ಶಿವಮೊಗ್ಗ : ಮಳೆನೀರಿನ ಕೊಯ್ಲುನಿಂದ ಪರಿಸರಕ್ಕೆ ಆಗುವ ಅನುಕೂಲಗಳು.ಈಗಿನ ಯುವಕರು/ಯುವತಿಯರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರಿಸಬೇಕು, ಮಳೆನೀರು ಕೊಯ್ಲು ಪದ್ಧತಿಯನ್ನು ಪ್ರತಿ ಮನೆಯಲ್ಲೂ ಅಳವಡಿಸಿಕೊಂಡರೆ ಆಗುವ ಪ್ರಯೋಜನಗಳ ಬಗ್ಗೆ. ಹಾಗೂ ಯುವಜನರಿಗೆ ಪರಿಸರ ಸಂರಕ್ಷಣೆ ನಿಮ್ಮೆಲ್ಲರ ಕರ್ತವ್ಯ ಎಂದು ಶಾಸಕರಾದ ಚನ್ನಬಸಪ್ಪ (ಚೆನ್ನಿ) ಹೇಳಿದರು.
ಅವರು ಭಾರತ ಸರ್ಕಾರ,ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ,ಶಿವಮೊಗ್ಗ, ಸಹ್ಯಾದ್ರಿ ವಿಜ್ಞಾನ ಕಾಲೇಜು,ರಾಷ್ಟ್ರೀಯ ಸೇವಾ ಯೋಜನೆ,ಶಿವಮೊಗ್ಗ ಹಾಗೂ ಜಾಗೃತಿ ಯುವಕ ಸಂಘ,ಶಿವಮೊಗ್ಗ ಇವರು ಸಂಯುಕ್ತಾಶ್ರಯದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪಾಥ್ವೇಸ್ ಸಭಾಂಗಣದಲ್ಲಿ “ಮಳೆನೀರು ಸಂರಕ್ಷಣೆ ಮತ್ತು ಜಿಲ್ಲಾ ಮಟ್ಟದ ರಸಪ್ರಶ್ನೆ ಮತ್ತು ಚಿತ್ರಕಲಾ ಸ್ಪರ್ಧಾ “ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ.ವಿ.ಕಾ.ಪ್ರಾಚಾರ್ಯರಾದ ಪ್ರೊ.ರಾಜೇಶ್ವರಿ ಎನ್. ವಹಿಸಿ ಮಾತನಾಡುತ್ತ ಮಳೆ ನೀರನ್ನು ಹೇಗೆ ಸಂರಕ್ಷಣೆ ಮಾಡಬೇಕು, ಕಾಲೇಜಿನಲ್ಲಿ ಮಳೆನೀರು ಕೊಯ್ಲುನ್ನು ಹೇಗೆ ಅಳವಡಿಸಬೇಕು ಇದರ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಪಂಚಾಯಿತಿ ಸಿ.ಇ.ಓ ಮಲ್ಲಪ್ಪ ಕೆ. ತೊಡಲಗಬಗಿ ಮಾತನಾಡತ್ತು ಜಾತಿ, ಧರ್ಮ ಎಲ್ಲವುಗಳಿಗಿಂತ ಅತಿಮುಖ್ಯ ಗಿಡ-ಮರಗಳು ಇವುಗಳ ಉಳಿಗೆ ನಾವು ಎಲ್ಲಾರು ಒಂದಾಗಿ ನಮ್ಮ ಜವಬ್ದಾರಿಗಳನ್ನು ನಿರ್ವಹಿಸಬೇಕು ಎಂದರು.
ಮರುಭೂಮಿಯಂತಹ ಪ್ರದೇಶಗಳಲ್ಲಿ ಮಳೆನೀರು ಕೊಯ್ಲು ಪದ್ಧತಿಯನ್ನು ಹೇಗೆ ಅಳವಡಿಸಿಕೊಂಡಿರುವುದರ ಬಗ್ಗೆ ಮಾಹಿತಿ ನೀಡಿದರು.
ಸಂದರ್ಭದಲ್ಲಿನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಯಾದ ಉಲ್ಲಾಸ್, ಕಾರ್ಯಕ್ರಮ ಸಂಯೋಜನಾಧಿ ಕಾರಿಯಾದ ಡಾ. ನಾಗರಾಜ, ಎನ್. ಎಸ್. ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ನಾಗಾರ್ಜುನ್, ಕಾಲೇಜಿನ ಸಿಬ್ಬಂದಿ ವರ್ಗದವರು, ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧ ಕಾಲೇಜಿನಿಂದ ಆಗಮಿಸಿದ್ದ ಸ್ಪರ್ಧಿಗಳು, ಕಾಲೇಜು ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರದ ಕಾರ್ಯಕರ್ತರು ಉಪಸ್ಥಿತರಿದ್ದರು.
ರಸ ಪ್ರಶ್ನೆ/ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಆಕರ್ಷಕ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
