ಪ್ರಸ್ತುತ ಕೃಷಿ ಕ್ಷೇತ್ರದತ್ತ ಮಹಿಳೆಯರ ಒಲವು ಹೆಚ್ಚಳ- ಪದ್ಮಶ್ರೀ ಡಾ.ವಿ ಪ್ರಕಾಶ್

ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಕೃಷಿ ಸಲಹೆ ಜಾರಿ ಇಡುವ ದೃಷ್ಟಿಯಿಂದ “ಅಗ್ರಿವಾರ್ ರೂಂ” ಪುನಃ ಆರಂಭಿಸಲಾಗಿದೆ. ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಏಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಆಯಾ ಜಿಲ್ಲೆಯ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಜೊತೆಗೆ ಸರ್ಕಾರದ ನಿರ್ದೇಶನದಂತೆ ಪ್ರತಿಶತ 50% ಸಿಬ್ಬಂದಿಯೊಂದಿಗೆ ವಿಶ್ವವಿದ್ಯಾಲಯದ ಎಲ್ಲಾ ಚಟುವಟಿಕೆಗಳು ಎಂದಿನಂತೆ ಜಾರಿ ಇರುತ್ತದೆ.

ಕೋವಿಡ್-19 ರ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಸೇವೆ ಪಡೆದುಕೊಳ್ಳಬಹುದು. ರೈತರು ತಮ್ಮ ಸಮಸ್ಯೆಗಳ ಛಾಯಾಚಿತ್ರ, ವಿಡೀಯೋ ಕಳಿಸಿ ಮಾರ್ಗದರ್ಶನ ಪಡೆಯಬಹುದು, ಅಗತ್ಯ ಮಾಹಿತಿಗಾಗಿ ಆಯಾ ಜಿಲ್ಲೆಯ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಆನ್ ಲೈನ್ ಮೂಲಕ ಸಹ ಛಾಯಾಚಿತ್ರ ಪ್ರಶ್ನೆ ಕಳಿಸಬಹುದು. ಭೇಟಿಯು ಅನಿವಾರ್ಯವಾಗಿದ್ದಲ್ಲಿ ಕೋವಿಡ್-19ರ ಮಾರ್ಗಸೂಚಿಗಳನ್ನು ಪಾಲಿಸಿ ಕೇಂದ್ರಗಳಿಗೆ ಭೇಟಿ ನೀಡಬಹುದು.

ನೋಡಲ್ ಅಧಿಕಾರಿ ದೂರವಾಣಿ ಸಂಖ‍್ಯೆ ಮಿಂಚಂಚೆ

  1. ಮುಖ್ಯಸ್ಥರು
    ಕೃಷಿ ವಿಜ್ಞಾನ ಕೇಂದ್ರ., ಶಿವಮೊಗ್ಗ 94808 38976 shimogakvk@gmail.com
  2. ಮುಖ್ಯಸ್ಥರು
    ಕೃಷಿ ವಿಜ್ಞಾನ ಕೇಂದ್ರ, ಚಿತ್ರದುರ್ಗ 94808 38201kvkchitradurgahyr@gmail.com
  3. ಮುಖ್ಯಸ್ಥರು
    ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ 94808 38203 kvkmudigere@gmail.com
  4. ಮುಖ್ಯಸ್ಥರು
    ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ 94808 38202 udupikvk@gmail.com
  5. ಮುಖ್ಯಸ್ಥರು
    ತರಳಬಾಳು ಕೃಷಿ ವಿಜ್ಞಾನ ಕೇಂದ್ರ,
    ದಾವಣಗೆರೆ 94498 56876 dvgtkvk@yahoo.com
  6. ಮುಖ್ಯಸ್ಥರು
    ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು 87947 06468 kvkdk@rediffmail.com
  7. ಮುಖ್ಯಸ್ಥರು
    ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲ್ (ಕೊಡಗು ಜಿಲ್ಲೆ) 99450 35707 kvkg.iihr@icar.gov.in

ಕೃಷಿ ಕಾರ್ಯಗಳು ಸಾಗಲೇ ಬೇಕಾಗಿರುವುದರಿಂದ ಕೋವಿಡ್ ಸಾಂಕ್ರಾಮಿಕ ಮಹಾಮಾರಿಯ ಮಧ್ಯೆಯೂ ಈ ವ್ಯವಸ್ಥೆಗಳು ಜಾರಿ ಇರುವಂತೆ ನೋಡಿಕೊಳ್ಳಲಾಗಿದೆ. ಈ ಮೂಲಕ ರೈತರೂ ಸಹ ತಮ್ಮ ಚಟುವಟಿಕೆ ಸಂದರ್ಭದಲ್ಲಿಗಳಲ್ಲಿ ಸದಾ ಜಾಗರೂಕರಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಾ ತಮ್ಮ ಆರೋಗ್ಯ ಕಾಳಜಿಯೊಂದಿಗೆ ಕಾರ್ಯನಿರ್ವಹಿಸಲು ಕೋರಲಾಗಿದೆ. ಇಂತಹ ವಿಷಮ ಸಂದರ್ಭದಲ್ಲೂ ದೇಶದ ಅನ್ನ ಭದ್ರತೆಯನ್ನು ಕಾಪಾಡುವ ಸೈನಿಕರಂತೆ ಕಾರ್ಯಮಾಡುವ ನಮ್ಮ ರೈತರ ಸೇವೆಯನ್ನು ಸಕಲರೂ ಗೌರವಿಸಿ ಅವರ ಸೇವೆಗೆ ಸಾರ್ವಜನಿಕರು ಬೆಂಬಲವಾಗಿ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

error: Content is protected !!