ದಿನಾಂಕ: 21.12.2022ರ ಮಂಗಳವಾರ ಬೆಳಗ್ಗೆ 10.30ಕ್ಕೆ ಸರಿಯಾಗಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಫುಡ್ ಸೇಫ್ಟಿ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ) ಸಹಯೋಗದೊಂದಿಗೆ “ಆಹಾರ ಸುರಕ್ಷತಾ ಲೈಸೆನ್ಸ್ ಬೃಹತ್ ಮೇಳ”ವನ್ನು ಆಯೋಜಿಸಲಾಗಿದೆ. ಮೇಳದ ಉದ್ಘಾಟನೆಯನ್ನು ಮಹಾನಗರಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀಯುತ ಶಿವಕುಮಾರ್‍ರವರು ನೆರವೇರಿಸುವರು. ಸಂಘದ ಅಧ್ಯಕ್ಷರಾದ ಶ್ರೀ ಎನ್. ಗೋಪಿನಾಥ್‍ರವರು ಅಧ್ಯಕ್ಷತೆ ವಹಿಸುವರು. ಎಫ್.ಎಸ್.ಎಸ್.ಎ.ಐ. ಪ್ರಾಧಿಕಾರದ ಅಧಿಕಾರಿಗಳಾದ ಡಾ.ಮಧುರವರು ಮುಖ್ಯ ಅಥಿತಿಗಳಾಗಿ ಆಗಮಿಸುವರು. ಸಂಘದ ಕಾರ್ಯದರ್ಶಿ ಶ್ರೀ ವಸಂತ್ ಹೋಬಳಿದಾರ್ ಉಪಸ್ಥಿತರಿರುವರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯ ಭಾಂಧವರು ಹೊಸದಾಗಿ ಫುಡ್ ಲೈಸೆನ್ಸ್ ಪಡೆಯುವವರು, ಹಳೇ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳುವವರು ಸಂಘಕ್ಕೆ ಹಾಜರಾಗಿ ನೊಂದಣಿ ಮಾಡಿಸಿಕೊಳ್ಳುವ ಮೂಲಕ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.

    ಹೊಸದಾಗಿ ನೊಂದಣಿ ಮಾಡಿಸಿಕೊಳ್ಳಲು ನೊಂದಣಿ ಫೀ ರೂ.100.00 (ಆನ್ ಲೈನ್ ಮೋಡ್‍ನಲ್ಲಿ) ಕಟ್ಟಿ ಮಾಡಿಸಬಹುದು.  ಲೈಸೆನ್ಸ್ ಪಡೆಯಲಿಚ್ಚಿಸುವವರು ಈ ಕೆಳಕಂಡ ದಾಖಲೆಗಳೊಂದಿಗೆ ಹಾಜರಾಗಿ 1) ಆಧಾರ್ ಜೆರಾಕ್ಸ್, 2) ಪಾಸ್ ಪೋರ್ಟ್ ಸೈಜ್ ಭಾವಚಿತ್ರ  ಒಂದು 3) ಬಾಡಿಗೆ ಕರಾರು ಪತ್ರದ ಜೆರಾಕ್ಸ್ 4) ಪ್ಯಾನ್ ಕಾರ್ಡ್   5) ಟ್ರೇಡ್ ಲೈಸೆನ್ಸ್ 6) ಜಿ.ಎಸ್.ಟಿ ಪ್ರತಿ - ಮೂರು ಪೇಜ್‍ಗಳು 7) ಲೈಸೆನ್ಸ್ ವಾರ್ಷಿಕ ಫೀ ರೂ.2000.00 ಹೆಚ್ಚುವರಿಯಾಗಿ 5ವರ್ಷದವರೆಗೂ ಲೈಸೆನ್ಸ್ ಮಾಡಿಸಲು ಅವಕಾಶವಿರುತ್ತದೆ (ನಗದು (ಕ್ಯಾಷ್) ವ್ಯವಹಾರವಿರುವುದಿಲ್ಲ ಆನ್ ಲೈನ್ ಮೋಡ್‍ನಲ್ಲಿ ಮಾತ್ರ) ಹಳೇ ಲೈಸೆನ್ಸ್ ನವೀಕರಿಸುವವರು ಹಳೇ ಲೈಸೆನ್ಸ್ ಪ್ರತಿ ಒಂದು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಉದ್ದಮದ ಸೀಲ್ ತರುವುದು.

ಸಂಘದ ಮಾನ್ಯ ಸದಸ್ಯರುಗಳು, ಸಂಘದ ಸಂಯೋಜಿತ ಸಂಘ-ಸಂಸ್ಥೆಗಳ ಸದಸ್ಯರುಗಳು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಸಮಯಕ್ಕೆ ಸರಿಯಾಗಿ ಆಹಾರ ಲೈಸೆನ್ಸ್ ಮೇಳದಲ್ಲಿ ಭಾಗವಹಿಸಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಘದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

ವಿ.ಸೂ:- ಹೆಚ್ಚಿನ ಮಾಹಿತಿಗಾಗಿ ಸಂಘದ ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿ ಛೇರ್ಮನ್‍ರಾದ ಶ್ರೀ ಗಣೇಶ ಎಂ. ಅಂಗಡಿಯವರನ್ನು (ಮೊಬೈಲ್ ನಂ.9880044040) ಸಂಪರ್ಕಿಸಲು ಕೋರಲಾಗಿದೆ

error: Content is protected !!