲಿ ರಕ್ಷಣೆ ಅತಿಮುಖ್ಯವಾಗಿರುತ್ತದೆ. ವೇಗದ ಈ ಪಂದ್ಯಾವಳಿಯನ್ನು ಶಿವಮೊಗ್ಗ ದಸರಾ ಸಂಭ್ರಮದಲ್ಲಿ ನಿರಂತರವಾಗಿ ನಡೆಸುತ್ತಾ ಬಂದಿರುವುದ ಹೆಮ್ಮೆಯ ವಿಷಯ ಎಂದರು.


ಮಕ್ಕಳ ದಸರಾ ಸಮಿತಿಯ ಸದಸ್ಯೆ ಹಾಗೂ ಮಾಜಿ ಉಪಮೇಯರ್ ಸುರೇಖಾ ಮುರುಳೀಧರ್ ಅವರು ಮಾತನಾಡುತ್ತಾ, ಈ ಕ್ರೀಡಾ ಸಂಕಿರಣದಲ್ಲಿ ಈಜು ಹಾಗೂ ಇತರೆ ಕ್ರೀಡೆಗಳಂತೆ ಸ್ಕೇಟಿಂಗ್ ಸಹ ಅತ್ಯುತ್ತಮ ಕ್ರೀಡಾಂಗಣವನ್ನು ಹೊಂದಿದ್ದು, ಇದರ ಸದ್ಬಳಕೆ ಮಾಡಿಕೊಂಡ ಇಲ್ಲಿನ ನೂರಾರು ಮಕ್ಕಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿರಿಮೆಗಳಿಸಿರುವುದು ಸ್ವಾಗತಾರ್ಹ. ಶಿವಮೊಗ್ಗ ಮಹಾ ನಗರ ಪಾಲಿಕೆ ದಸರಾದ ಈ ಸಂದರ್ಭಧಲ್ಲಿ ನಡೆಸುತ್ತಿದ್ದ ನಗರಮಟ್ಟದ ಈ ಪಂದ್ಯಾ ಈಗ ರಾಜ್ಯಮಟ್ಟದವರೆಗೆ ವಿಸ್ತರಿಸಿದೆ ಎಂದರು.


ಮಕ್ಕಳ ದಸರಾದ ಅಧ್ಯಕ್ಷೆ, ಮಾಜಿ ಮೇಯರ್ ಲತಾಗಣೇಶ್ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಪಾಲಿಕೆಯ ಸದಸ್ಯರುಗಳು ಹಾಗೂ ಸಮಿತಿಯ  ಕಲ್ಪನಾ ರಮೇಶ್, ಸುವರ್ಣ ಶಂಕರ್, ಎನ್.ಎಸ್.ಮಂಜುನಾಥ್, ಜ್ಞಾನೇಶ್ವರ್, ಶಿವಕುಮಾರ್, ಲಕ್ಷ್ಮೀ ಶಂಕರ್‌ನಾಯ್ಕ್, ಸಂಗೀತ ನಾಗರಾಜ್, ಕಿರಣ್, ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್, ಆಯೋಜಕ ಸಂಸ್ಥೆಯಾದ ನ್ಯೂ ಹಾಟ್‌ವಿಲ್ಸ್‌ನ ಅಧ್ಯಕ್ಷ ಶಿ.ಜು.ಪಾಶ, ಉಪಾಧ್ಯಕ್ಷ ಎಸ್.ಕೆ.ಗಜೇಂದ್ರಸ್ವಾಮಿ, ಕಾರ್ಯದರ್ಶಿ ಎಂ.ರವಿ, ಸಂಪಾದಕರ ಸಂಘದ ಅಧ್ಯಕ್ಷ ಜಿ.ಪದ್ಮನಾಭ್, ರಾಜ್ಯ ಸ್ಕೇಟಿಂಗ್ ಅಸೋಸಿಯೇಷನ್‌ನ ವೀರಪ್ಪನಾಯ್ದು, ರಂಗಸ್ವಾಮಿ, ಇತರರಿದ್ದರು. ವಕೀಲರು ಹಾಗೂ ಸಮಿತಿಯ ಪ್ರವೀಣ್ ಕುಮಾರ್ ಸ್ವಾಗತಿಸಿದರು. ನಮ್ರತಾ ಪ್ರಾರ್ಥಿಸಿದರು. ಲೋಕೇಶಪ್ಪ ವಂದಿಸಿದರು.

error: Content is protected !!