ಬಾಳೆಹಣ್ಣನ್ನು ಯಾರು ತಿಂದಿಲ್ಲ? ಹಾಗೂ ಅದರ ರುಚಿ ಯಾರಿಗೆ ಗೊತ್ತಿಲ್ಲ? ಆದರೆ ಸಾಧಾರಣವಾಗಿ ಎಲ್ಲಾ ಸಿಗುವ ಈ ಸೋವಿ ಹಣ್ಣು ಎಂದರೆ ಆಶ್ಚರ್ಯವಾಗಬಹುದು. ಅಲ್ಲಿಂದ ನಂತರ ಫಿಲಿಫೈನ್ಸ್ ಹಾಗೂ ಭಾರತ ದೇಶಗಳಿಗೆ ಬಂದು ಕ್ರಿ.ಪೂ. 327 ರಲ್ಲಿ ಅಲೆಕ್ಸಾಂಡರ್ ಈ ಹಣ್ಣು ಬೆಳೆಯುವುದನ್ನು ಗುರುತಿಸಿದರೆಂದು ತಿಳಿದು ಬಂದಿದೆ. ಸಹಿರುಚಿ ಇರುವ ಬಾಳೇಹಣ್ಣು ಮಕ್ಕಳಿಂದ ವೃದ್ಧರವರೆಗೆ ಬಹಳ ಇಷ್ಟವಾದ ಹಣ್ಣು. ಆದರೆ ಈ ಹಣ್ಣಿನಲ್ಲಿರುವ ಪೋಷಕಾಂಶಗಳು ಹಾಗೂ ಅದರಿಂದ ಸಿಗುವ ಔಷಧೀಯ ಲಾಭಗಳ ಬಗ್ಗೆ ಅನೇಕರಿಗೆ ಪರಿಚಯವಿಲ್ಲ.

 ಬಾಳೆಹಣ್ಣು ಪೊಟ್ಯಾಶಿಯಂ ಲವಣದ ಒಂದು ಪ್ರಮುಖವಾದ ಆಹಾರವೆಂದರೂ ತಪ್ಪಾಗಲಾರದು ಈ ಲವಣ ನಮ್ಮ ಶರೀರದಲ್ಲಿನ ರಕ್ತದ ಒತ್ತಡವನ್ನು ಸಮತೋಲನದಲ್ಲಿ ಇಡುವಲ್ಲಿ ಹಾಗೂ ಹೃದಯದ ಕಾರ್ಯವನ್ನು ಸರಿಯಾಗಿ ನಡೆಸುವಲ್ಲಿ ಸಹಾಯ ಮಾಡುತ್ತದೆ. 100 ಗ್ರಾಂ ಬಾಳೆಹಣ್ಣಿನಲ್ಲಿ 467 ಮಿ. ಗ್ರಾಂ ಪೊಟ್ಯಾಶಿಯಂ ಹಾಗೂ ಕೇವಲ 1 ಮಿ.ಗ್ರಾಂ ಸೋಡಿಯಂ ಇರುವುದರಿಂದ ಹೆಚ್ಚಿನ ರಕ್ತದೊತ್ತಡ ಹಾಗೂ ರಕ್ತನಾಳಗಳು ಗಟ್ಟಿಯಾಗುವುದನ್ನು ತಪ್ಪಿಸುವುದು. ಇದಲ್ಲದೆ ಬಾಳೆ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಮೂಳೆಯ ಸವೆತವನ್ನು ಕಡಿಮೆ ಮಾಡುವ ಸಂಗತಿ ಸಂಶೋಧನೆಯಿಂದ ಕಂಡುಬಂದಿದೆ.
