ಶಿವಮೊಗ್ಗ ಸೆಪ್ಟೆಂಬರ್ 21: ಶಿಕ್ಷಕರಿಗೆ ಶಿಕ್ಷಕ ಮಿತ್ರ ತಂತ್ರಾಂಶದ ಮೂಲಕ 17 ಸೇವಾ ಸೌಲಭ್ಯಗಳನ್ನು ಆನ್ಲೈನ್ ತಂತ್ರಾಂಶದ ಮೂಲಕ ಅನುಷ್ಟಾನಗೊಳಿಸಲು ಸೆ.15 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಆದೇಶಿಸಿರುವಂತೆ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದೆ.
ಕೇವಲ ಎರಡೇ ದಿನಗಳಲ್ಲಿ ಕಚೇರಿಗೆ ಒಟ್ಟು 797 ಅರ್ಜಿಗಳು ಸ್ವೀಕೃತಗೊಂಡಿದ್ದು, ಈ ಎಲ್ಲಾ ಅರ್ಜಿಗಳನ್ನು ಎರಡೇ ದಿನಗಳಲ್ಲಿ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಗಳಿಗೆ ಆನ್ಲೈನ್ ಮೂಲಕ ಸೌಲಭ್ಯ ಒದಗಿಸಲಾಗಿದೆ.
ಶಿಕ್ಷಕರ ಹಬ್ಬದ ಮುಂಗಡ, ರಜಾ ಸೌಲಭ್ಯಗಳು ಹಾಗೂ ವಿದೇಶ ಪ್ರವಾಸ ಮುಂತಾದ 17 ಸೇವಾ ಸೌಲಭ್ಯಗಳನ್ನು ಶಿಕ್ಷಕ ಮಿತ್ರ ತಂತ್ರಾಂಶದ ಮೂಲಕ ಅನುಷ್ಟಾನ ಮಾಡುತ್ತಿದ್ದು, ತ್ವರಿತಗತಿಯಲ್ಲಿ ಶಿಕ್ಷಕರಿಗೆ ಸೇವಾ ಸೌಲಭ್ಯ ನೀಡಲು ಸಾಧ್ಯವಾಗಿದೆ.
ಇದರಿಂದ ಕಚೇರಿಗೆ ಅಲೆಯುವುದು, ಭೌತಿಕವಾಗಿ ಅರ್ಜಿ ಸಲ್ಲಿಸುವ ಕಾರ್ಯವಿಲ್ಲದೇ, ತಾವಿರುವಲ್ಲಿಯೇ ಸ್ಮಾರ್ಟ್ಫೋನ್ ಮೂಲಕ ಶಿಕ್ಷಕ ಮಿತ್ರ ಆನ್ಲೈನ್ ತಂತ್ರಾಂಶದಲ್ಲಿ ಸೇವಾ ಸೌಲಭ್ಯ ಪಡೆಯಲು ಈ ವಿನೂತನ ಯೋಜನೆಯಿಂದ ಸಾಧ್ಯವಾಗಿದ್ದು ಅತ್ಯಂತ ಯಶಸ್ವಿ ಯೋಜನೆಯಾಗಿದೆ ಎಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.