ಶಿವಮೊಗ್ಗ : ಡಿಸೆಂಬರ್ -28: 2022ನೇ ಸಾಲಿಗೆ ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ಗಳ ವಿತರಣೆ/ ನವೀಕರಣವನ್ನು ಡಿ.26 ರಿಂದ ಪ್ರಾರಂಭವಾಗಿದ್ದು, 2022ನೇ ಸಾಲಿನಲ್ಲಿ ವಿತರಿಸಲಾಗಿರುವ ಬಸ್ ಪಾಸ್ಗಳನ್ನು 2023ರ ಫೆ.28 ರೊಳಗೆ ನವೀಕರಿಸಿಕೊಳ್ಳಲು ಅನುಮತಿಸಲಾಗಿದೆ. 2023ನೇ ಸಾಲಿನಲ್ಲಿ ಹೊಸದಾಗಿ ವಿಕಲಚೇತನರ ಬಸ್ ಪಾಸ್ ಪಡೆಯಲು/ನವೀಕರಣಕ್ಕೆ ಫಲಾನುಭವಿಗಳು ಸರ್ಕಾರ ನಿಗದಿಪಡಿಸಿರುವ ಸೇವಾಸಿಂಧು ಆನ್ಲೈನ್ ಪೋರ್ಟಲ್ https://sevasindhu.karnataka.gov.in ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತೆ. 2022ನೇ ಸಾಲಿನಲ್ಲಿ ಹೊಸದಾಗಿ ವಿಕಲಚೇತನರ ಬಸ್ಪಾಸ್ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿವಮೊಗ್ಗ ವಿಭಾಗ ಎಂದು ಕೌಂಟರ್ ಆಯ್ಕೆ ಮಾಡುವುದು ಹಾಗೂ 2022ನೇ ಸಾಲಿನಲ್ಲಿ ಬಸ್ ಪಾಸ್ ಪಡೆದಿರುವ ಫಲಾನುಭವಿಗಳು ಪಾಸ್ ನವೀಕರಣಕ್ಕಾಗಿ ಘಟಕ ವ್ಯವಸ್ಥಾಪಕರ ಕೌಂಟರ್ ಆಯ್ಕೆ ಮಾಡಲು ಸೂಚಿಸಿದೆ.
ಅರ್ಜಿದಾರರು ಆನ್ಲೈನ್ನಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಿ, ಫಲಾನುಭವಿಗಳ ಭಾವಚಿತ್ರದೊಂದಿಗೆ ಅಗತ್ಯ ದಾಖಲಾತಿಗಳಾದ ಯುಡಿಐಡಿ ಕಾರ್ಡ್, ಡಿಸೆಬಲಿಟಿ ಸರ್ಟಿಫಿಕೇಟ್, ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ನ್ನು ಜೆಪಿಜಿ ಅಥವಾ ಪಿಡಿಎಫ್ ನಮೂನೆಯಲ್ಲಿ ಅಡಕಗೊಳಿಸುವುದು.
ಫಲಾನುಭವಿಗಳು ಪಾಸ್ ಪಡೆಯಲು ಬರುವಾಗ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರಿಂದ ದೃಢೀಕರಿಸಿದ ವಿಕಲಚೇತನರ ಗುರುತಿನ ಚೀಟಿ ಅಥವಾ ಯುಡಿಐಡಿ ಸ್ಮಾಟ್ ಕಾರ್ಡ್, ಡಿಸೆಬಲಿಟಿ ಸರ್ಟಿಫಿಕೇಟ್, ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್, ಇತ್ತೀಚಿನ 3 ಭಾವಚಿತ್ರ ಹಾಗೂ 2022ನೇ ಸಾಲಿನಲ್ಲಿ ಪಡೆದಿರುವ ಮೂಲ ಬಸ್ ಪಾಸ್(ನವೀಕರಣಕ್ಕಾಗಿ)ನೊಂದಿಗೆ ಪಾಸ್ ಶುಲ್ಕ ರೂ.660/-ಗಳನ್ನು ನಗದು ಮೂಲಕ ಪಾವತಿಸಬೇಕಾಗಿ ಕ.ರಾ.ರ.ಸಾ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
