ಶಿಕ್ಷಕರ ತರಬೇತಿ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ ಸರ್ಕಾರಿ ಉದ್ಯೋಗ ದೊರೆಯದೇ, ಬಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ತನಗೆ ರೋಟರಿ ಪೂರ್ವ ವಿದ್ಯಾ ಸಂಸ್ಥೆಯವರು ಶಿಕ್ಷಕರ ಕೆಲಸ ನೀಡಿ ನನ್ನ ಜೀವನಕ್ಕೆ ಒಂದು ದಿಕ್ಕನ್ನು ತೋರಿಸಿ ಹಲವಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹತ್‌ಕಾರ್ಯವನ್ನು ಮಾಡಲು ಅವಕಾಶ ದೊರಕಿಸಿಕೊಟ್ಟರು ಎಂದು, ಇಂದು ಸೇವೆಯಿಂದ ವಯೋನಿವೃತ್ತಿ ಹೊಂದಿದ ಶಿಕ್ಷಕ ಶ್ರೀ ಬಸವರಾಜ್ ಸಿ., ಇವರು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,), ರೋಟರಿ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳು ಏರ್ಪಡಿಸಿದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ, ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆಯನ್ನು ತಿಳಿಸಿದರು.
ಈ ಸಮಾರಂಭಕ್ಕೆ ರೋಟರಿ ಪೂರ್ವದ ಹಾಗೂ ಟ್ರಸ್ಟ್ನ ಪದಾಧಿಕಾರಿಗಳು ಉಭಯ ಶಾಲೆಗಳ ಶಿಕ್ಷಕ ಬಂಧು ಭಗಿನೀಯರು ಮಾತ್ರವಲ್ಲದೆ ಅವರ ಜೊತೆ ಕೆಲಸ ಮಾಡಿ ನಿವೃತ್ತರಾದ ಅನೇಕ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಪಾಲ್ಗೊಂಡು ಅನೇಕರು ಶ್ರೀಯುತರ ವ್ಯಕ್ತಿತ್ವದ ವಿವಿಧ ಆಯಾಮಗಳ ಪ್ರಶಂಶಿಸಿದರು.
ಸಮಾರAಭದ ಅಧ್ಯಕ್ಷತೆಯನ್ನು ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ರೊ. ಚಂದ್ರಶೇಖರಯ್ಯ ಎಂ., ನಿವೃತ್ತ ಡಿ.ಪಿ.ಐ. ಇವರು ವಹಿಸಿದ್ದು, ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಯಾವುದೇ ಒಂದು ಜನಾಂಗದ ಶಿಕ್ಷಣದ ಗುಣಮಟ್ಟವು ಆಯಾ ಕಾಲಘಟ್ಟದ ಶಿಕ್ಷಕರ ಶಿಕ್ಷಣದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
ಸಮಾರAಭದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ರೊ. ಸತೀಶ್‌ಚಂದ್ರ, ಕಾರ್ಯದರ್ಶಿ ರೊ. ಕಿಶೋರ್ ಕುಮಾರ್, ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಖಜಾಂಚಿ ರೊ. ವಿಜಯ್ ಕುಮಾರ್ ಜಿ., ಜಂಟಿ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಬೋರ್ಡ್ ಆಫ್ ಟ್ರಸ್ಟಿ ರೊ. ರವಿಶಂಕರ್ ಕೆ.ಬಿ., ಪ್ರಾಂಶುಪಾಲ ಶ್ರೀ ಸೂರ್ಯನಾರಾಯಣ್ ಆರ್., ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಶೀಲಾ ಬಾಯಿ ಎಸ್. ಹಾಗೂ ಶಿಕ್ಷಕವೃಂದ & ಸಿಬ್ಬಂಧಿವರ್ಗದವರು ಪಾಲ್ಗೊಂಡು ಶ್ರೀಯುತರ ಗುಣಗಾನ ಮಾಡಿದರು.
error: Content is protected !!