ಕೃಷಿ ಲಾಭದಾಯಕವಾಗಿ ಮತ್ತು ನಿರಂತರವಾಗಿ ಸುಸ್ಥಿರವಾಗ ಬೇಕಾದರೆ ಮಣ್ಣಿನಲ್ಲಿರುವ ಪೋಷಕಾಂಶಗಳ ಬಳಕೆ ಪ್ರಮಾಣ ಮತ್ತು ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳು ಉತ್ಪಾದಕತೆಗೆ ಪೂರಕವಾಗುವಂತೆ ಕಾಪಾಡಿಕೊಂಡು ಬರುವುದು ಅತಿ ಮುಖ್ಯ. ಕೃಷಿ ಉತ್ಪಾನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಉತ್ಪಾದನಾ ಮಟ್ಟವನ್ನು ನಿರಂತರವಾಗಿ ಕಾಪಾಡಿಕೊಂಡು ಬರಲು ರಸಗೊಬ್ಬರಗಳ ಜೊತೆ ಸಾವಯವ ಗೊಬ್ಬರಗಳ ಬಳಕೆ ಅವಶ್ಯವೆಂದು ಕಂಡುಕೊಳ್ಳಲಾಗಿದೆ.
ಈ ಭಾಗದ ಪ್ರಮುಖ ಬೆಳೆಗಳಾದ ಜೋಳ, ಹತ್ತಿ, ಸೋಯಾಅವರೆ, ತೊಗರಿ ಮತ್ತು ಕುಸುಬೆ ಬೆಳೆಗಳ ಅವಶೇಷಗಳು ಲಭ್ಯವಿದ್ದು ಹತ್ತಿಕಟ್ಟಿಗೆ , ಗೋವಿನ ಜೋಳದ ದಂಟು , ತೊಗರಿಕಟ್ಟಿಗೆ, ಜೋಳದ ದಂಟು , ಸೋಯಾಅವರೆ ಬೆಳೆಯುವಿಕೆ, ಕೊಟ್ಟಿಗೆ ಗೊಬ್ಬರ ಇವುಗಳನ್ನು ಭೂಮಿಗೆ ಮರುಕಳಿಸುವುದು ಅತೀ ಅವಶ್ಯ.

ಸಸ್ಯಾವಶೇಷಗಳಿಂದ ಕಾಂಪೊಸ್ಟ್ ತಯಾರಿಕೆ
ಸಸ್ಯಾವಶೇಷಗಳನ್ನು ನೇರವಾಗಿ ಭೂಮಿಗೆ ಸೇರಿಸಬಹುದು. ಇಲ್ಲವೇ ಕಾಂಪೋಸ್ಟ್ ಮಾಡಿ ನಂತರ ಭೂಮಿಗೆ ಹಾಕಬಹುದು. ಈ ರೀತಿ ಕೃಷಿ ತ್ಯಾಜ್ಯ ಪದಾರ್ಥಗಳಿಂದ ತ್ವರಿತವಾಗಿ ಕಾಂಪೋಸ್ಟ್ ಮಾಡಲು ನಾಲ್ಕು ಶಿಲೀಂದ್ರ (ಫೆನರೋಕೀಟ್ ಕೈಸೋಸ್ಪೋರಿಯಂ, ಫ್ಲೂರೋಟಸ್, ಎಸಪರಜಿಲಸ್ ಅವಮೊರಿ ಮತ್ತು ಟ್ರೈಕೋಡರ್ಮಾ ವಿರಿಡೆ) ಮತ್ತು ಎರಡು ರಂಜಕ ಕರಗಿಸುವ ಸೂಕ್ಷ್ಮ ಜೀವಿಗಳ (ಸರೇಶಿಯಾ ಮಾಸೆಶಸೆನ್ಸ್ ಮತ್ತು ಬರ್ಕಹೊಲ್ಡೆರಿಯಾ ಸಿಪೆಸಿಯಾ) ಜೊತೆಗೆ ಶೇ. 2 ರಷ್ಟು ಶಿಲಾರಂಜಕ, ಶೇ. 0.02 ರಷ್ಟು ಯೂರಿಯಾ ಮತ್ತು ಜೈವಿಕ ಅನಿಲ ಘಟಕದಿಂದ ಹೊರಬರುವ ರಾಡಿಯನ್ನು ಸಿಂಪಡಿಸುವುದರಿಂದ ಕಾಂಪೋಸ್ಟ್ ಕ್ರಿಯೆ ತ್ವರಿತಗೊಳ್ಳುವ್ಯದು- ಡಾ.ಜಹೀರ ಅಹ್ಮದ

