ರೈತರಿಗೆ ಕೃಷಿ ಮಾಡಲು ನೀರಾವರಿ ಪಂಪ್ ಸೆಟ್ ಅವಲಂಬನೆ ಅನಿವಾರ್ಯ ಪಂಪ್ಸೆಟ್ ಗಳು ವಾಸದ ಮನೆಯಿಂದ ಅರ್ಧ ಕಿಲೋಮೀಟರ್ ಅಥವಾ ಒಂದು ಕಿಲೋಮೀಟರ್ ದೂರವಿರುತ್ತದೆ ಸಾಮಾನ್ಯ ಪಂಪ್ ಸೆಟ್ ಗಳನ್ನು ಆಪರೇಟ್ ಮಾಡುವುದು ಕಷ್ಟಸಾಧ್ಯ. ವಿದ್ಯುತ್ ಕೂಡ ಕಣ್ಣಮುಚ್ಚಾಲೆ ಆಡುತ್ತಿರುತ್ತದೆ ಪದೇಪದೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪಂಪ ಸೆಟ್ ಬಳಸಲೆಂದೇ ತಿರುಗಾಡ ಬೇಕಾಗುತ್ತದೆ ಕುಳಿತಲ್ಲಿಯೇ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಹೊಸ ವಿಧಾನವನ್ನು ಶಿವಮೊಗ್ಗ ಜಿಲ್ಲೆಯ ಕಡವಿನಮನೆ ವಾಸಿ ಲಕ್ಷ್ಮಿಶ ಶರ್ಮ ಎಂಬ ಇಂಜಿನಿಯರ್ ಹೊಸದಾದ ಉಪಕರಣವೊಂದನ್ನು ಕಂಡುಹಿಡಿದು ರೈತರಿಗೆ ಅನುಕೂಲವಾಗುವಂತೆ ಇದನ್ನು ಅಳವಡಿಸಿ ಸಹಕಾರಿಯಾಗಿದ್ದಾರೆ 

ಕೋವಿಡ್ ಸಂಕಷ್ಟದ ನಂತರ ಹಳ್ಳಿಯಲ್ಲಿ ಉಳಿದ ಲಕ್ಷ್ಮೀಶ ಶರ್ಮ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಬಂದಿದ್ದಾರೆ ಇವರ ಕುಟುಂಬ ಕೇಂದ್ರ ಸರ್ಕಾರದ ಅನುದಾನಗಳನ್ನು ಪಡೆದು ಹೊಸ ಪ್ರಯತ್ನಗಳಿಗೆ ಹೆಜ್ಜೆ ಇಡುತ್ತಿದೆ ಈಗ ಬಳಕೆಯಲ್ಲಿರುವ ಪಂಪ್ ಸೆಟ್ಟನ್ನು ನಿಯಂತ್ರಿಸುವ ಯಂತ್ರಕ್ಕೆ ಮೊಬೈಲ್ ಗಳಿಗೆ ಸಿಮ್ ಅಳವಡಿಸಬೇಕು ಆದರೆ ಶರ್ಮ ಕಂಡುಹಿಡಿದಿರುವ ಉಪಕರಣಗಳನ್ನು ಸಿಮ್ಮಿನ ಅವಶ್ಯಕತೆಯಿಲ್ಲ ಟವರ್ ಸಿಗ್ನಲ್ ನ ಚಿಂತೆಯಿಲ್ಲ   ರೇಡಿಯೋ ಫ್ರೀಕ್ವೆನ್ಸಿ ಸಿಗ್ನಲ್ ಮೂಲಕ ಯಂತ್ರ ಕೆಲಸ ಮಾಡುವಂತೆ ಮಾಡಿದ್ದಾರೆ ಜಿಎಸ್ಎಂ ಸಿಗ್ನಲ್ ಬದಲಾಗಿ ಆರ್ ಎಫ್ ಸಿಗ್ನಲ್ ಬಳಸಲಾಗುತ್ತದೆ ಗ್ರಾಮಾಂತರ ಪ್ರದೇಶಗಳಲ್ಲಿ ಮೊಬೈಲ್ ಸಿಗ್ನಲ್ ಸಿಗುವುದಿಲ್ಲ ಇದು ಬಹಳ ದೊಡ್ಡ ಸಮಸ್ಯೆ ಆದರೆ ಈ ಸಮಸ್ಯೆಯಿಂದ ನಮ್ಮನ್ನು ಶರ್ಮ ದೂರ ಮಾಡಿದ್ದಾರೆ ಮನೆಯಲ್ಲಿ ವೈಫೈ ಇದ್ದರೆ ಎಲ್ಲಿಂದ ಬೇಕಾದರೂ ಮಾಡಬಹುದಾಗಿದೆ
 ಉಪಕರಣದ ತಯಾರಿಕೆಗೆ ₹6000 ವೆಚ್ಚವಾಗುತ್ತದೆ ಇದನ್ನು 4000 ರೂಗೆ  ರೈತರಿಗೆ ತಲುಪಿಸಬಹುದು ಎನ್ನುತ್ತಾರೆ ಲಕ್ಷ್ಮಿಶಶರ್ಮ ವಯೋವೃದ್ಧರಿಗೆ ತಮ್ಮ ತೋಟದ ವರೆಗೂ ಹೋಗಿ ಪಂಪ್ ಯಂತ್ರವನ್ನು ಬಳಸಲು ಸಮಸ್ಯೆಯಾದರೆ ಯೋಜನೆ ಮಲೆನಾಡಿನಲ್ಲಿ ಅತ್ಯಂತ ಉಪಯುಕ್ತವಾಗಿದ್ದು ಬೇಡಿಕೆಯೂ ನಿರ್ಮಾಣವಾಗುತ್ತಿದೆ ತಾನು ತಯಾರಿಸಿದ ಯಂತ್ರವನ್ನು ಶರ್ಮ ಮನೆಮನೆಗೆ ತೆರಳಿ ಬಳಸುವ ವಿಧಾನವನ್ನು ಪರಿಚಯಿಸುತ್ತಿದ್ದಾರೆ


