ಶಿವಮೊಗ್ಗ, ಜನವರಿ- 22 : ನವದೆಹಲಿಯ ಸಸ್ಯತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರವು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ದೇಸಿಯ/ನಾಟಿ/ಜಾನಪದ ಸಸ್ಯತಳಿ ಸಂಪನ್ಮೂಲಗಳ ಸಂರಕ್ಷಣೆ, ಸುಧಾರಣೆ, ಹೊಸ ತಳಿ ಅಭಿವೃದ್ಧಿ ಮತ್ತು ವಿತರಣೆಯಲ್ಲಿ ಗಣನೀಯ ಕೊಡುಗೆ ನೀಡಿದ ರೈತ ಮತ್ತು ರೈತರ ಸಮುದಾಯಗಳಿಗೆ ನೀಡುವ ರಾಷ್ಟ್ರ ಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ಸಸ್ಯ ಸಂಪನ್ಮೂಲಗಳ ಸಂರಕ್ಷಣಾ ಸಮುದಾಯ ಪ್ರಶಸ್ತಿಯು ತಲಾ ಹತ್ತು ಲಕ್ಷ ರೂ.ಗಳ 5 ಪ್ರಶಸ್ತಿಗಳು ಹಾಗೂ ವೈಯುಕ್ತಿಕ ಸಸ್ಯ ಸಂರಕ್ಷಣಾ ರೈತ ಪ್ರಶಸ್ತಿಯು 1.50 ಲಕ್ಷ ರೂ.ಗಳ 20 ಪ್ರಶಸ್ತಿಗಳನ್ನು ಒಳಗೊಂಡಿವೆ.
ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಉಪನೊಂದಣಾಧಿಕಾರಿಗಳ ಕಚೇರಿ, ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ, ವಿಭಾಗೀಯ ಕಚೇರಿ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣ ಶಿವಮೊಗ್ಗ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಫೆಬ್ರವರಿ-08ರೊಳಗಾಗಿ ಸಲ್ಲಿಸುವಂತೆ ಉಪನೊಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
ಹೆಚ್ಚಿನ ಮಾಹಿತಿಗಾಗಿ ಉಪನೋಂದಣಾಧಿಕಾರಿಗಳ ದೂ.ಸಂ.: 9448940286/ 8722411091 ಗಳನ್ನು ಸಂಪರ್ಕಿಸುವುದು. ಹಾಗೂ ವೆಬ್ಸೈಟ್ www.plantauthority.gov.in ರಲ್ಲಿ ಪಡೆಯುಬಹುದಾಗಿದೆ.