 ಹೊಟ್ಟೆ ಹುಣ್ಣಿನಿಂದ ನರಳುತ್ತಿರುವ ಮನುಷ್ಯರಿಗೆ ಬಾಳೆಹಣ್ಣು ಒಂದು ಒಳ್ಳೆಯ ಆಹಾರ. ಇದು ಅಂಬಾಸಿಟ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ಹಣ್ಣು ಹುಣ್ಣನ್ನು ನಿಯಂತ್ರಿಸುವ ಮೊದಲ ಹಂತದಲ್ಲಿ ಹಣ್ಣಿನಲ್ಲಿ ಅಡಕವಾಗಿರುವ ರಸಾಯನಿಕ ವಸ್ತುಗಳು ಹೊಟ್ಟೆಯ ಒಳಾಂಗಣದ ಕೋಶಗಳ ಮೇಲೆ ರಕ್ಷಣೆಯ ಕವಚವನ್ನು ಹಾಕುತ್ತದೆ. ಇದರಿಂದ ಹೊಟ್ಟೆಯಲ್ಲಿನ ಆಮ್ಲ ಕೋಶದ ಮೇಲೆ ಬೀಳದಂತೆ ಕಾಪಾಡಿ ಹುಣ್ಣಾಗದಂತೆ ನೋಡಿಕೊಳ್ಳುತ್ತದೆ. ಎರಡನೇ ಹಂತದಲ್ಲಿ ಹೊಟ್ಟೆಯಲ್ಲಿರುವ ಪ್ರೋಟೀನ್ ಇಹ್ನಿಬೀಟರ್ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ.
 ಅಜೀರ್ಣದಿಂದ ನರಳುತ್ತಿರುವ ಅನೇಕರಿಗೆ ಬಾಳೇಹಣ್ಣು ಒಂದು ವರದಾನವೆಂದೇ ಹೇಳಬಹುದು.
 ಈ ಹಣ್ಣಿನಲ್ಲಿ ತಡೆಹಿಡಿಯುವ ಪಿಷ್ಠ ಇರುವುದರಿಂದ ಮಧುಮೇಹಿಗಳಿಗೂ ಉಪಯೋಗವಾಗಬಹುದು. ಸ್ವಲ್ಪ ಕಡಿಮೆ ಮಾಗಿರುವ ಬಾಳೆಹಣ್ಣಿನ ಗ್ಲೈಸಿಮಿಕ್ ಇಂಡೆಕ್ಸ್ (ಜಿ.ಐ) 30 ರಷ್ಟು ಇದ್ದರೆ ಮಾಗಿದ ಬಾಳೆಹಣ್ಣಿನ ಜಿ.ಐ 60 ರಷ್ಟುವಿರುವುದು ಕಂಡು ಬಂದಿದೆ. ಗ್ಲೈಸಿಮಿಕ್ ಇಂಡೆಕ್ಸ್ 50ರ ಒಳಗೆ ಇರುವ ಆಹಾರಗಳು ಮಧುಮೇಹಿಗಳಿಗೆ ಒಳ್ಳೆಯದು.
 ಬಾಳೇಹಣ್ಣು ಫ್ರಕ್ಟೋಸಾಕರೈಡ್ ಎಂಬ ಪಿಷ್ಠ ಪದಾರ್ಥದ ಅತ್ಯುತ್ತಮ ಸಾಧನವಾಗಿದೆ. ಈ ರಸಾಯನಿಕ ವಸ್ತುವು ನಮ್ಮ ಕರುಳಿನಲ್ಲಿರುವ ಲಾಭದಾಯಕ ಸೂಕ್ಷ್ಮ ಜೀವಿಗಳನ್ನು ಪೋಷಿಸುವುದು. ಈ ಸೂಕ್ಷ್ಮ ಜೀವಿಗಳು ಕರುಳಿನಲ್ಲಿ ಜೀವಸತ್ವ ಮತ್ತು ಜೀರ್ಣ ಕಿಣ್ವಗಳನ್ನು ಉತ್ಪತ್ತಿ ಮಾಡಿ ಪೋಷಕಾಂಶಗಳು ಅಷ್ಟೇ ಅಲ್ಲದೆ ಈ ಕ್ರಿಯೆಯಿಂದ ಕರುಳಿನ ಕ್ಯಾನ್ಸ್ರ್ ಸಹ ಕಡಿಮೆಯಾಗುವ ಸಾಧ್ಯತೆ ಇದೆ.
 ದೇಹದಲ್ಲಿ ಹೀರಿಕೊಳ್ಳುವುದರಲ್ಲಿ ಸಹಾಯ ಮಾಡುವುದು.
