ಭಾರತ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರ ವೈಯಕ್ತಿಕ ಮತ್ತು ಗುಂಪು ನಿರ್ಮಿತ ಸಂಘಟನೆಗಳಿಗೆ ಆರ್ಥಿಕ ಸಹಕಾರವನ್ನು ನೀಡಿ ಗ್ರಾಮೀಣ ಪ್ರದೇಶದ ಅವಶ್ಯಕತೆಗಳನ್ನು ಕ್ರೂಢೀಕರಿಸಿ ಉದ್ಯೋಗದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಿದೆ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಜೀವಿನಿ ಎನ್ನುವ ಯೋಜನೆ ನಿರ್ಮಿಸಿ ಗ್ರಾಮೀಣ ಜನರ ಗುಡಿ ಕೈಗಾರಿಕೆ ಕಸುಬುಗಾರಿಕೆ ಕೌಶಲ್ಯ ಕಲೆಗೆ ಒತ್ತು ನೀಡುತ್ತಿದೆ ಪಶ್ಚಿಮ ಘಟ್ಟ ಶ್ರೇಣಿಯ ಶರಾವತಿ ಕಣಿವೆಯ ಕುಗ್ರಾಮದಲ್ಲಿ ಮಹಿಳೆಯರು ಆರ್ಥಿಕ ಸಹಕಾರವನ್ನು ಪಡೆದುಕೊಂಡು ಸದ್ದಿಲ್ಲದೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ ದೂರದ ಬೆಟ್ಟ ಗುಡ್ಡಗಳಲ್ಲಿ ಮನೆಗಳಿರುವ ಈ ಪ್ರದೇಶಗಳಲ್ಲಿ ಸಂಜೀವಿನಿ ಯೋಜನೆ ಫಲವಂತಿಕೆ ಕಾಣುತ್ತಿರುವುದು ಶಿವಮೊಗ್ಗ ಜಿಲ್ಲೆಯ ಗ್ರಾಮಪಂಚಾಯಿತಿಗಳ ನಿರಂತರ ಶ್ರಮಕ್ಕೆ ಸಾಕ್ಷಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಗುಂಪುಗಳನ್ನು ರಚಿಸಿ ಅವರಲ್ಲಿ ಹಪ್ಪಳ ತಯಾರಿಕೆ ದೋಸೆ ತಯಾರಿಸುವುದು ಹೋಳಿಗೆ ತಯಾರಿ ಚಾಪೆ ಹೆಣೆಯುವುದು ಅಡಿಕೆ ಗಿಡ ನರ್ಸರಿ ರೊಟ್ಟಿ ತಯಾರಿಸುವುದು ಉಪ್ಪಿನಕಾಯಿ ಸಿರಿಧಾನ್ಯಗಳ ಆಹಾರ ತಯಾರಿಕೆ ಹೀಗೆ ಹತ್ತು ಹಲವು ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ನಿರ್ಮಿಸುತ್ತಿದ್ದಾರೆ ಇದರಲ್ಲಿ ಬಣ್ಣಬಣ್ಣದ ಈಚಲ ಚಾಪೆ ಮತ್ತು ಕಸ ಪರಕೆ ಗಳು ಜನರನ್ನು ಆಕರ್ಷಿಸುತ್ತಿವೆ.
ಕಗ್ಗಾಡು ಗಳಲ್ಲೂ ಕೂಲಿ ಕೆಲಸ ಮಾಡಿ ಶ್ರಮ ಜೀವನ ನಡೆಸುವ ಹೆಣ್ಣುಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ಉಪ ಕಸುಬುಗಳಿಗೆ ಮೊರೆಹೋಗಿ ಯಶಸ್ಸು ಕಾಣುತ್ತಿದ್ದಾರೆ ಬೆಂಗಳೂರು ಕುಂದಾಪುರ ಮಂಗಳೂರು ಹೀಗೆ ದೊಡ್ಡ ದೊಡ್ಡ ನಗರಗಳಿಗೆ ಇವರು ತಯಾರಿಸಿದ ವಸ್ತುಗಳು ಮಾರುಕಟ್ಟೆ ಯಾಗುತ್ತಿವೆ ಅಲ್ಲದೆ ತಮ್ಮ ವಸ್ತುಗಳಿಗೆ ಬ್ರಾಂಡ್ ನೇಮಗಳನ್ನು ಸಹ ಮಾಡಿಕೊಂಡಿರುವುದು ವಿಶೇಷ
ಶಿವಮೊಗ್ಗ ಜಿಲ್ಲೆಯ ಕಾರ್ಯನಿರ್ವಹಣಾಧಿಕಾರಿ ಎಂಎಲ್ ವೈಶಾಲಿ ಜಿಲ್ಲಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ವಿಶೇಷ ತರಬೇತಿಯನ್ನು ನೀಡಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುತ್ತಿದ್ದಾರೆ ಯೋಜನೆಯ ಮೂಲಕ ಗ್ರಾಮೀಣ ಮಹಿಳೆಯರಲ್ಲಿರುವ ಕೌಶಲ್ಯಕ್ಕೆ ಸಹಕಾರ ನೀಡಿದಂತೆಯೂ ಆಗುತ್ತಿದೆ ಅವರಿಗೆ ಆರ್ಥಿಕ ಬೆನ್ನೆಲುಬಾಗಿ ಮುನ್ನಡೆಯಲು ಅನುಕೂಲ ವಾಗುತ್ತದೆ 2013ರಲ್ಲಿ ಕರ್ನಾಟಕ ಸರ್ಕಾರ ಯೋಜನೆಯನ್ನು ರಾಜ್ಯದಲ್ಲಿ ಆರಂಭಿಸಿತು ಭಾರತ ಸರ್ಕಾರದ ಜನಮುಖಿ ಉಪಯುಕ್ತ ಯೋಜನೆಗಳಲ್ಲಿ ಸಂಘಟನಾತ್ಮಕವಾಗಿ ತೊಡಗಿಕೊಳ್ಳಲು ಯೋಜನೆ ಪರಿಣಾಮಕಾರಿಯಾಗಿ ಮುನ್ನಡೆಯುತ್ತಿದೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಶರಾವತಿ ಕಣಿವೆಯ ದ್ವೀಪದ ಜನರ ಬದುಕಿಗೆ ದಾರಿದೀಪವಾಗುತ್ತದೆ
ಎಂ ಎಲ್.ವೈಶಾಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಮಾತನಾಡಿಭಾರತ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಗ್ರಾಮೀಣ ಜನರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತಿದೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಸುಬುಗಾರಿಕೆ ಮಾಡುವ ಮಹಿಳೆಯರಿಗೆ ಆರ್ಥಿಕ ಸಹಕಾರವನ್ನು ನೀಡಿ ಅವರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ನಿರ್ಮಿಸಿಕೊಡುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದೇವೆ ವಿಶೇಷವಾಗಿ ಪಶ್ಚಿಮ ಘಟ್ಟದ ಶರಾವತಿ ಕಣಿವೆಯ ಮಹಿಳೆಯರು ಯೋಜನೆಯಲ್ಲಿ ಗಟ್ಟಿಯಾಗಿ ನಿಂತು ಯಶಸ್ಸನ್ನು ಕಾಣುತ್ತಿದ್ದಾರೆ
ಚಂದನ ಸಂಜೀವಿನಿ ಯೋಜನೆ ಫಲಾನುಭವಿ ಮಾತನಾಡಿ ಯೋಜನೆಯಿಂದ ರೊಟ್ಟಿ ತಯಾರಿಸುವ ಯಂತ್ರವನ್ನು ನಾನು ಪಡೆದಿದ್ದೇನೆ ನಮ್ಮ ಗುಂಪು ಸಂಘಟನೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಶರಾವತಿ ಕಣಿವೆ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೊಟ್ಟಿ ತಯಾರಿಕೆ ಅಡಿಕೆ ಗಿಡದ ನರ್ಸರಿ ತುಂಬಾ ವ್ಯವಸ್ಥಿತವಾಗಿ ನಡೆಸುತ್ತಿದ್ದೇವೆ ನಾವು ತಯಾರಿಸಿದ ವಸ್ತುಗಳಿಗೆ ಬಹುಬೇಡಿಕೆ ನಿರ್ಮಾಣವಾಗಿದೆ ಕೇಂದ್ರ ಸರ್ಕಾರದ ಸಹಕಾರ ದೊಡ್ಡದು
ಲತಾ ಜೈನ್ ಸಂಜೀವಿನಿ ಯೋಜನೆ ಮೇಲ್ವಿಚಾರಕಿ ಮಾತನಾಡಿ ಸರ್ಕಾರದ ಯೋಜನೆ ಗ್ರಾಮೀಣ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುತ್ತಿದೆ ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ 13 ಲಕ್ಷಕ್ಕೂ ಹೆಚ್ಚಿನ ಹಣವನ್ನು ಇದಕ್ಕೆ ವಿನಿಯೋಗಿಸಿದ್ದೇನೆ ಗ್ರಾಮೀಣ ಪ್ರದೇಶದಲ್ಲಿ ಕಸುಬುಗಾರಿಕೆ ಯಲ್ಲಿ ತೊಡಗಿಕೊಂಡ ಹೆಣ್ಣುಮಕ್ಕಳಿದ್ದಾರೆ ಅವರಿಗೆ ಯೋಜನೆ ತಮ್ಮ ಕಾಯಕವನ್ನು ಮುನ್ನಡೆಸಲು ಪ್ರೋತ್ಸಾಹ ನೀಡಿದಂತಾಗುತ್ತದೆ