ಶಿವಮೊಗ್ಗ ಡಿಸೆಂಬರ್ 23 :ಶಿಕಾರಿಪುರ ತಾಲ್ಲೂಕಿನ ಭಕ್ತನಕೊಪ್ಪ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 1*10 ಎಂವಿಎ, 110/11 ಕೆ.ವಿ ವಿದ್ಯುತ್ ಉಪ ಕೇಂದ್ರಕ್ಕೆ ಹಾಲಿ ಇರುವ 110 ಕೆವಿ ಶಿರಾಳಕೊಪ್ಪ-ಹಿರೇಕೆರೂರು ಮಾರ್ಗದಿಂದ ಟ್ಯಾಪಿಂಗ್ ಮಾಡಿಕೊಂಡು ಸುಮಾರು 0.198 ಕಿ.ಮೀ ಉದ್ದದ ಲಿಲೋ ಪ್ರಸರಣ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯು ಪೂರ್ಣಗೊಂಡಿದೆ. ಈ ಮಾರ್ಗವು ಭಕ್ತನಕೊಪ್ಪ ಗ್ರಾಮದ ಸರ್ವೇ ನಂ.68 ಮತ್ತು 69 ರ ರೈತರ ಜಮೀನಿನಲ್ಲಿ ಹಾದು ಹೋಗಿದ್ದು ದಿ: 21-12-2022 ರಂದು ಅಥವಾ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಿ ಈ ಮಾರ್ಗವನ್ನು ಚಾಲನೆಗೊಳಿಸಲಾಗುವುದು.
ಆದ್ದರಿಂದ ಸಾರ್ವಜನಿಕರು ಈ ಮಾರ್ಗದಲ್ಲಿ ಬರುವ ಗೋಪುರಗಳನ್ನು ಹತ್ತುವುದಾಗಲಿ, ದನಕರುಗಳನ್ನು ಕಟ್ಟುವುದಾಗಲಿ, ವಾಹಕಗಳಿಗೆ ತಗುಲುವಂತೆ ವಸ್ತುಗಳನ್ನು ಎಸೆಯುವುದಾಗಲಿ ನಿಷೇಧಿಸಲಾಗಿದೆ. ಹಾಗೂ ಈ ಕೃತ್ಯದಿಂದ ಅಪಘಾತ ಅಥವಾ ಉಂಟಾಗುವ ಯಾವುದೇ ಪರಿಣಾಮಗಳಿಗೆ ಅವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಶಿವಮೊಗ್ಗ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ)ತಿಳಿಸಿದ್ದಾರೆ.