ಶಿವಮೊಗ್ಗ ಸೆಪ್ಟೆಂಬರ್ 7 :ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ 2022 ರ ಜುಲೈ ಮಾಹೆಯಲ್ಲಿ ಉತ್ಕøಷ್ಟ ಗುಣಮಟ್ಟದ ಹಾಗೂ ಆಹಾರ ಸುರಕ್ಷತೆ ಪ್ರತೀಕವಾದ ಎಫ್‍ಎಸ್‍ಎಸ್‍ಸಿ(ಫುಡ್ ಸೇಫ್ಟಿ ಸಿಸ್ಟಂ ಸರ್ಟಿಫಿಕೇಟ್) ದೃಢೀಕರಣ ಪ್ರಮಾಣ ಪತ್ರ ಲಭಿಸಿರುತ್ತದೆ.
ಒಕ್ಕೂಟದ ಮಾಚೇನಹಳ್ಳಿ ಕಚೇರಿಯಲ್ಲಿ ಈSSಅ:22000:ಗಿ5.1 ದೃಢೀಕರಣ ಪತ್ರವನ್ನು ಅಧ್ಯಕ್ಷರಾದ ಶ್ರೀಪಾದರಾವ್‍ರವರು ನಿರ್ದೇಶಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.
2016 ರ ಜುಲೈ ಮಾಹೆಯಲ್ಲಿ ಐಎಸ್‍ಓ(ಇಂಟರ್‍ನ್ಯಾಷನಲ್ ಆರ್ಗನೈಸೇಷನ್ ಫಾರ್ ಸ್ಟ್ಯಾಂಡರ್ಡ್) 22000-2005 ದೃಢೀಕರಣ ಪ್ರಮಾಣ ಪತ್ರ ಪಡೆದಿದ್ದು ಈ ದೃಢೀಕರಣವು ರಾಷ್ಟ್ರಮಟ್ಟದಲ್ಲಿ ಮಹತ್ವ ಹೊಂದಿರುತ್ತದೆ ಹಾಗೂ ಉತ್ಕøಷ್ಟ ಗುಣಮಟ್ಟದ ಪ್ರತೀಕವಾಗಿರುತ್ತದೆ. ಆದಕಾರಣ ಉತ್ತಮ ಮಾರುಕಟ್ಟೆ ಒದಗಿಸಲು ಸಹಕಾರಿಯಾಗಿರುತ್ತದೆ. ಇದರ ಮುಂದುವರೆದು ಆವೃತ್ತಿಯಾದ ಈSSಅ:22000:ಗಿ5.1 ದೃಢೀಕರಣ ಪತ್ರವು ಈ ವರ್ಷದ ಜುಲೈ ಮಾಹೆಯಲ್ಲಿ ಲಭಿಸಿರುತ್ತದೆ.
ಐಎಸ್‍ಓ ವಿಶ್ವಮಾನ್ಯತೆ ಪಡೆದ ಸಂಸ್ಥೆಯಾಗಿದ್ದು ಈ ಸಂಸ್ಥೆಯು ಆಹಾರ ಸಂಸ್ಕರಣಾ ಘಟಕಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳ ಗುಣಮಟ್ಟವನ್ನು, ಗ್ರಾಹಕರ ಹಂತದಲ್ಲಿ ಪರೀಕ್ಷೆ ಮಾಡಿ, ಆಹಾರ ಪದಾರ್ಥಗಳಿಂದ ಗ್ರಾಹಕರಿಗೆ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಗಮನಿಸಲಾಗಿರುತ್ತದೆ. ವಿವಿಧ ರಾಷ್ಟ್ರಗಳ ಸದಸ್ಯತ್ವ ಹೊಂದಿದ ತಾಂತ್ರಿಕ ಅಧ್ಯಯನ ಸಮಿತಿಯು ಸಂಸ್ಕರಣ ಪದ್ದತಿ, ಮೂಲಭೂತ ಸೌಕರ್ಯ ಲಭ್ಯತೆ, ತಾಂತ್ರಿಕ ನೈಪುಣ್ಯತೆ ಹೊಂದಿದ ಅಧಿಕಾರಿ/ಸಿಬ್ಬಂದಿ ಇರುವಿಕೆ, ಇತ್ಯಾದಿ ಕುರಿತು ಆಹಾರ ಸುರಕ್ಷತಾ ಪ್ರಾಧಿಕಾರದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಉತ್ಪಾದನಾ ವಿಧಿವಿಧಾನಗಳು, ಆಹಾ ಪದಾರ್ಥಗಳ ಗುಣಮಟ್ಟ, ಸ್ವಚ್ಚತೆ ಹಾಗೂ ಮೂಲಭೂತ ಸೌಕರ್ಯಗಳ ಪರಿಶೋಧನೆ ಮಾಡಿಸಿ, ನಿಯಮಾವಳಿಗಳ ಪ್ರಕಾರ ಆಹಾರ ಉತ್ಪನ್ನ ಘಟಕಗಳು ಉತ್ಪಾದನೆ ಮಾಡಿದ್ದು ಕಂಡುಬಂದರೆ ಮಾತ್ರ ಐಎಸ್‍ಓ ದೃಢೀಕರಣ ಪ್ರಮಾಣ ನೀಡಲಾಗುತ್ತದೆ. ಅಂತಹ ಪ್ರಮಾಣಪತ್ರವನ್ನು ಒಕ್ಕೂಟ ಪಡೆದಿದೆ.
ಎಫ್‍ಎಸ್‍ಎಸ್‍ಸಿ ದೃಢೀಕರಣ ಐಎಸ್‍ಓ ದೃಢೀಕರಣದ ಮುಂದುವರಿದ ಆವೃತ್ತಿಯಾಗಿದ್ದು ಇಲ್ಲಿ ಆಯ್ದ ಪ್ರಮಾಣೀಕರಣ ಸಂಸ್ಥೆಗಳಿಂದ ಅಧಿಕಾರಿಗಳು, ನಿಯೋಜಿಸಿದ ಸಮಯದಲ್ಲಿ ಒಕ್ಕೂಟಕ್ಕೆ ಭೇಟಿ ನೀಡಿ, ಗುಣಮಟ್ಟ ಹಾಗೂ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಕೂಲಂಕುಷವಾಗಿ ಪರಿಶೀಲಿಸಿ ಅವರ ಪ್ರಮಾಣಿತ ನಿಯತಾಂಕಗಳು ಸಮರ್ಪಕವಾಗಿ ಪೂರ್ತಿಯಾದ ನಂತರದಲ್ಲಿ ಸಂಬಂಧಿಸಿದ ದೃಢೀಕರಣ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಒಮ್ಮೆ ದೃಢೀಕರಣ ಪಡೆದ ನಂತರ ಸಂಬಂಧಿಸಿದ ಪ್ರಮಾಣೀಕರಿಸಿದ ಸಂಸ್ಥೆಗಳಿಂದ ಅಧಿಕಾರಿಗಳು ಯಾವುದೇ ಸಮಯದಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಇಲ್ಲದೇ ಒಕ್ಕೂಟಕ್ಕೆ ಭೇಟಿ ನೀಡಿ ಪರಿಶೀಲಿಸಬಹುದಾಗಿರುತ್ತದೆ. ಈ ದೃಢೀಕರಣವು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಮಹತ್ವ ಹೊಂದಿರುತ್ತದೆ. ಮತ್ತು ಈ ದೃಢೀಕರಣ ಪಡೆದ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತವೆ.
ಅದೇ ರೀತಿ ನಮ್ಮ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಒಕ್ಕೂಟಕ್ಕೆ ಸಂಬಂಧಿಸಿದ ಮಾಹಿತಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸುವ ಸಂಸ್ಥೆಗಳಿಗೆ ಸಿಗುತ್ತವೆ. ಇದರಿಂದ ನಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಿಕೊಡುವಲ್ಲಿ ಸಹಕಾರಿಯಾಗುತ್ತದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ಬಸವರಾಜ ತಿಳಿಸಿದ್ದಾರೆ.
(ಫೋಟೊ ಇದೆ)

error: Content is protected !!