ಭೂಮಿಗೆ ಸೇರಿಸುವ ವಿಧಾನ / ಸಸ್ಯಾವಶೇಷಗಳ ನಿರ್ವಹಣೆ : ಸಸ್ಯಾವಶೇಷಗಳನ್ನು ಭೂಮಿಗೆ ಸೇರಿಸುವ ಮುನ್ನ 10-15 ಸೆಂ.ಮೀ. ಉದ್ದದ ತುಂಡುಗಳಾಗಿ ಕತ್ತರಿಸಿ ಭೂಮಿಯ ಮೇಲೆ ಹರಡಿಟ್ರ್ಯಾಕ್ಟರ್‍ಅಥವಾಎತ್ತಿನ ನೇಗಿಲಿನಿಂದ ಮಣ್ಣಿನಲ್ಲಿ ಸೇರಿಸಬಹುದು. ಹೊಲದಲ್ಲೇ ಕೊಯ್ಲಿನ ನಂತರಟ್ರ್ಯಾಕ್ಟರ್‍ಚಾಲಿತರೋಟೋವೇಟರ್ ಹಾಯಿಸುವುದರಿಂದಆಯಾ ಬೆಳೆಗಳಲ್ಲಿ ಬೆಳೆದ ಬೆಳೆ ಉಳಿಕೆಗಳು ಪುಡಿ ಪುಡಿಯಾಗಿ ಮಣ್ಣಿನಲ್ಲಿ ಸೇರುತ್ತವೆ.ವಿವಿಧ ಬೇಸಾಯ ಪದ್ಧತಿಗೆಅಡೆತಡೆಯಾಗಿದ್ದರೆಅಥವಾ ಪ್ಲಾಂಟೇಶನ್ ಬೆಳೆಗಳಲ್ಲಿ ಬೆಳೆ ಉಳಿಕೆಗಳನ್ನು ಭೂಮಿಯ ಮೇಲೆ ಹೊದಿಕೆಯಾಗಿಇಡುವುದರಿಂದಕ್ರಮೇಣ ಕಳಿಯುತ್ತದೆ ಮತ್ತು ಮಣ್ಣಿನ ಮೇಲ್ಮೈಯನ್ನುರಕ್ಷಿಸುತ್ತದೆ- ಡಾ.ಯುಸುಫಅಲಿ ನಿಂಬರಗಿ

ಪ್ರಯೋಜನಗಳು : ಹೆಕ್ಟೇರಿಗೆ 5 ಟನ್‍ಅಥವಾಆಯಾ ಬೆಳೆಗಳಲ್ಲಿ ಉತ್ಪಾದಿಸಲ್ಪಟ್ಟ ಸಸ್ಯಾವಶೇಷಗಳನ್ನು ಭೂಮಿಗೆ ಮರಕಳಿಸುವುದರಿಂದ ಬೆಳೆಗಳ ಇಳುವರಿ ಶೇ. 25-30 ರಷ್ಟು ಹೆಚ್ಚುವುದು. ಇದು ನಿರಂತರವಾಗಿ 2-3 ವರ್ಷಗಳ ನಂತರ ಸಾಧ್ಯ. ಸಸ್ಯಾವಶೇಷಗಳು ಮುಖ್ಯ ಪೋಷಕಾಂಶಗಳಲ್ಲದೇ ಲಘುಪೋಷಕಾಂಶಗಳನ್ನು ಪುನರಾವರ್ತಿಸಿ ಭೂಮಿಯ ಫಲವತ್ತತೆಯನ್ನುಕಾಪಾಡುವಲ್ಲಿ ಸಹಾಕಾರಿಯಾಗುತ್ತದೆ. ಸಸ್ಯಾವಶೇಷಗಳನ್ನು ಭೂಮಿಗೆ ಸೇರಿಸಿದಾಗ ಬೆಳೆಗೆ ಶಿಫಾರಸು ಮಾಡಿದ ಪ್ರಮಾಣದರಸಗೊಬ್ಬರಕಡಿಮೆ ಮಾಡಬಹುದು ಮತ್ತು ಪೂರ್ತಿರಸಗೊಬ್ಬರ ಹಾಕಿದ ಬೆಳೆಗಳಿಗಿಂತ ಅಧಿಕ ಇಳುವರಿ ಪಡೆದಿದ್ದುಕಂಡುಬಂದಿದೆ. ಇವುಗಳ ಬಳಕೆಯಿಂದ ಮಣ್ಣಿನ ಭೌತಿಕಗುಣಧರ್ಮ ಸುಧಾರಿಸಿ ಮಣ್ಣಿನಲ್ಲಿ ನೀರು ಇಂಗುವಿಕೆ, ಬಸಿಯುವಿಕೆ ಹಾಗೂ ನೀರು ಹಿಡಿದಿಟ್ಟುಕೊಳ್ಳುವ ಸಾಮಾಥ್ರ್ಯ ಹೆಚ್ಚುತ್ತದೆ. ಸಸ್ಯಾವಶೇಷಗಳನ್ನು ನಿರಂತರ ಭೂಮಿಗೆ ಹೊದಿಕೆಯಾಗಿ ಹಾಕುವುದರಿಂದಜೈವಿಕಕ್ರಿಯೆಅಭಿವೃದ್ಧಿ ಹೊಂದಿದ್ದುಕಂಡು ಬಂದಿದೆ. ಸಸ್ಯಾವಶೇಷಗಳನ್ನು ಭೂಮಿಗೆ ಹೊದಿಕೆಯಾಗುವುದರಿಂದ ಕಳೆ ನಿಯಂತ್ರಣ ಆಗುತ್ತದೆ.

ಡಾ.ಯುಸುಫಅಲಿ ನಿಂಬರಗಿ , ಡಾ.ಜಹೀರ ಅಹ್ಮದ ,ಡಾ. ಶ್ರೀನಿವಾಸ ಬಿ.ವಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು

error: Content is protected !!