ಶಿವಮೊಗ್ಗ, ಜೂನ್. 07 : ವ್ಯಕ್ತಿಗತ ಕನಸನ್ನು ಸಮುದಾಯದ ಕನಸನ್ನಾಗಿಸುವ ಕಲೆಯೆ ನಾಟಕ. ಮನುಷ್ಯ ಯಾವಾಗಲೂ ಬೀಕರ ವಾಸ್ತವಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾ£,É ಈ ಕಾರಣದಿಂದಲೇ ಕಲೆ ಸಾಹಿತ್ಯಗಳು ವಿಶೇಷ ಪ್ರಾಮುಖ್ಯತೆ ಪಡೆಯುತ್ತವೆ ಎಂದು ರಂಗವಿಮರ್ಶಕ ಹಾಗೂ ಸಮಾಜವಾದಿ ಚಿಂತಕ ಡಿ.ಎಸ್ ನಾಗಭೂಷಣ್ ಹೇಳಿದರು.
ಅವರು ನಗರದ ಸುವರ್ಣ ಸಂಸ್ಕøತಿ ಭವನದಲ್ಲಿ ರಂಗಾಯಣದ ರಂಗತೇರು ರೆಪರ್ಟರಿ ರಂಗಪಯಣ ಕಾರ್ರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಾವಿದರು ತಮ್ಮ ಮಿತಿಗಳನ್ನು ಮೀರಿ ಸಮಾಜದೊಂದಿಗೆ ಬೆರೆತಾಗ ಮಾತ್ರ ನಟನೆ ಅರ್ಥಪೂರ್ಣವಾಗಿ ಜನರ ಹೃದಯವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹೇಳೀದರು.
ನಾಟಕ ಹಾಗೂ ಕಲೆ ಸಾಹಿತ್ಯಗಳಿಂದ ಸಮಾಜ ಏನು ಕಲಿಯುತ್ತಿದೆಯೋ ನನಗೆ ಅರಿವಾಗುತ್ತಿಲ್ಲ, ಆದರೆ ಕಲೆ ಸಾಹಿತ್ಯಗಳಿಗೆ ಸಮಾಜಕ್ಕೆ ತಿಳುವಳಿಕೆ ಮೂಡಿಸುವ ಶಕ್ತಿ ಇದೆ. ಇದರಿಂದ ಜನರು ಅರಿತು ಬದುಕಿದರೆ ಒಂದು ಬದಲಾವಣೆಯ ಕ್ರಾಂತಿ ಮನಸ್ಸಲ್ಲಿ ಆಗಿ ಫಲಕೊಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಲಾವಿದರು ನಾಟಕ ಪ್ರದರ್ಶನಕ್ಕೆ ತೆರಳುವ ಎಲ್ಲಾ ವಿವಿಧ ಸ್ಥಳಗಳಲ್ಲೂ ಜನರಿಂದ ಹಾವ ಭಾವ, ಅಲ್ಲಿನ ಆಚರಣೆ, ಭಾಷೆ, ಬದುಕು ಇನ್ನಿತರೆ ವಿಷಯಗಳನ್ನು ಕಲಿಯಬೇಕು ಆಗ ಒಬ್ಬ ಕಲಾವಿದ ಪರಿಪೂರ್ಣನಾಗಲೂ ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ರಾಜ್ಯದ ವಿವಿಧ ಭಾಗಗಳಲ್ಲಿನ ರಂಗಾಯಣಗಳು ಶಿವಮೊಗ್ಗ ರಂಗಾಯಣದಷ್ಟು ಕ್ರಿಯಾಶೀಲವಾಗಿ ರಂಗಪಯಣದಲ್ಲಿ ತೊಡಗಿಕೊಂಡಿಲ್ಲ ಇದು ನಿರ್ದೇಶಕರಾದ ಎಂ. ಗಣೇಶ್, ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಹಾಗೂ ರಂಗ ವಿದ್ಯಾರ್ಥೀಗಳ ಒಂದು ಶ್ರಮದ ಫಲ ಎಂದು ಅವರು ಶ್ಲಾಘಿಸಿದರು.
ರಂಗಾಯಣ ನಿರ್ದೇಶಕ ಡಾ. ಎಂ ಗಣೇಶ್ ಮಾತನಾಡಿ ರಂಗತೇರು ಒಟ್ಟು ರಾಜ್ಯದಾದ್ಯಂತ 7000ಕಿ.ಮಿ ಕ್ರಮಿಸಲಿದ್ದು ಗೌರ್ಮೆಂಟ್ ಬ್ರಾಹ್ಮಣ, ಇದಕ್ಕೆ ಕೊನೆ ಎಂದು..?, ಮೆರವಣಿಗೆ ಹಾಗೂ ಟ್ರಾನ್ಸ್ನೇಷನ್ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ಕಲಾವಿದರು ತಾವು ನಾಟಕ ಪ್ರದರ್ಶಿಸುವ ಊರುಗಳನ್ನು ತಮ್ಮ ಊರೆಂದು ಭಾವಿಸಬೇಕು ಎಂದು ಅವರು ಸಲಹೆ ನೀಡಿದ ಅವರು ರಂಗ ವಿದ್ಯಾರ್ಥಿಗಳು ಪ್ರಯಾಣಕ್ಕೆ ಸಿದ್ಧಗೊಳ್ಳುತ್ತಿದ್ದಂತೆ ಭಾವುಕರಾಗಿ ‘ನನ್ನ ಮಕ್ಕಳು ಮನೆಯಿಂದ ದೂರವಾಗುವಂತೆ ಭಾಸವಾಗುತ್ತಿದೆ’ ಎಂದು ಗದ್ಗದಿತರಾದರು. ಅದಕ್ಕೆ ಪೂರಕವಾಗಿ ರಂಗ ವಿದ್ಯಾರ್ಥಿಗಳು ಸಹ ಭಾವುಕರಾದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲಾವಿದರ ರಂಗ ತಂಡಗಳ ಒಕ್ಕೂಟದ ಖಜಾಂಚಿ ಹಾಲಸ್ವಾಮಿ ಉಪಸ್ಥಿತರಿದ್ದರು.

error: Content is protected !!