 ಒಂದು ಬಾಳೇಹಣ್ಣು ಸಾಧಾರಣವಾಗಿ 100-120 ಗ್ರಾಂ ತೂಕವನ್ನು ಹೊಂದಿರುವುದು. ಉದಾ: 120 ಗ್ರಾಂ ಇರುವ ಹಣ್ಣಿನಲ್ಲಿ 109-110 ಕಿ.ಗ್ರಾಂ ಕ್ಯಾಲೋರಿಯಷ್ಟು ಶಕ್ತಿ 0.60 ಮಿ.ಗ್ರಾಂ ಜೀವಸತ್ವ ಬಿ6 ಸುಸ್ತು, ಕಿರಿಕಿರಿ ಹಾಗೂ ನಿದ್ರೆಹೀನತೆಯನ್ನು ಕಡಿಮೆ ಮಾಡುತ್ತದೆ. ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಮಾಂಶಖಂಡದಲ್ಲಿ ಉಂಟಾಗುವ ಹಿಡಿತವನ್ನು ಹೋಗಲಾಡಿಸುತ್ತದೆ. ಆದ್ದರಿಂದ ಆಟಗಾರರಿಗೆ ಹಾಗೂ ಶಾರೀರಿಕ ವ್ಯಾಯಾಮ ಮಾಡಿದ ನಂತರ ಬಾಳೇಹಣ್ಣಿನ ಸೇವನೆ ಒಳ್ಳೆಯದು.
 ಬಾಳೇ ಹಣ್ಣು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಲ್‍ನ್ನು ಆಮ್ಲೀಕರಿಸಿ ರಕ್ತನಾಳಗಳಿಗೆ ಅಂಟುವುದನ್ನು ತಪ್ಪಿಸುತ್ತದೆ. ಇದರಿಂದ ಹೃದಯಕ್ಕೆ ಆಗುವ ಆಘಾತವನ್ನು ತಪ್ಪಿಸಬಹುದು.
 ಬಾಳೇಕಾಯಿಯಲ್ಲಿ ಹಲವಾರು ಜೀರ್ಣವಾಗದೇ ಇರುವಂತಹ ಸಣ್ಣ ಕೊಂಡಿಯ ಕೊಬ್ಬಿನ ಆಮ್ಲಗಳು ಕರುಳಿನ ಒಳ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುವುದರಿಂದ, ಪೋಷಕಾಂಶಗಳ ಹೀರಿಕೆ ಅದರಲ್ಲೂ ಸುಣ್ಣದ ಪ್ರಮಾಣವನ್ನು ರಕ್ತದಲ್ಲಿ ಹೆಚ್ಚಿಸುವುದು ಬಾಳೇಕಾಯಿಯನ್ನು ಸಾಮಾನ್ಯವಾಗಿ ಬೇಯಿಸಿ (ಪಲ್ಯದ ಹಾಗೆ) ಅಥವಾ ಚಿಪ್ಸ್ ರೀತಿಯಲ್ಲಿ ಕರೆದು ಸೇವಿಸುತ್ತಾರೆ.
 ಬಾಳೇಹಣ್ಣು ಸ್ವಾಭಾವಿಕವಾಗಿ ಪ್ರಕೃತಿಯಲ್ಲಿಯೇ ಪ್ಯಾಕ್ ಆಗಿ ಬಂದಿರುವಂತಹ ಆಹಾರ. ಆದ್ದರಿಂದ ಈ ಹಣ್ಣು ಶಿಶುವಿಗೂ ಆರೋಗ್ಯಕರ. ಆರು ತಿಂಗಳ ನಂತರ ಶಿಶುವಿಗೆ ಮೊದಲ ಆಹಾರ ಬಾಳೇಹಣ್ಣಾದರೆ ಒಳ್ಳೆಯದು. ಏಕೆಂದರೆ ಈ ಹಣ್ಣಿನಲ್ಲಿ ಕೊಬ್ಬಿನ ಅಂಶ ಇಲ್ಲದೆ ಇರುವುದು ಹಾಗೂ ಒಗ್ಗದಿರುವುದು ಕಡಿಮೆಯೆಂದು ತಿಳಿದು ಬಂದಿದೆ.
