ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಮೂಲಕ ಯುಗಾದಿ ಹಬ್ಬದ ಸಂಧಬ೯ದಲ್ಲಿ “ಯುಗಾದಿ ಎಲೆಕ್ಷನ್ ಟ್ಯಾಲೆಂಟ್ ಹಂಟ್” ಎನ್ನುವ ವಿಷೇಷ ಕಾಯ೯ಕ್ರಮವನ್ನು ಚುನಾವಣೆಯ ಮತ್ತು ಮತದಾನದ ಜಾಗೃತಿಗಾಗಿ ಆಯೋಜನೆ ಮಾಡಲಾಗುತ್ತಿದೆ.
ದಿನಾಂಕ ೭.೦೪.೨೦೧೯ ರಂದು ಸಂಜೆ ೪ ರಿಂದ ೯ ಗಂಟೆಯವರೆಗೆ ಶಿವಮೊಗ್ಗ ನಗರದ ಮಹಾತ್ಮ ಗಾಂಧಿ ಪಾಕ೯ನಲ್ಲಿ ಈ ಕಾಯ೯ಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಕಾಯ೯ಕ್ರಮವು ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿದ್ದು, ಶಿವಮೊಗ್ಗ ಜಿಲ್ಲೆಯ ನಾಗರಿಕರು ಯಾವುದೇ ವಯಸ್ಸಿನ ಅಂತರವಿಲ್ಲದೇ ಭಾಗವಹಿಸಬಹುದಾಗಿದ್ದು ಕೇವಲ ಒಂದೇ ನಿಮಿಷದಲ್ಲಿ ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಬೇಕಾಗುತ್ತದೆ.
ಸೂಚನೆಗಳು:
೧.ಕಾಯ೯ಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗಳು ರಾಜಕೀಯ ಪಕ್ಷದ ವಿಷಯ
ಅಥವಾ ವ್ಯಕ್ತಿಯ ಕುರಿತಾಗಿ ಪ್ರದಶ೯ನವನ್ನು ಮಾಡುವಂತಿಲ್ಲ.
೨.ಈಸ್ಪಧೆ೯ಯಲ್ಲಿ ಸ್ಪಧಾ೯ಳುಗಳು ಏಕವ್ಯಕ್ತಿ ಅಥವಾ ಸಾಮೂಹಿಕಪ್ರದಶ೯ನವನ್ನು ನೀಡಬಹುದಾಗಿದೆ.
೩.ಸ್ಪಧೆ೯ಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರವನ್ನು ವಿತರಿಸಲಾಗುತ್ತದೆ.
೪.ಒಟ್ಟು ಎಲ್ಲಾ ಸ್ಪಧೆ೯ಗಳನ್ನು ಒಳಗೊಂಡಂತೆ ತೀಪು೯ ನೀಡಿ ಅದರಲ್ಲಿ ಪ್ರಥಮ ದ್ವಿತೀಯ ಹಾಗು ತೃತೀಯ ನಗದು ಬಹುಮಾನಗಳನ್ನು ನೀಡಲಾಗುತ್ತದೆ.
೫.ತೀಪು೯ಗಾರರ ತೀಮಾ೯ನವೇ ಅಂತಿಮ ಅಂತಿಮವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರನ್ನು ನೋಂದಾಯಿಸಲು ೯೯೪೫೩೮೭೬೫೦/೮೧೯೭೧೭೬೭೧೦