ಆಕಾಶವಾಣಿ ಭದ್ರಾವತಿಯು ದಿನಾಂಕ 20.02.2023ರ ಸೋಮವಾರದಂದು ಬೆಳಿಗ್ಗೆ 10 ಗಂಟೆಯಿಂದ ‘ರೇಡಿಯೋ ಕಿಸಾನ್ ದಿನ’ದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸ್ಥಳ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ನವುಲೆ ಆವರಣ, ಶಿವಮೊಗ್ಗ .

ಉದ್ಘಾಟನೆ: ಮಾನ್ಯ ಕುಲಪತಿಗಳು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ

ಸನ್ಮಾನ  – ಆಯ್ದ ಆರು ಪ್ರಗತಿಪರ ರೈತರಿಗೆ

ವಿಚಾರಮಂಡನೆಗಳು – ಸಭಿಕರೊಂದಿಗೆ ವಿಚಾರ ವಿನಿಮಯ ಸೇರಿ;
1. ಅಡಿಕೆ ಎಲೆಚುಕ್ಕೆ ರೋಗ – ಡಾ. ನಾಗರಾಜಪ್ಪ ಅಡಿವೆಪ್ಪರ್, ವಿಜ್ಞಾನಿಗಳು, ಅಡಿಕೆ ಸಂಶೋಧನ ಕೇಂದ್ರ, ಶಿವಮೊಗ್ಗ ಇವರಿಂದ
 2. ರಾಸುಗಳಲ್ಲಿ ಚರ್ಮಗಂಟು ರೋಗ – ಡಾ. ಶಂಭುಲಿಂಗಪ್ಪ ಬಿ ಈ, ಪ್ರಾದ್ಯಾಪಕರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರಿಂದ
 3. ಮೌಲ್ಯವರ್ಧಿತ ಕೃಷಿ (ಸೆಕೆಂಡರಿ ಅಗ್ರಿಕಲ್ಚರ್) –  ಡಾ. ಪಿ. ರಮೇಶ್ ಕುಮಾರ್, ಜಂಟಿ ಕೃಷಿ ನಿರ್ದೇಶಕರು, ಚಿತ್ರದುರ್ಗ – ಇವರಿಂದ

ಈ ಕಾರ್ಯಕ್ರಮವನ್ನು ಆಕಾಶವಾಣಿ ಭದ್ರಾವತಿಯು, ಕೃಷಿ ತಂತ್ರಜ್ಞರ ಸಂಸ್ಥೆ, ಶಿವಮೊಗ್ಗ ಹಾಗು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರ ಜಂಟಿ ಸಹಯೋಗದೊಂದಿಗೆ ಆಯೋಜಿಸಿದೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದೆ

ಕಾರ್ಯಕ್ರಮ ಅಧಿಕಾರಿ
ಆಕಾಶವಾಣಿ ಭದ್ರಾವತಿ

error: Content is protected !!