 ಸಾಮಾನ್ಯವಾಗಿ ಬಾಳೇಹಣ್ಣನ್ನು ರೆಫ್ರಿಜರೇಟರ್‍ನಲ್ಲಿ ಇಡಬಾರದು ಎಂದು ಹೇಳುತ್ತೇವೆ. ಫ್ರಿಜ್‍ನಲ್ಲಿ ಇಟ್ಟ ಬಾಳೇಹಣ್ಣಿನ ಸಿಪ್ಪೆ ಕಪ್ಪಗಾದರೂ ಒಳಗಡೆಯಿರುವ ಹಣ್ಣು ತಿನ್ನಲು ಯೋಗ್ಯವಾಗಿರುತ್ತದೆ. ಹಾಗೂ ಸ್ವಾದದಿಂದ ಕೂಡಿರುತ್ತದೆ. ಇಂತಹ ಹಣ್ಣನ್ನು ಉಪಯೋಗಿಸುವ ಮೊದಲು ಹಣ್ಣನ್ನು ಕೆಲಕಾಲ ಹೊರಗಡೆ ಇಟ್ಟು ಕೊಠಡಿಯ ಶಾಖ ಬಂದ ನಂತರ ಸೇವಿಸಬೇಕು.
 ಬಾಳೇಹಣ್ಣನ್ನು ಸಿಪ್ಪೆಯಿಂದ ಬಿಡಿಸಿ ನಂತರ ಹಿಚುಕಿ ಮೆತ್ತಗೆ ಮಾಡಿ ಫ್ರೀಜರ್ (00 ಸೆ.) ನಲ್ಲಿ ಎರಡು ತಿಂಗಳ ಕಾಲ ಇಡಬಹುದು. ಅಥವಾ ಫ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿ ಹಣ್ಣನ್ನು ಹಾಗೇಯೇ 00 ಸೆ. ಶಾಖದಲ್ಲಿ ಶೇಖರಿಸಿ ಇಡಬಹುದು. ಹಣ್ಣು ಕಪ್ಪಾಗಾಗುವುದನ್ನು ತಪ್ಪಿಸಲು ಲಿಂಬೆರಸವನ್ನು ಹಣ್ಣಿಗೆ ಸೇರಿಸಬೇಕು.
 ಒಟ್ಟು ಬಾಳೇಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಈ ರೀತಿ ಇದೆ.
 ಅಜೀರ್ಣತೆ ಇಲ್ಲದೆ ಇರುವುದು.
 ಹೃದಯ ಹಾಗೂ ನಾಳಕ್ಕೆ ಸಂಬಂಧಪಟ್ಟ ರೋಗಗಳಿಂದ ಮುಕ್ತ
 ಹೃದಯಾಘಾತದಿಂದ ರಕ್ಷಣೆ
 ಹೊಟ್ಟೆ ಹುಣ್ಣಿನಿಂದ ರಕ್ಷಣೆ
 ಆರೋಗ್ಯಕರ ರಕ್ತ ಒತ್ತಡ
 ಕಡಿಮೆ ಕಿರಿಕಿರಿ, ಒಳ್ಳೆಯ ಮನಸ್ಸು
 ಶಕ್ತಿಯುತವಾದ ಶರೀರ
 ದೇಹದಲ್ಲಿ ನೀರಿನಾಂಶದ ಶೇಖರಣೆ (ಅನಾರೋಗ್ಯಕರ) ಕಡಿಮೆ ಮಾಡುವುದು
ಉಪಯೋಗ ಪಡೆಯಲು ದಿನನಿತ್ಯ ಒಂದು ಬಾಳೆಹಣ್ಣು ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ.

ಹೆಚ್ಚಿನ ಮಾಹಿತಿ ಗಾಗಿ ಸಂಪರ್ಕಿಸಿ: ಡಾ.ಜ್ಯೋತಿ ಎಂ. ರಾಥೋಡ್ .ವಿಜ್ಞಾನಿ, ಗೃಹ ವಿಜ್ಞಾನಿ. ಕೆವಿಕೆ, ಶಿವಮೊಗ್ಗ,. ಡಾ ದೀಕ್ಷಾ ನಾಯ್ಕ್, ಪಿಹೆಚ್ ಡಿ ಸ್ಕಾಲರ್ ಯ.ಎ.ಎಸ್. ಧಾರವಾಡ. ಮೊಬೈಲ್ ಸಂಖ್ಯೆ: 9353978995


error: Content is protected !!