ಜುಲೈ 26 ಶಿವಮೊಗ್ಗ, ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನದ ಪ್ರಯುಕ್ತ ಸಹ್ಯಾದ್ರಿ ನಾರಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜುಲೈ 28ರಿಂದ ಆಗಸ್ಟ್ 5ನೇ ತಾರೀಖಿನವರೆಗೆಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ಉಚಿತವಾಗಿ ಹೆಪಟೈಟಿಸ್ ‘ಬಿ’ಮತ್ತು ‘ಸಿ’ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ನೋಂದಾಯಿಸಿದವರಲ್ಲಿ ಯಾರಿಗೆ ಹೆಪಟೈಟಿಸ್ ‘ಬಿ’ ಲಸಿಕೆ ಆಗಿರುವುದಿಲ್ಲವೋ ಅಂತಹ ವ್ಯಕ್ತಿಗಳಿಗೆ ಉಚಿತವಾಗಿಹೆಪಟೈಟಿಸ್ ‘ಬಿ’ ಲಸಿಕೆಯನ್ನು ಕೋಡಲಾಗುವುದು.
ಭಾರತ ದೇಶದಲ್ಲಿ ಹೆಪಟೈಟಿಸ್ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಗಣನಿಯವಾಗಿ ಏರಿಕೆಯಾಗುತ್ತಿರುವುದು ತುಂಬಾ ವಿಶಾದನಿಯವಾಗದೆ. ಇತ್ತಿಚ್ಚಿನ ದಿನಗಳಲ್ಲಿ ಇದರ ಬಗ್ಗೆ ಮಾದ್ಯಮಗಳಲ್ಲಿ ನೋಡುತ್ತಿರುವುದು ಸತ್ಯವಾಗಿದೆ. ಒಮ್ಮೆ ಹೆಪಟೈಟಿಸ್ ‘ಬಿ’ ರೋಗವು ದೃಢಪಟ್ಟಲ್ಲಿ ಯಾವುದೇ ಔಷದೋಪಚಾರ ಇರುವುದಿಲ್ಲ ಮತ್ತು ಹೆಪಟೈಟಿಸ್ ‘ಬಿ’ ರೋಗಕ್ಕೆ ಔಷದಿ ಮತ್ತು ಲಸಿಕೆಯನ್ನು ನೀಡದಿದ್ದರೆ ಅದು ಅಪಾಯಕಾರಿ ಮತ್ತು ಮರಣಕ್ಕೆ ಕಾರಣವಾಗಬಹುದು ಎಂದು ಆಸ್ಪತ್ರೆಯ ಯಕ್ರುತ ಮತ್ತು ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ವೈದೈರಾದ ಡಾ. ಶಿವಕುಮಾರ್ ವಿ. ಹಾಗೂ ಡಾ. ಸುಮೇಶ್ನಾಯರ್ ಎಸ್ ತಿಳಿಸಿದರು.
ಹೆಪಟೈಟಿಸ್ ‘ಬಿ’ ರೋಗವನ್ನು ತಡೆಗಟ್ಟಲು ಹೆಪಟೈಟಿಸ್ ‘ಬಿ’ ಲಸಿಕೆಯು ಹೇರಳವಾಗಿ ಲಭ್ಯವಿದ್ದು ಅದನ್ನು ಮುಂಚಿತವಾಗಿ ಹಾಕಿಸಿಕೊಂಡಲ್ಲಿ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಇಂತಹ ಒಂದು ವೈರಸ ರೋಗವನ್ನು ಪತ್ತೆ ಹಚ್ಚಿ ರೋಗಿಯ ಕುಟುಂಬದವರಿಗೆ ರೋಗ ಬಾರದದಂತೆ ಮಾರ್ಗದರ್ಶನ ನೀಡಬಹುದಾಗಿದೆ,ಮತ್ತುಹೆಪಟೈಟಿಸ್ ‘ಸಿ’ ದೃಢಪಟ್ಟಲ್ಲಿ ಅಂತಹ ರೋಗಿಗಳಿಗೆ ಚಿಕಿತ್ಸೆಯು ಲಭ್ಯವಿರುತ್ತದೆ. ಈ ಶಿಬಿರವನ್ನು ಶಿವಮೊಗ್ಗದ ಸಹ್ಯಾದ್ರಿ ನಾರಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವೈವಸ್ಥಾಪಕ ನಿರ್ದೆಶಕರಾದಶ್ರೀಯುತ ವರ್ಗೀಸ್ ಪಿ ಜಾನ್ ರವರು ತಿಳಿಸಿದ್ದಾರೆ.
ಈ ಶಿಬಿರದ ಪ್ರಯೋಜವನ್ನು ಪಡೆಯಲು ಪೂರ್ವ ನೋಂದಣಿ ಕಡ್ಡಾಯವಾಗಿರುತ್ತದೆ.ಶಿಬಿರದಲ್ಲಿ ನೋಂದಾಯಿಸಿದವರಿಗೆ ನೋಂದಣಿಯು ಉಚಿತವಾಗಿರುತ್ತದೆ.
ಪೂರ್ವ ನೋಂದಣಿಗೆ ಕರೆಮಾಡಿ – 9513915370
ಸಮಯ – ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