ತಂದೆಯ ಅಕಾಲಿಕ ಮರಣ ಶ್ರೀ ಕಿಶನ್ ರವರಿಗೆ ಬರ ಸಿಡಿಲಿನಂತಾಯತು ನಂತರ ತನ್ನ ವಿದ್ಯಾಭ್ಯಾಸ ಹಾಗು ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಯಿತು. ಈ ಬಗ್ಗೆ ಆಲೋಚನೆ ಮಾಡುತ್ತಿರುವಾಗ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾದ “ಸೇವಾ ಸಿಂಧು” ಕೇಂದ್ರವನ್ನು ತೆರೆಯಲು ಆಫತ್ಬಾಂಧವರಂತೆ ದಾರಿ ತೋರಿಸಿದವರು ತಬ್ರೇಜ್.
ಕಿಶನ್ ರವರು ತನ್ನ ಹಿತೈಷಿಯ ಸಲಹೆಯಂತೆ ಶಿವಮೊಗ್ಗ ನಗರದಲ್ಲಿ ಕಾಮನ್ ಸರ್ವಿಸ್ ಸೆಂಟರ್ ‘ಸೇವಾ ಸಿಂಧು’ ತೆರೆದು ತನ್ನ ವಿದ್ಯಾಭ್ಯಾಸ ಹಾಗು ಕುಟುಂಬದ ನಿರ್ವಹಣೆ ನಡೆಸಲು ಮುಂದಾದರು. ಕಳೆದ 8 ತಿಂಗಳುಗಳಿಂದ ‘ಸೇವಾ ಸಿಂಧು’ ನಡೆಸುತ್ತಿರುವ ಉತ್ತಮವಾದ ಸೇವೆಯನ್ನು ನೀಡುತ್ತಿದ್ದಾರೆ.
“ಸೇವಾ ಸಿಂಧು” ಕೇಂದ್ರ ಹಾಗು ರಾಜ್ಯ ಸರಕಾರದ ಯೋಜನೆಯಾಗಿದ್ದು, ಸಮಗ್ರ ಸರ್ಕಾರದ ಇಲಾಖೆಗಳ ಸೇವೆಗಳನ್ನು ವಿವಿಧ ಮಾರ್ಗಗಳಿಂದ ಸಮಸ್ತ ನಗರಿಕರಿಗೆ ಒದಗಿಸುವ ಕೆಲಸವನ್ನು ಮಾಡುತ್ತಿದೆ. ಸರ್ಕಾರದ ಸೇವೆಗಳು ನಗದುರಹಿತ,ಕಾಗದ ರಹಿತ, ವಿಧಾನವನ್ನು ಜಾರಿ ಗೊಳಿಸಲು ಈ ಯೋಜನೆಯ ಮುಖ್ಯ ಗುರಿಯಾಗಿರುತ್ತದೆ. ಈ ಯೋಜನೆಯು ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ವಾಸ್ತವಿಕವಾಗಿ ಪಾರದರ್ಶಕವಾಗಿ ಒದಗಿಸುವ ಹೊಣೆಗಾರಿಕೆಯನ್ನು ಹೊತ್ತಿದೆ.

ಕಿಶನ್ ರವರ ಜಾಣ್ಮೆ ಅವಿರತ ಶ್ರಮದಿಂದ ಇಂದು ದೇಶದಲ್ಲಿ 2ನೇ ಸ್ತಾನ ಮತ್ತು ಕರ್ನಾಟಕಕ್ಕೆ ನಂಬರ್ 1 ವಿಮೆ ಸಂಗ್ರಹಿಸಿದ ಹಿರಿಮೆಗೆ ಪಾತ್ರವಾಗಿದ್ದಾರೆ. ಹಾಗು ತಮ್ಮ ಸ್ವಂತ ಉದ್ದಿಮೆಯಿಂದ ತನ್ನ ವಿದ್ಯಾಭ್ಯಾಸ ಹಾಗು ಕುಟುಂಬ ನಿರ್ವಹಣೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

     ನ್ಯೂಸ್ ನೆಕ್ಷ್ಟ್ ನೊಂದಿಗೆ ಮಾತನಾಡಿದ ಶ್ರೀ ಕಿಶನ್ ಕಾಮನ್ ಸರ್ವಿಸ್ ಸೆಂಟರ್ ನನ್ನ ಜೀವನದಲ್ಲಿ ತಿರುವು ಕೊಟ್ಟಂತಹ ಸೇವೆ ,ಈ ಸೇವೆಯಿಂದ ನನಗೆ ನೆಮ್ಮದಿ ಖುಷಿ ಇದೆ ಹಾಗು ವಿದ್ಯಾಬ್ಯಾಸ ಮುಂದುವರೆಸಲು ಕುಟುಂಬವನ್ನು ನಿರ್ವಹಣೆ ಮಾಡಲು ಅನುಕೂಲವಾಯಿತು.ನನ್ನ ಆರ್ಥಿಕ ಸಂಕಷ್ಟ ದೂರವಾಗಿದೆ. ಎಂದು ಹೇಳುತ್ತಾರೆ

.
ನ್ಯೂಸ್ ನೆಕ್ಷ್ಟ್ ನೊಂದಿಗೆ ಮಾತನಾಡಿದ ಕಿರಣ್, ಜಿಲ್ಲಾ ವ್ಯವಸ್ತಾಪಕರು, ಕಾಮನ್ ಸರ್ವಿಸ್ ಸೆಂಟರ್, ಶಿವಮೊಗ್ಗ. ಶ್ರೀ ಕಿಶನ್ ಅವರು ವಿದ್ಯಾರ್ಥಿಯಾಗಿದ್ದುಕೊಂಡು ಸೇವಾ ಸಿಂಧು ಕೆಂದ್ರವನ್ನು ಫ್ರಾರಂಭಿಸಿ ಅದರಿಂದ ತನ್ನ ಕುಟುಂಬ ಹಾಗು ವಿದ್ಯಾಭ್ಯಾಸವನ್ನು ಮುನ್ನಡೆಸಿ, ಯಶಸ್ಸನ್ನು ಗಳಿಸಬಹುದೆಂಬುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿರುವುದು ಹಾಗು ನಮ್ಮ ಶಿವಮೊಗ್ಗ ಜಿಲ್ಲೆ ಹಾಗು ಕರ್ನಾಟಕದ ಹೆಸರನ್ನು ಇಡೀ ದೇಶವೇ ನೋಡುವಂತಾಗಿದೆ ಎನ್ನುತ್ತಾರೆ.

error: Content is protected !!