ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲೇ ನಂ. 1 ಸ್ಥಾನ ಪಡೆಯಲು ಜಿಲ್ಲೆಯ ಎಲ್ಲಾ ಅರ್ಹ ಮತದಾರರು ಮತದಾನದ ಮಹತ್ವ ತಿಳಿದ ತಪ್ಪದೆ ಮತ ಚಲಾಯಿಸಬೇಕು. ಅತಿ ಹೆಚ್ಚು ಮತದಾನದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ. ಮತದಾನ ಕಡಿಮೆಯಾದಲ್ಲಿ ವ್ಯವಸ್ಥೆ ಹದಗೆಡುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ ನುಡಿದರು ಅವರು ಇಂದು ಬೆಳಿಗ್ಗೆ SPಒ ರಸ್ತೆಯಲ್ಲಿ ಶಕ್ತಿ ಇನೋವೇಶನ್ ಹಾಗೂ ಇನ್ ಕಾರ್ಪೊರೇಶನ್ ಆವರಣದಲ್ಲಿ ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದರು. ಮತದಾನ ಮಾಡದೆ ಇದ್ದರೆ ನಮ್ಮ ಹಕ್ಕನ್ನು ನಾವು ಕಳೆದುಕೊಂಡಂತೆ ಪ್ರತಿಯೊಬ್ಬರ ಜೀವಿತಾವಧಿಯಲ್ಲಿ 10 ಮಹಾಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಅಲಕ್ಷೆ ಮಾಡದೆ, ಮತದಾನ ಮಾಡಿ ಎಲ್ಲಿ ಬೇಕಾದರೂ ಪ್ರವಾಸ ಮಾಡಿ ಎಂದು ನುಡಿದರು. ಮತದಾರರು ಯಾವುದೇ ಆಸೆ, ಆಮಿಷಗಳಿಗೆ, ಒತ್ತಡಗಳಿಗೆ ಮಣಿಯದಂತೆ ಸ್ವಯಂ ಪ್ರೇರಿತರಾಗಿ ಮತಗಟ್ಟಿಗಳಿಗೆ ತೆರಲಿ ಮತದಾನ ಮಾಡುವಂತೆ ವಿನಂತಿಸಿದರು. ಶಿವಮೊಗ್ಗ ಜಿಲ್ಲೆ ಹಲವು ಪ್ರಥಮಗಳಿಗೆ ಮೊದಲಿಂದಲೂ ಹೆಸರಾಗಿದೆ. ಈಗ ಈ ಮತದಾನ ಪ್ರಕ್ರಿಯೆಯಲ್ಲಿ ಮೊದಲಾಗ ರಾಷ್ಟ್ರದಲ್ಲೇ ಎಲ್ಲರೂ ಶಿವಮೊಗ್ಗವನ್ನು ತಇರುಗಿ ನೋಡುವಂತಾಗಬೇಕು. ಆದ್ದರಿಂದ ಯುವ ಮತದಾರರು ಯಾವುದೇ ಕಾರಣ ನೀಡದೇ ಮತದಾನ ಮಾಡಬೇಕು ಎಂದು ನುಡಿದ ಅವರು ಮತದಾನ ಜಾಗೃತಿ 2 ವಾಹನಗಳು ಚಾಲನೆ ನೀಡಿದರು. ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಜೆ.ಆರ್.ವಾಸುದೇವ್ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮತದಾನ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಿದರು. ವೇದಿಕೆಯಲ್ಲಿ ಶಕ್ತಿ ಇನೋವೇಶನ್ ಮಾಲೀಕರಾದ ಗೋಪಿನಾಥ್, ಛೇಂಬರ್ ಆಫ್ ಕಾಮರ್ಸ್ನ ಮಾಜಿ ಅಧ್ಯಕ್ಷರಾದ ಅಶ್ವತನಾರಾಯಣ ಶೆಟ್ಟಿ, ಡಿ.ಎಂ.ಶಂಕ್ರಪ್ಪ, ನಟರಾಜ್, ನಿರ್ದೇಶಕರಾದ ಜಿ.ವಿಜಯಕುಮಾರ್, ಯು.ಎಂ.ಶಿವರಾಜ್, ಡಾ|| ಸಾತ್ವಿಕ್.
ಇದೇ ಸಂದರ್ಭದಲ್ಲಿ ಚುನಾವಣೆ ಜಾಗೃತಿ ಕರಪತ್ರಗಳನ್ನು ಜಿಲ್ಲಾಧಿಕಾರಿಗಳು ಎಲ್ಲರಿಗೂ ವಿತರಿಸಿ ಶಕ್ತಿ ಇನೋವೇಶನ್ ಕಾರ್ಯಕ್ರಮಕ್ಕೆ ಪ್ರಶಂಶಿಸಿದರು.