ಶಿವಮೊಗ್ಗ, ಆಗಸ್ಟ್ 11 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೆಪ್ಟಂಬರ್ 18ರಂದು ಬೆಳಿಗ್ಗೆ 10ರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಪಿ.ಯು.ಸಿ.,(ವಿಜ್ಞಾನ), ಬಿ.ಎಸ್ಸಿ. ನರ್ಸಿಂಗ್, ಎ.ಎನ್.ಎಂ. ಉತ್ತೀರ್ಣ ಹಾಗೂ ಯಾವುದೇ ಪದವಿ ತೇರ್ಗಡೆ ಹೊಂದಿದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾವಂತ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳವನ್ನು ಏರ್ಪಡಿಸಿದೆ.
ಕನಿಷ್ಟ 800ಹಾಸಿಗಳುಳ್ಳ ಎನ್.ಎ.ಬಿ.ಹೆಚ್. ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಶೇ75ರಷ್ಟು ಹುದ್ದೆಗಳನ್ನು ಮೀಸಲಿರಿಸುವ ಭರವಸೆ ಮೇರೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯಲಿಚ್ಚಿಸುವ 18-35ವರ್ಷ ವಯೋಮಿತಿಯ ಅಭ್ಯರ್ಥಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ.
ಫಾರ್ಮಸಿ ಅಸಿಸ್ಟೆಂಟ್, ಹಾಸ್ಪಿಟಲ್ ಆಪರೇಶನ್ ಎಕ್ಸಿಕ್ಯೂಟಿವ್, ಟಿಯಾರಾ, ಅನಸ್ತೇಶಿಯಾ ಟೆಕ್ನಿಶೀಯನ್ ಹುದ್ದೆಗಳಿಗೆ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ ಅಪೊಲೋ ಮೆಡ್ ಸ್ಕಿಲ್ಸ್ ಬೆಂಗಳೂರು ಸಂಸ್ಥೆ ವತಿಯಿಂದ ತರಬೇತಿ ಕೊಡಿಸಲಾಗುವುದು. ಡ್ಯೂಟಿ ಮ್ಯಾನೇಜರ್, ಹಾಸ್ಪಿಟಲ್ ನರ್ಸ್‍ಫಾರ್ ಅಡ್ವಾನ್ಸ್‍ಡ್ ಕೇರ್, ಕ್ರಿಟಿಕಲ್ ಕೇರ್ ಅಸಿಸ್ಟೆಂಟ್ ಕಾರ್ಡಿಯಾಕ್ ಐ.ಟಿ.ಯು. ವಿಷಯಗಳಿಗೆ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ವತಿಯಿಂದ ತರಬೇತಿ ನೀಡಲಾಗುವುದು. ಅಂತೆಯೇ ಕಾರ್ಡಿಯಾಕ್ ಕೇರ್ ಟೆಕ್ನೀಶಿಯನ್ ಪ್ರೋಗ್ರಾಂ(ಸಿಸಿಟಿ) ಕುಶಲ ತರಬೇತಿಗೆ ಎ.ಎನ್.ಎಂ. ವಿದ್ಯಾರ್ಹತೆ ಹೊಂದಿದವರಿಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಸಂಸ್ಥೆ ವತಿಯಿಂದ ತರಬೇತಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!