ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ ಶಿವಮೊಗ್ಗ ಆವರಣದ, ಬೇಕರಿ ಘಟಕದಲ್ಲಿ ವಿವಿಧ ಬಗೆಯ ಕೇಕ್ ತಯಾರಿಕೆಯ ಬಗ್ಗೆ ದಿನಾಂಕ: 13.12.2022 ರಿಂದ 14.12.2022 ರವರೆಗೆ ಎರಡು ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು, ತರಬೇತಿ ಶುಲ್ಕ ಪ್ರತಿ ದಿನ ರೂ.120/- ರಂತೆ 2 ದಿನಗಳಿಗೆ ಒಟ್ಟು ರೂ.240/- ಗಳನ್ನು ಪಾವತಿಸಿ, ದಿನಾಂಕ 12.12.2022ರೊಳಗೆ ದೂರವಾಣಿ ಮೂಲಕ ಅಥವಾ ಖುದ್ದಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದಾಗಿದೆ.
ಸೂಚನೆ:

  1. ಮೊದಲು ನೊಂದಾಯಿಸಿದ 12 ಜನರಿಗೆ ಮಾತ್ರ ಅವಕಾಶವಿರುತ್ತದೆ.
  2. ತರಬೇತಿಗೆ ಬರುವಾಗ ಕಡ್ಡಾಯವಾಗಿ ನಿಮ್ಮ ಆಧಾರ್‍ಕಾರ್ಡ್‍ನ್ನು ತರಬೇಕು.
  3. ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಅವಕಾಶ.
  4. ಕಡ್ಡಾಯವಾಗಿ ಮಾಸ್ಕ ಧರಿಸಬೇಕು

ಸಂಪರ್ಕಿಸುವ ವಿಳಾಸ:
ಡಾ. ಶಿವಲೀಲಾ ಪಾಟೀಲ.
ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ
ಮೊಬೈಲ್ :7411680410

error: Content is protected !!