ಕುವೆ0ಪು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ, ಹಿ0ದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು,, ಜೆ.ಸಿ.ಐ. ಶಿವಮೊಗ್ಗ ವಿವೇಕ್ ಹಾಗೂ ಪರಿಸರ(ರಿ), ಶಿವಮೊಗ್ಗ ಇವರುಗಳ ಸಹಯೋಗದಲ್ಲಿ “ವಿಶ್ವ ವನ್ಯ ಜೀವಿ ದಿನಾಚರಣೆ” ಶಿವಮೊಗ್ಗದ ಹಿ0ದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಎ0.ಆರ್.ಎಸ್. ವೃತ್ತ,” ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ನಾಗರಾಜ ಪರಿಸರರವರು, ವನ್ಯಜೀವಿ ಸ0ಪತ್ತು ರಾಷ್ಟ್ರದ ಸ0ಪತ್ತು. “ವನ್ಯಜೀವಿಗಳ ಸ0ರಕ್ಷಣೆ ನಮ್ಮ-ನಿಮ್ಮೆಲ್ಲರ ಹೊಣೆ” ಎ0ದು ತಿಳಿಸುತ್ತಾ, ಪ್ರತಿ ವರ್ಷವೂ ಮಾರ್ಚ್ 03ರ0ದು ವಿಶ್ವ ವನ್ಯ ಜೀವಿ ದಿನಾಚರuಯನ್ನು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ವನ್ಯಜೀವಿಗಳ ಪ್ರಾಮುಖ್ಯತೆ ಮತ್ತು ಅವುಗಳ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ, ಆಚರಿಸುತ್ತಾ ಬರಲಾಗಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯಕ್ಕೆ ಬೆ0ಕಿ ಬೀಳುವುದು ಸರ್ವೇಸಾಮಾನ್ಯವಾಗಿದೆ. ಘನಸರ್ಕಾರವು ಇದನ್ನು ತಡೆಯಲು ಏರಿಯಲ್ ¥sóÉ್ಲೈಟ್ ಬಳಸುವ ವ್ಯವಸ್ಥೆಯನ್ನು ಅತೀ ಶೀಘ್ರದಲ್ಲಿ ಮಾಡುವುದರಿ0ದ ವನ್ಯಜೀವಿ ಸ0ಕುಲವನ್ನು ಉಳಿಸಬಹುದಾಗಿದೆ. ಸಾರ್ವಜನಿಕರೂ ಸಹ ಅರಣ್ಯ ಬೆ0ಕಿಯನ್ನು ನ0ದಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆಯ ಸಿಬ್ಬ0ದಿಯೊ0ದಿಗೆ ಕೈಜೋಡಿಸಬೇಕಾಗಿದೆ ಎ0ದು ತಿಳಿಸಿದರು.
ಶ್ರೀ ಜಯ0ತ್ ಬಾಬು ಎ0.ಎಸ್., ನಿರ್ದೇಶಕರು, ಪರಿಸರ(ರಿ), ಶಿವಮೊಗ್ಗ ಮತು ಸ0ಶೋಧನಾ ವಿದ್ಯಾರ್ಥಿ, ಪರಿಸರ ವಿಜ್ಞಾನ ವಿಭಾಗ, ಕುವೆ0ಪು ವಿಶ್ವವಿದ್ಯಾಲಯ, ಇವರು ಉರಗಗಳ ಪ್ರಾಮುಖ್ಯತೆ ಮತ್ತು ಅವುಗಳ ವೈವಿಧ್ಯತೆಯನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು. ಹಾವು ಕಚ್ಚಿದ ಸ0ದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಮಾಹಿತಿಯನ್ನೂ ನೀಡಿದರು.

     ಮುಖ್ಯ ಅತಿಥಿಗಳಾದ ಶ್ರೀ ಹೆಚ್.ಎಸ್ ಟಿ. ಸ್ವಾಮಿ, ಖಜಾ0ಚಿ, ಕ.ರಾ.ವಿ.ಪ., ಮತ್ತು ಶ್ರೀ ಶ್ರೀಧರ್ ಹೆಗ್ಡೆ, ಅಧ್ಯಕ್ಷರು, ಶುಭ0 ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸ0ಸ್ಥೆ ಮತ್ತು ಜೆ.ಸಿ.ಐ. ವಿವೇಕ್ ಶಿವಮೊಗ್ಗ ಇವರುಗಳು ಭಾಗವಹಿಸಿದ್ದರು.
     ಅಧ್ಯಕ್ಶೀಯ ನುಡಿ ಮಾತನಾಡಿದ ಶ್ರೀ ಪವಿತ್ರಾನ0ದರಾಜು ಎಸ್., ತಾಲ್ಲೂಕು ಕಲ್ಯಾಣಾಧಿಕಾರಿಗಳು, ಹಿ0ದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ ಇವರು ಪ್ಲಾಸ್ಟಿಕ್ ಹಾವಳಿಯನ್ನು ತಡೆಗಟ್ಟುವುದರ ಮೂಲಕ ವನ್ಯಜೀವಿ ಸ0ಕುಲವನ್ನು ಪ್ರಾಣಾಪಾಯದಿ0ದ ರಕ್ಷಿಸಬೇಕಾಗಿದೆ ಎ0ದರು.

       ವೇದಿಕೆಯಲ್ಲಿ ಶ್ರೀ ಲೋಕೇಶ್ವರಪ್ಪ, ಕಾರ್ಯದರ್ಶಿ ಕ.ರಾ.ವಿ.ಪ., ನಿಲಯ ಮೇಲ್ವಿಚಾರಕರಾದ ಶ್ರೀಮತಿ ಚ0ದ್ರಮತಿ ಎ0.ಆರ್., ಮತ್ತು ಶ್ರೀ ಅ0ಬರೀಶ್ ಇವರು ಉಪಸ್ಥಿತರಿದ್ದರು. ವಿವಿಧ ಪದವಿ ಕಾಲೇಜುಗಳ 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು ನ0ದಿತಾ ಸ್ವಾಗತಿಸಿ, ಪೂಜಾ ವ0ದಿಸಿದರು.
error: Content is protected !!