 ಲಕ್ಷ್ಮೀಶ  ನಾವು ಓದಿದ ತಂತ್ರಜ್ಞಾನದ ವಿಚಾರವನ್ನು ದಿನನಿತ್ಯದ ರೈತಾಪಿ ಕೆಲಸಗಳಿಗೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ನನ್ನ ಈ ಹೊಸ ಪ್ರಯತ್ನಕ್ಕೆ ಹೆಚ್ಚು ಬೇಡಿಕೆ ಬರುತ್ತಿದೆ ಸಮಯವಿದ್ದಾಗ ಎಲ್ಲ ಈ ತರದ ಪ್ರಯತ್ನಗಳಿಗೆ ಮನಸ್ಸು ಮಾಡಿ ಜನರಿಗೂ ಸಹಕಾರಿಯಾಗುವಂತೆ ತೊಡಗಿ ಕೊಳ್ಳುತ್ತಿದ್ದೇನೆ 
ತಿರುಮಲೇಶ್ ಇಂತಹ ಪ್ರಯತ್ನಗಳು ಮಲೆನಾಡಿನಲ್ಲಿ ಹೆಚ್ಚಾಗಬೇಕು ದೂರದಲ್ಲಿರುವ ಮನೆಗಳು ಕೃಷಿ ಚಟುವಟಿಕೆಯಲ್ಲಿ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಕೆಲಸ ಮಾಡುವುದು ಕಷ್ಟ ಇಂತಹ ಹೊಸ ಆವಿಷ್ಕಾರಗಳು ರೈತರಿಗೆ ಅತ್ಯಂತ ಉಪಯುಕ್ತ ವಾಗಿದೆ
ಸಂಧ್ಯಾ ಗ್ರಹಿಣಿ  ಈ ಪ್ರಯತ್ನಕ್ಕೆ ಹೆಚ್ಚು ಬೇಡಿಕೆ ಬರುತ್ತಿದೆ ಹಳ್ಳಿಗಳಲ್ಲಿ ದೂರದೂರದಲ್ಲಿ ಮನೆಗಳಿರುತ್ತವೆ ಕಾಡುಪ್ರಾಣಿಗಳ ಭಯ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಯಂತ್ರಗಳ ಚಾಲನೆಯ ಈ ಪ್ರಯತ್ನ ಅತ್ಯಂತ ಉಪಯುಕ್ತವಾದುದು
 ರಾಘವೇಂದ್ರ ಶರ್ಮಾ ತಲವಾಟ ನಮ್ಮ ಪ್ರದೇಶದಲ್ಲಿ ಮೊಬೈಲ್ ಟವರ್ ಗಳ ಸಮಸ್ಯೆ ಇದೆ ಆದರೆ ಸಿಮ್ಗಳ ಸಹಾಯವಿಲ್ಲದೆ ಮೊಬೈಲ್ ಮೂಲಕ ಪಂಪ ಸೆಟ್ಟಿನ ನೀರನ್ನು ಕುಳಿತಲ್ಲಿಯೇ ಹೊಲಗದ್ದೆಗಳಿಗೆ ಹಾಯಿಸುವ ಇವರ ಹೊಸ ಪ್ರಯತ್ನದ ಕೆಲಸ ನಮಗೆ ಸಹಕಾರಿಯಾಗಿದೆ

error: Content is protected !!