ಪಶು ವೈದ್ಯಕೀಯ ಮಹಾ ವಿದ್ಯಾಲಯ ಶಿವಮೊಗ್ಗದಲ್ಲಿ ದಿನಾಂಕ:24.06.2019 ಮತ್ತು ದಿನಾಂಕ:25.06.2019 ರಂದು “ವೈಜ್ಞಾನಿಕ ಕೋಳಿ ಸಾಕಾಣಿಕೆ “ ಕುರಿತು ಎರಡು ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆಯ ಪ್ರಾಯೋಜನೆಯಡಿಯಲ್ಲಿ ಆಯೋಜಿಸಲಾಗಿದೆ. ಈ ತರಬೇತಿಯಲ್ಲಿ ಮಾಂಸ, ಮೊಟ್ಟೆ ಮತ್ತು ನಾಟಿ ಕೋಳಿಗಳ ಉತ್ಪಾದನೆ, ಪಾಲನೆ, ಪೋಷಣೆ, ನಿರ್ವಹಣೆ ಹಾಗೂ ರೋಗಗಳ ರಕ್ಷಣೆ ಬಗ್ಗೆ ಸಮಗ್ರ ಮಾಹಿತಿ ಮತ್ತು ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗುವುದು.30 ಜನರಿಗೆ ಸೀಮಿತಗೊಳಿಸಲಾದ ಈ ತರಬೇತಿ ಕಾರ್ಯಕ್ರಮಕ್ಕೆ ದಿ:23.06.2019ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ: ಡಾ. ಭರತ್ ಭೂಷಣ್.ಎಮ್, ತರಬೇತಿ ನಿರ್ದೇಶಕರು ಮತ್ತು ಸಹಾಯಕ ಪ್ರಾಧ್ಯಾಪಕರು, ಮೊಬೈಲ್ ಸಂ.8217847514, ಡಾ. ಉಮೇಶ್. ಬಿ. ಯು, ಸಹಾಯಕ ಪ್ರಾಧ್ಯಾಪಕರು, 9916208462 ಮತ್ತು ಡಾ. ಸತೀಶ್. ಜಿ.ಎಮ್. ಸಹಾಯಕ ಪ್ರಾಧ್ಯಾಪಕರು, 9448224595 ಇವರನ್ನು ಸಂಪರ್ಕಿಸಿ.

error: Content is protected !!