ನವದೆಹಲಿ ಜುಲೈ 27: ಭಾರತ ಮಾಲಾ ಯೋಜನೆಯ ಅಡಿಯಲ್ಲಿ ಮಂತ್ರಾಲಯಕ್ಕೆ ಸಂಪರ್ಕ ನೀಡುವ ರಾಯಚೂರು ನಗರದ ವಾಯುವ್ಯ ಭಾಗದ ರಾಜ್ಯ ಹೆದ್ದಾರಿ 20 ಮತ್ತುರಾಷ್ಟ್ರೀಯ ಹೆದ್ದಾರಿ – 167 ರ ಬೈ ಪಾಸ್ ನ್ನು, ನಗರದ ನೈರುತ್ಯ ಭಾಗಕ್ಕೆ ವರ್ಗಾಯಿಸುವಂತೆ ಮಾನ್ಯ ಲೋ ಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ನೇತೃತ್ವದ ತಂಡ ಇಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ಇಂದು ಮನವಿ ಸಲ್ಲಿಸಿತು.
ನವದೆಹಲಿಯಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ರಾಯಚೂರಿನ ಕಾಂಗ್ರೆಸ್ ಮುಖಂಡರಾದ ರವಿ ಭೋಸರಾಜ್ ಸೇರಿದಂತೆ ಹಲವರು ಪಾಲ್ಗೊ0ಡಿದ್ದರು.
ದೇಶದ ಉತ್ತರ ಮತ್ತು ದಕ್ಷಿಣ ಭಾಗವನ್ನು ಒಂದು ಗೂಡಿಸುವ “ಭಾರಮಾಲಾ”ಯೋಜನೆಯಡಿಯಲ್ಲಿ ಏಕರೂಪ ಚತುಸ್ಪಥ ಹೆದ್ದಾರಿ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿಯಲ್ಲಿಯೇ ನಗರದ ವಾಯುವ್ಯ ಭಾಗದಲ್ಲಿನಿರ್ಮಿಸಲು ಯೋಜಿಸ ಲಾಗಿರುವ ಬೈ
ಪಾಸ್ ರಸ್ತೆಯನ್ನು ನಗರದ ನೈರುತ್ಯ ಭಾಗಕ್ಕೆ ವರ್ಗಾಯಿಸುವಂತೆ ಕೇಂದ್ರ ಭೂ ಸಾರಿಗೆ ಮತ್ತುಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿ ಚರ್ಚಿಸಲಾಯಿತು.
ಭೇಟಿಯ ನಂತರ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ, ಎಲ್ಲಾ ಋತುಮಾನ ರಸ್ತೆಯಿಂದ ರಾಯಚೂರಿನ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೇ, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಟಿಸುವ
ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಪುಷ್ಠಿನೀಡಲಿದೆ. ಚರ್ಚೆಯ ವೇಳೆಈಯೋಜನೆಗೆ ಸಂಬಂಧಿಸಿದಂತೆ ಅಗತ್ಯವಿರುವ 548 ಕೋಟಿ
ರೂಪಾಯಿಗಳ ಅನುದಾನವನ್ನು ನೀಡಲು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸರಕಾರ ರಾಯಚೂರು ಜಿಲ್ಲೆಯಲ್ಲಿ
ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಆರ್ಥಿಕ ಪ್ರಗತಿಗೆ ಎಲ್ಲಾಪ್ರಯತ್ನಗಳನ್ನು ಮಾಡುತ್ತಿದೆ. ರಾಯಚೂರು ಮೂಲಕ
ಹಾದು ಹೋ ಗುವ ಪಣಜಿ-ಬೆಳಗಾವಿ-ಹೈದ್ರಾಬಾದ್ ನ ‘ಭಾರತಮಾಲಾ’ ಯೋಜನೆಯ ಈ ಹೆದ್ದಾರಿಯಿಂದ ಸರಕು ಸಾಗಾಟ,
ವ್ಯವಹಾರ- ವಹಿವಾಟು ಮೂಲಕ ದೇಶದ ಅರ್ಥಿಕ ವ್ಯವಸ್ತೆಯನ್ನು ಸಧೃಡಗೊ ಳಿಸಲಿದೆ ಎಂದು ಹೇಳಿದರು.
ಭೇಟಿಯ ನಂತರ ರಾಯಚೂರಿನ ಕಾಂಗ್ರೆಸ್ ಮುಖಂಡರಾದ ರವಿ ಭೋ ಸರಾಜ್ ಮಾತನಾಡಿ, ಅತಿ ಶೀಘ್ರದಲ್ಲಿಈ ಹೆಚ್ಚುವರಿ
ಕಾಮಗಾರಿ ಅನುಮೊದೀಸಿ ಆರಂಭಿಸುವುದಾಗಿ ತಿಳಿಸಿದ್ದಾರೆ. ಈ ಹೆದ್ದಾರಿ ಲೋ ಕಾರ್ಪಣೆಯಿಂದ ರಾಯಚೂರು ಜನರಿಗೆ
ಅನುಕೂಲವಾಗಲಿ ಎಂಬುದೇ ನಮ್ಮ ಆಶಯ ಎಂದು ಹೇಳಿದರು.